Bigg Boss Kannada OTT Finale: ‘ಇಂದು ಕೆಲವರಿಗೆ ಹಾರ್ಟ್​ಬ್ರೇಕ್ ಆಗಲಿದೆ’: ಬಿಗ್​ ಬಾಸ್​ ಒಟಿಟಿ ಫಿನಾಲೆಯಲ್ಲಿ ಕಿಚ್ಚನ ಎಚ್ಚರಿಕೆ ಮಾತು

Bigg Boss Kannada OTT: ಇಂದು (ಸೆ.16) ಸಂಜೆ 7 ಗಂಟೆಗೆ ವೂಟ್​ ಸೆಲೆಕ್ಟ್​ನಲ್ಲಿ ‘ಬಿಗ್​ ಬಾಸ್​ ಒಟಿಟಿ ಕನ್ನಡ’ ಫಿನಾಲೆ ಸಂಚಿಕೆ ಪ್ರಸಾರ ಆಗಲಿದೆ. ಕಿಚ್ಚ ಸುದೀಪ್​ ಅವರ ನಿರೂಪಣೆ ನೋಡಲು ಫ್ಯಾನ್ಸ್​ ಕಾದಿದ್ದಾರೆ.

Bigg Boss Kannada OTT Finale: ‘ಇಂದು ಕೆಲವರಿಗೆ ಹಾರ್ಟ್​ಬ್ರೇಕ್ ಆಗಲಿದೆ’: ಬಿಗ್​ ಬಾಸ್​ ಒಟಿಟಿ ಫಿನಾಲೆಯಲ್ಲಿ ಕಿಚ್ಚನ ಎಚ್ಚರಿಕೆ ಮಾತು
ಬಿಗ್ ಬಾಸ್ ಕನ್ನಡ ಒಟಿಟಿ ಫಿನಾಲೆ
Follow us
TV9 Web
| Updated By: ಮದನ್​ ಕುಮಾರ್​

Updated on:Sep 16, 2022 | 5:55 PM

ಆರು ವಾರಗಳ ಕಾಲ ನಡೆದುಕೊಂಡು ಬಂದ ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಮೊದಲ ಸೀಸನ್​ಗೆ ಈಗ ತೆರೆ ಬೀಳುವ ಸಮಯ ಬಂದಿದೆ. ಇಂದು (ಸೆ.16) ಈ ಶೋ ಫಿನಾಲೆ (Bigg Boss Finale) ನಡೆಯಲಿದೆ. ಈಗಾಗಲೇ ಕಿಚ್ಚ ಸುದೀಪ್​ ಅವರು ಈ ಸ್ಪೆಷಲ್​ ಸಂಚಿಕೆಯ ಶೂಟಿಂಗ್​ನಲ್ಲಿ ಭಾಗವಹಿಸಿದ್ದಾರೆ. ಅದರ ಪ್ರೋಮೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ವಿಶೇಷ ಗೆಟಪ್​ನಲ್ಲಿ ಬಂದು ಸುದೀಪ್​ (Kichcha Sudeep) ಅವರು ವೇದಿಕೆ ಏರಿದ್ದಾರೆ. ‘ಒಟಿಟಿ ಸೀಸನ್​ನ ಕೊನೇ ದಿನ. ಮನೆಯಲ್ಲಿ ಇನ್ನೂ 8 ಜನ ಇದ್ದಾರೆ. ಆದರೆ ಟೆಲಿವಿಷನ್​ ಸೀಸನ್​ನಲ್ಲಿ ಜಾಗ ಇರುವುದು 4 ಜನರಿಗೆ ಮಾತ್ರ’ ಎಂದು ಕಿಚ್ಚ ಸುದೀಪ್​ ಹೇಳಿದ್ದಾರೆ.

ಒಟ್ಟು 16 ಜನರು ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋಗೆ ಎಂಟ್ರಿ ಪಡೆದಿದ್ದರು. ಕೊನೇ ವಾರದಲ್ಲಿ ಕೇವಲ 8 ಜನರ ನಡುವೆ ಸ್ಪರ್ಧೆ ನಡೆಯಿತು. ಜಶ್ವಂತ್​ ಬೋಪಣ್ಣ, ಸಾನ್ಯಾ ಅಯ್ಯರ್​, ರೂಪೇಶ್​ ಶೆಟ್ಟಿ, ರಾಕೇಶ್​ ಅಡಿಗ, ಸೋನು ಶ್ರೀನಿವಾಸ್​ ಗೌಡ, ಆರ್ಯವರ್ಧನ್​ ಗುರೂಜಿ, ಜಯಶ್ರೀ ಆರಾಧ್ಯ, ಸೋಮಣ್ಣ ಮಾಚಿಮಾಡ ಅವರು ಫಿನಾಲೆ ವಾರ ತಲುಪಿದ್ದಾರೆ. ಇವರ ಪೈಕಿ ಯಾರಿಗೆ ಟಿವಿ ಸೀಸನ್​ ಪ್ರವೇಶಿಸುವ ಚಾನ್ಸ್​ ಸಿಗಲಿದೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ
Image
ದೊಡ್ಮನೆಯಲ್ಲಿ ಎದೆ ಬಡಿದುಕೊಂಡು ಅತ್ತ ಜಯಶ್ರೀ; ಬಿಗ್​ ಬಾಸ್​ ಶೋನಲ್ಲಿ ಅಂಥದ್ದೇನಾಯ್ತು?
Image
BBK: ಬಿಗ್​ ಬಾಸ್​ಗೆ ಅವಮಾನ ಮಾಡಿದ ಸೋನು ಗೌಡ; ಮುಲಾಜಿಲ್ಲದೇ ಕ್ಲಾಸ್​ ತೆಗೆದುಕೊಂಡ ಕಿಚ್ಚ ಸುದೀಪ್​
Image
ಬಿಗ್​ ಬಾಸ್​ನಲ್ಲಿ ಹುಡುಗರಿಗೆ ಹೊರಗಿನಿಂದ ಸಿಗುತ್ತಿದೆ ಆ ಒಂದು ವಸ್ತು; ಸೋನು ಹೇಳಿಯೇ ಬಿಟ್ರು
Image
‘ಬಿಗ್​ ಬಾಸ್​ ಒಟಿಟಿ’ ಮನೆಯೊಳಗೆ ನಿಜವಾಗಿ ಏನೆಲ್ಲ ನಡೆಯಿತು? ಎಲ್ಲವನ್ನೂ ವಿವರಿಸಿದ ಸ್ಫೂರ್ತಿ ಗೌಡ

‘ಇವತ್ತು ಕೆಲವರಿಗೆ ಹಾರ್ಟ್​ಬ್ರೇಕ್​ ಆಗೋದು ಖಚಿತ. ಇಲ್ಲಿಗೆ ನಮ್ಮ ಪ್ರಯಾಣ ಮುಕ್ತಾಯ..’ ಎಂದು ಕಿಚ್ಚ ಸುದೀಪ್​ ಅವರು ಹೇಳಿರುವುದು ಪ್ರೋಮೋದಲ್ಲಿ ಹೈಲೈಟ್​ ಆಗಿದೆ. ವೂಟ್​ ಸೆಲೆಕ್ಟ್​ ಮೂಲಕ ಸಂಜೆ 7 ಗಂಟೆಗೆ ‘ಬಿಗ್​ ಬಾಸ್​ ಒಟಿಟಿ ಕನ್ನಡ’ ಫಿನಾಲೆ ಸಂಚಿಕೆ ಪ್ರಸಾರ ಆಗಲಿದೆ. ಕನ್ನಡದ ಪ್ರೇಕ್ಷಕರಿಗೆ ಒಟಿಟಿ ಸೀಸನ್​ ಹೊಸ ಅನುಭವ ನೀಡಿದೆ. ಈಗ ಎಲ್ಲರೂ ಟಿವಿ ಸೀಸನ್​ ನೋಡಲು ಸಜ್ಜಾಗಿದ್ದಾರೆ.

ಸೋನು ಶ್ರೀನಿವಾಸ್​ ಗೌಡ ಅವರು ವೈರಲ್​ ವಿಡಿಯೋ ಮೂಲಕ ಕುಖ್ಯಾತಿ ಪಡೆದಿದ್ದರು. ಅವರು ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋಗೆ ಬಂದಿದ್ದು ಕೆಲವರಿಗೆ ಹಿಡಿಸಲಿಲ್ಲ. ಹಾಗಾಗಿ ಸೋಶಿಯಲ್​ ಮೀಡಿಯಾದಲ್ಲಿ ಅವರ ವಿರುದ್ಧ ಟ್ರೋಲ್​ ಜೋರಾಗಿತ್ತು. ಹಾಗಾಗಿ ಕಡಿಮೆ ವೋಟ್​ ಪಡೆದು ಅವರು ಮೊದಲ ವಾರವೇ ಔಟ್​ ಆಗಬಹುದು ಎಂದು ಅನೇಕರು ಊಹಿಸಿದ್ದರು. ಆದರೆ ಹಾಗಾಗಲಿಲ್ಲ. ವೀಕ್ಷಕರಿಂದ ಅಗತ್ಯ ವೋಟ್​ ಪಡೆಯುವ ಮೂಲಕ ಅವರು ಫಿನಾಲೆ ವಾರದವರೆಗೂ ತಮ್ಮ ಸ್ಥಾನ ಭದ್ರಪಡಿಸಿಕೊಂಡರು. ಎಲ್ಲ ವಾರ ನಾಮಿನೇಟ್​ ಆಗಿದ್ದರೂ ಕೂಡ ಜಯಶ್ರೀ ಆರಾಧ್ಯ ಅವರು ಕೊನೆ ವಾರದ ತನಕವೂ ಸೇಫ್​ ಆಗಿದ್ದು ಕೂಡ ಪ್ರೇಕ್ಷಕರಿಗೆ ಅಚ್ಚರಿ ನೀಡಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:27 pm, Fri, 16 September 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ