Sanya Iyer: ಸಾನ್ಯಾ ಐಯ್ಯರ್​ ಎದುರು ಮನದ ಮಾತು ತೆರೆದಿಟ್ಟ ರೂಪೇಶ್​ ಶೆಟ್ಟಿ​: ಪಾಸಿಟಿವ್​ ಆಗಿ ಪ್ರತಿಕ್ರಿಯಿಸಿದ ನಟಿ

Roopesh Shetty | Bigg Boss Kannada OTT: ತುಂಬ ಆತ್ಮೀಯವಾಗಿ ಕುಳಿತುಕೊಂಡು ರೂಪೇಶ್​ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್​ ಮಾತನಾಡಿದ್ದಾರೆ. ಮನದ ಮಾತುಗಳನ್ನು ರೂಪೇಶ್​ ಓಪನ್​ ಆಗಿ ಹೇಳಿದ್ದಾರೆ.

Sanya Iyer: ಸಾನ್ಯಾ ಐಯ್ಯರ್​ ಎದುರು ಮನದ ಮಾತು ತೆರೆದಿಟ್ಟ ರೂಪೇಶ್​ ಶೆಟ್ಟಿ​: ಪಾಸಿಟಿವ್​ ಆಗಿ ಪ್ರತಿಕ್ರಿಯಿಸಿದ ನಟಿ
ಸಾನ್ಯಾ ಐಯ್ಯರ್, ರೂಪೇಶ್ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on: Sep 04, 2022 | 7:30 AM

ನಟ ರೂಪೇಶ್​ ಶೆಟ್ಟಿ ಅವರು ‘ಬಿಗ್ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋನಲ್ಲಿ ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಯಾರ ಜೊತೆಗೂ ಅನಗತ್ಯ ಕಿರಿಕ್​ ಮಾಡಿಕೊಳ್ಳದೇ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಟಾಸ್ಕ್​ ವಿಚಾರದಲ್ಲೂ ಅವರು ಹಿಂದೆ ಬಿದ್ದಿಲ್ಲ. ಪ್ರತಿ ವಾರ ಅವರು ವೀಕ್ಷಕರಿಂದ ವೋಟ್ ಪಡೆದು ಬಚಾವ್​ ಆಗುತ್ತಿದ್ದಾರೆ. ನಟಿ ಸಾನ್ಯಾ ಐಯ್ಯರ್​ (Sanya Iyer) ಜೊತೆಗೆ ಅವರಿಗೆ ಉತ್ತಮ ಬಾಂಧವ್ಯ ಬೆಳೆದಿದೆ. ಈ ಬಗ್ಗೆ ಅವರು ಪರಸ್ಪರ ಮಾತನಾಡಿಕೊಂಡಿದ್ದಾರೆ. ‘ಒಂದು ವೇಳೆ ನಿನ್ನ ಸಪೋರ್ಟ್​ ಇಲ್ಲದೇ ಇದ್ದಿದ್ದರೆ ನಾನು ಕಳೆದುಹೋಗುತ್ತಿದ್ದೆ. ನನಗೆ ತುಂಬ ಕಷ್ಟ ಆಗುತ್ತಿತ್ತು. ನೀನು ನನಗೆ ಫ್ರೆಂಡ್​ ಆದೆ. ಅದಕ್ಕೆ ಧನ್ಯವಾದ’ ಎಂದು ರೂಪೇಶ್ (Roopesh Shetty)​ ಹೇಳಿದ್ದಾರೆ. ಅದನ್ನು ಕೇಳಿ ಸಾನ್ಯಾ ಐಯ್ಯರ್​ ಅವರಿಗೆ ಖುಷಿ ಆಗಿದೆ.

ತುಂಬ ಆತ್ಮೀಯವಾಗಿ ಕುಳಿತುಕೊಂಡು ರೂಪೇಶ್​ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್​ ಮಾತನಾಡಿದ್ದಾರೆ. ಮನದ ಮಾತುಗಳನ್ನು ರೂಪೇಶ್​ ಓಪನ್​ ಆಗಿ ಹೇಳಿದ್ದಾರೆ. ‘ನನಗೆ ಹುಡುಗರು ತುಂಬ ಫ್ರೆಂಡ್ಸ್​ ಇದ್ದಾರೆ. ಆದರೆ ಹುಡುಗಿಯರಲ್ಲಿ ಯಾರೂ ಇಲ್ಲ. ನಿನ್ನ ಲಿಸ್ಟ್​ನಲ್ಲಿ ನನ್ನನ್ನು ಮೊದಲಿಗೆ ಇಡು. ಯಾವುದೇ ಸಂದರ್ಭದಲ್ಲಿ ನಿನಗೆ ಸಹಾಯ ಬೇಕೆಂದರೂ ನನಗೆ ಫೋನ್​ ಮಾಡು. ಎಷ್ಟೇ ಬ್ಯುಸಿ ಇದ್ದರೂ ನಾನು ಬರ್ತೀನಿ’ ಎಂದು ರೂಪೇಶ್​ ಹೇಳಿದ್ದಾರೆ.

ಇಷ್ಟೆಲ್ಲ ಕೇಳಿಸಿಕೊಂಡು ಸಾನ್ಯಾ ಐಯ್ಯರ್​ ಸುಮ್ಮನಾಗಿಲ್ಲ. ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ‘ನಿನ್ನ ಜೊತೆ ಇದ್ದಾಗ ನಾನು ಬೇರೆಯದೇ ರೀತಿಯ ಕಂಫರ್ಟ್​ ಝೋನ್​ನಲ್ಲಿ ಇರುತ್ತೇನೆ. ನಾನು ಏನು ಹೇಳಿದರೂ ನೀನು ಜಡ್ಜ್​ ಮಾಡಲ್ಲ ಅಂತ ನನಗೆ ಗೊತ್ತು’ ಎಂದಿದ್ದಾರೆ ಸಾನ್ಯಾ. ‘ನಾನು ಯಾವುದೇ ಹುಡುಗಿಯ ಮೇಲೆ ಅಪ್ಪಿತಪ್ಪಿಯೂ ಕೈ ಹಾಕಲ್ಲ. ನಂದಿನಿ ಮೈ ಸ್ವಲ್ಪ ಟಚ್​ ಆದರೂ ನಾನು ಸಾರಿ ಎನ್ನುತ್ತೇನೆ’ ಎಂದಿದ್ದಾರೆ ರೂಪೇಶ್​ ಶೆಟ್ಟಿ.

ಇದನ್ನೂ ಓದಿ
Image
ಸಾನ್ಯಾ ಅಯ್ಯರ್ ಪಕ್ಕದಲ್ಲಿ ಹೋಗಿ ಕುಳಿತ ಜಶ್ವಂತ್; ಉರಿದು ಬಿದ್ದ ನಂದಿನಿ ಮಾಡಿದ್ದೇನು ನೋಡಿ
Image
ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಅಯ್ಯರ್ ತಾಯಿ ದೀಪಾ ಅವರ ಪೂರ್ತಿ ಸಂದರ್ಶನ ಇಲ್ಲಿದೆ
Image
Sanya Iyer: ಮನೆಯಲ್ಲಿ ಹೇಗಿರುತ್ತೆ ಸಾನ್ಯಾ ಅಯ್ಯರ್​ ನಡೆ-ನುಡಿ? ಎಲ್ಲವನ್ನೂ ವಿವರಿಸಿದ ತಾಯಿ ದೀಪಾ ಅಯ್ಯರ್​
Image
Sanya Iyer: ಅಪ್ಪನೇ ಮಗಳ ಖಾಸಗಿ ವಿಡಿಯೋ ರೆಕಾರ್ಡ್​ ಮಾಡಿದ್ದ; ಸಾನ್ಯಾ ಅಯ್ಯರ್​ ತಾಯಿ ಹೇಳಿದ ಕರಾಳ ಸತ್ಯಗಳು

ಹಲವು ಟ್ವಿಸ್ಟ್​ಗಳಿಗೆ ‘ಬಿಗ್​ ಬಾಸ್​ ಒಟಿಟಿ ಕನ್ನಡ’ ಶೋ ಕಾರಣ ಆಗುತ್ತಿದೆ. ನಾಲ್ಕನೇ ವಾರದಲ್ಲಿ ಡಬಲ್​ ಎಲಿಮಿನೇಷನ್​ ನಡೆದಿದೆ. ಅಕ್ಷತಾ ಕುಕ್ಕಿ ಮತ್ತು ಚೈತ್ರಾ ಹಳ್ಳಿಕೇರಿ ಅವರು ಔಟ್​ ಆಗಿದ್ದಾರೆ. ಇನ್ನುಳಿದ ಕೆಲವೇ ದಿನಗಳಲ್ಲಿ ಆಟದ ರಂಗು ಇನ್ನಷ್ಟು ಹೆಚ್ಚಲಿದೆ. 6ನೇ ವಾರಕ್ಕೆ ಈ ಶೋ ಮುಗಿಯಲಿದೆ. ಇದರಲ್ಲಿ ಇರುವ ಕೆಲವರಿಗೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ ಸ್ಪರ್ಧಿಸುವ ಅವಕಾಶ ಸಿಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ