Bigg Boss Kannada OTT: ಕೊನೇ ದಿನಕ್ಕಾಗಿ ಸಾನ್ಯಾ ಐಯ್ಯರ್-ಸೋನು ಗೌಡ ನಡುವೆ ಮೇಕಪ್ ಪೈಪೋಟಿ
Sonu Srinivas Gowda | Sanya Iyer: ಸೋನು ಶ್ರೀನಿವಾಸ್ ಗೌಡ ಮತ್ತು ಸಾನ್ಯಾ ಐಯ್ಯರ್ ಅವರು ಫಿನಾಲೆ ಸಂಚಿಕೆಗೆ ಈ ರೀತಿ ಸಜ್ಜಾಗಿದ್ದಾರೆ. ಮೇಕಪ್ ಮಾಡಿಕೊಳ್ಳುವಲ್ಲಿ ಅವರು ಮಗ್ನರಾದ ವಿಡಿಯೋ ಇಲ್ಲಿದೆ..
ಪ್ರತಿ ವಿಕೆಂಡ್ ಬಂದಾಗಲೂ ಬಿಗ್ ಬಾಸ್ ಸ್ಪರ್ಧಿಗಳು ಭರ್ಜರಿಯಾಗಿ ಮೇಕಪ್ ಮಾಡಿಕೊಂಡು ಸುಂದರವಾಗಿ ಕಾಣಲು ಪ್ರಯತ್ನಿಸುತ್ತಾರೆ. ಇನ್ನು, ಫಿನಾಲೆ ಎಪಿಸೋಡ್ ಎಂದರೆ ಕೇಳಬೇಕಾ? ಇಂದು (ಸೆ.16) ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋ ಫಿನಾಲೆ (Bigg Boss Kannada OTT finale) ನಡೆಯುತ್ತಿದೆ. 8 ಸ್ಪರ್ಧಿಗಳಲ್ಲಿ 4 ಜನರಿಗೆ ಇಲ್ಲಿಂದ ನೇರವಾಗಿ ಟಿವಿ ಸೀಸನ್ಗೆ ಎಂಟ್ರಿ ಸಿಗಲಿದೆ. ಕಿಚ್ಚ ಸುದೀಪ್ ಅವರು ಆ ನಾಲ್ಕು ಜನರ ಹೆಸರನ್ನು ಘೋಷಿಸುವ ಸಮಯ ಹತ್ತಿರ ಬಂದಿದೆ. ಅದಕ್ಕೂ ಮುನ್ನ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಮತ್ತು ಸಾನ್ಯಾ ಅಯ್ಯರ್ ಅವರು ಮೇಕಪ್ ಮಾಡಿಕೊಳ್ಳುವುದರಲ್ಲಿ ಮಗ್ನವಾಗಿರುವುದು ಬಿಗ್ ಬಾಸ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ವಿಡಿಯೋ ಇಲ್ಲಿದೆ. ಸೋನು ಮತ್ತು ಸಾನ್ಯಾ (Sanya Iyer) ಅವರು ದೊಡ್ಮನೆಯಲ್ಲಿ ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ.
Latest Videos