Bigg Boss Kannada OTT Finale: ಸಾನ್ಯಾ ಅಯ್ಯರ್​ಗೆ ಸಾನ್ಯಾ ಶೆಟ್ಟಿ ಅಂತ ಕರೆದರೆ ಆಹಾ ಎಷ್ಟೊಂದು ಖುಷಿ; ಇಲ್ಲಿದೆ ವಿಡಿಯೋ ಸಾಕ್ಷಿ

Sanya Iyer | Roopesh Shetty: ರೂಪೇಶ್​ ಶೆಟ್ಟಿ ಅವರನ್ನು ಸಾನ್ಯಾ ಐಯ್ಯರ್​ ಅವರು ರೂಪಿ ಎಂದು ಕರೆದರು. ಅದು ಕಿಚ್ಚ ಸುದೀಪ್​ ಅವರ ಗಮನ ಸೆಳೆಯಿತು. ಫಿನಾಲೆ ವೇದಿಕೆಯಲ್ಲಿ ಆ ಬಗ್ಗೆ ಚರ್ಚೆ ನಡೆಯಿತು.

Bigg Boss Kannada OTT Finale: ಸಾನ್ಯಾ ಅಯ್ಯರ್​ಗೆ ಸಾನ್ಯಾ ಶೆಟ್ಟಿ ಅಂತ ಕರೆದರೆ ಆಹಾ ಎಷ್ಟೊಂದು ಖುಷಿ; ಇಲ್ಲಿದೆ ವಿಡಿಯೋ ಸಾಕ್ಷಿ
ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್
TV9kannada Web Team

| Edited By: Madan Kumar

Sep 16, 2022 | 6:33 PM

ಬಿಗ್​ ಬಾಸ್​ ಎಂದರೆ ಬರಿ ಆಟ ಅಲ್ಲ. ದೊಡ್ಮನೆಯಲ್ಲಿ ಭರಪೂರ ಭಾವನೆಗಳಿಗೂ ಜಾಗ ಇದೆ. ಅನೇಕ ಸ್ಪರ್ಧಿಗಳಿಗೆ ಪ್ರೀತಿ ಚಿಗುರಿದ ಉದಾಹರಣೆ ಸಾಕಷ್ಟಿದೆ. ಅಲ್ಲಿ ಸ್ಪರ್ಧಿಸಿದ ಬಳಿಕ ಮದುವೆ ಆದವರೂ ಇದ್ದಾರೆ. ಇದೇ ಮೊದಲ ಬಾರಿಗೆ ಒಟಿಟಿಯಲ್ಲಿ ಕನ್ನಡದ ಬಿಗ್​ ಬಾಸ್​ (Bigg Boss Kannada OTT) ಕಾರ್ಯಕ್ರಮ ನಡೆದಿದೆ. ಈ ಸೀಸನ್​ನಲ್ಲಿ ಒಟ್ಟು 16 ಸ್ಪರ್ಧಿಗಳು ಎಂಟ್ರಿ ಪಡೆದುಕೊಂಡಿದ್ದರು. ಅಂತಿಮವಾಗಿ 8 ಜನರು ಫಿನಾಲೆ ವಾರದವರೆಗೂ ಬಂದರು. ಆ ಪೈಕಿ ಕೆಲವರ ನಡುವೆ ಅತಿ ಹೆಚ್ಚು ಸ್ನೇಹ-ಸಲುಗೆ ಬೆಳೆಯಿತು. ರೂಪೇಶ್​ ಶೆಟ್ಟಿ ಅವರು ಸಾನ್ಯಾ ಐಯ್ಯರ್​ (Sanya Iyer) ಜೊತೆ ಹೆಚ್ಚು ಆತ್ಮೀಯವಾಗಿ ನಡೆದುಕೊಂಡರು. ಇದೇ ವಿಚಾರದ ಬಗ್ಗೆ ಬಿಗ್ ಬಾಸ್​ ಕನ್ನಡ ಒಟಿಟಿ ಫಿನಾಲೆಯಲ್ಲೂ ಚರ್ಚೆ ಆಗಿದೆ. ಸಾನ್ಯಾಗೆ ರೂಪೇಶ್ ಶೆಟ್ಟಿ (Roopesh Shetty) ಅವರು ಸಾನ್ಯಾ ಶೆಟ್ಟಿ ಎಂದು ಕರೆದಿದ್ದರು ಎಂಬುದು ಗೊತ್ತಾಗಿದೆ.

ಕಿಚ್ಚ ಸುದೀಪ್​ ಅವರು ಬಿಗ್​ ಬಾಸ್​ ಕಾರ್ಯಕ್ರಮವನ್ನು ತುಂಬ ಲವಲವಿಕೆಯಿಂದ ನಡೆಸಿಕೊಡುತ್ತಾರೆ. ಟಿವಿಯಲ್ಲಿ ಸತತವಾಗಿ 8 ಸೀಸನ್​ಗಳನ್ನು ನಡೆಸಿಕೊಟ್ಟ ಅನುಭವ ಅವರಿಗೆ ಇದೆ. ಒಟಿಟಿ ಸೀಸನ್​ ಕೂಡ ಅವರ ನಿರೂಪಣೆಯಲ್ಲೇ ಯಶಸ್ವಿಯಾಗಿ ಮೂಡಿಬಂದಿದೆ. ಇಂದು (ಸೆ.16) ಇದರ ಫಿನಾಲೆ ಸಂಚಿಕೆ ಪ್ರಸಾರ ಆಗಿದೆ. ಈ ವೇಳೆ ರೂಪೇಶ್​ ಶೆಟ್ಟಿ ಅವರನ್ನು ಸಾನ್ಯಾ ಐಯ್ಯರ್​ ಅವರು ರೂಪಿ ಎಂದು ಕರೆದರು. ಅದು ಸುದೀಪ್​ ಅವರ ಗಮನ ಸೆಳೆಯಿತು.

‘ಕೊನೇ ದಿನದ ರಾತ್ರಿ ನಿದ್ರೆ ಬಂತಾ’ ಎಂದು ಸುದೀಪ್​ ಕೇಳಿದರು. ‘ಕೊನೆಯಲ್ಲಿ ಮಲಗಿದ್ದು ನಾನು ಮತ್ತು ರೂಪಿ’ ಎಂದು ಸಾನ್ಯಾ ಹೇಳಿದರು. ‘ರೂಪಿ ಎಂದರೆ ಯಾರು’ ಎಂದು ಪ್ರಶ್ನೆ ಕಿಚ್ಚನ ಕಡೆಯಿಂದ ಬಂತು. ‘ರೂಪಿ ಎಂದರೆ ರೂಪೇಶ್’ ಎಂದರು ಸಾನ್ಯಾ. ‘ಅವರು ನಿಮಗೆ ಏನಂಥ ಕರೆದರೆ ಇಷ್ಟ’ ಎಂದು ಸಾನ್ಯಾಗೆ ಸುದೀಪ್​ ಪ್ರಶ್ನಿಸಿದರು. ‘ಸಾನ್ಯಾ ಶೆಟ್ಟಿ ಅಂತ ಬಂತು ಸರ್​. ಅದು ನನಗೆ ಸಖತ್​ ಇಷ್ಟ ಆಯ್ತು’ ಎಂದು ಸಾನ್ಯಾ ಅವರು ನೇರವಾಗಿ ಹೇಳಿದ್ದಾರೆ. ‘ನಾನು ಇಲ್ಲಿ ಏನೋ ಬೇರೆ ಪ್ರೊಫೆಷನ್​ ಶುರು ಮಾಡಿದ್ದೇನೆ ಎಂಬ ಫೀಲಿಂಗ್​ ಬರುತ್ತಿದೆ’ ಎಂದು ಸುದೀಪ್​ ಕೇಳಿದ್ದು ಕೇಳಿ ಎಲ್ಲರೂ ನಕ್ಕಿದ್ದಾರೆ.

ಫಿನಾಲೆ ವಾರದವರೆಗೂ ಬಂದ ಸೋನು ಶ್ರೀನಿವಾಸ್​ ಗೌಡ ಮತ್ತು ರಾಕೇಶ್​ ಅಡಿಗ ನಡುವೆಯೂ ಅದೇ ರೀತಿಯ ಆತ್ಮೀಯತೆ ಇತ್ತು. ಬಿಗ್​ ಬಾಸ್​ ಮನೆಯಲ್ಲಿ ಹೆಚ್ಚು ಕಾಲ ಅವರಿಬ್ಬರು ಜೊತೆಯಾಗಿ ಇರುತ್ತಿದ್ದರು.

ಇದನ್ನೂ ಓದಿ

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada