AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾನ್ಯಾ ಅಯ್ಯರ್ ಪಕ್ಕದಲ್ಲಿ ಹೋಗಿ ಕುಳಿತ ಜಶ್ವಂತ್; ಉರಿದು ಬಿದ್ದ ನಂದಿನಿ ಮಾಡಿದ್ದೇನು ನೋಡಿ

ನಂದಿನಿ ಹಾಗೂ ಸಾನ್ಯಾ ಇಬ್ಬರ ಪಕ್ಕದಲ್ಲೂ ಕುರ್ಚಿ ಖಾಲಿ ಇತ್ತು. ಆಗ ಜಶ್ವಂತ್ ಬಂದು ಸಾನ್ಯಾ ಪಕ್ಕ ಕೂತರು. ಇದು ನಂದಿನಿಗೆ ಬೇಸರ ಮೂಡಿಸಿದೆ.

ಸಾನ್ಯಾ ಅಯ್ಯರ್ ಪಕ್ಕದಲ್ಲಿ ಹೋಗಿ ಕುಳಿತ ಜಶ್ವಂತ್; ಉರಿದು ಬಿದ್ದ ನಂದಿನಿ ಮಾಡಿದ್ದೇನು ನೋಡಿ
ಜಶ್ವಂತ್​-ಸಾನ್ಯಾ-ನಂದಿನಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 30, 2022 | 8:58 PM

ಬಿಗ್ ಬಾಸ್ (Bigg Boss) ಮನೆಯಲ್ಲಿ ಲವ್​ ಹುಟ್ಟೋದು ಸಾಮಾನ್ಯ. ಆದರೆ, ಈ ಬಾರಿ ಲವರ್ಸ್ ಹೋಗಿದ್ದಾರೆ. ನಂದಿನಿ ಹಾಗೂ ಜಶ್ವಂತ್ ಬೋಪಣ್ಣ ನಿಜ ಜೀವನದಲ್ಲಿ ಪ್ರೇಮಿಗಳು. ಅವರು ‘ಬಿಗ್​ ಬಾಸ್ ಒಟಿಟಿ’ಗೆ ಕಾಲಿಟ್ಟಿದ್ದಾರೆ. ಅವರ ಮಧ್ಯೆ ಸಾಕಷ್ಟು ಪ್ರೀತಿ ಇದೆ. ನಂದಿನಿ ಅವರು ಜಶ್ವಂತ್ (Jashwanth Bopanna) ಬಗ್ಗೆ ಅನೇಕ ಬಾರಿ ಹೊಟ್ಟೆಕಿಚ್ಚು ಮಾಡಿಕೊಂಡಿದ್ದಿದೆ. ಈಗ ಸಣ್ಣ ವಿಚಾರಕ್ಕೆ ನಂದು ಸಾಕಷ್ಟು ಉರಿದುಕೊಂಡಿದ್ದಾರೆ.

ಬಿಗ್ ಬಾಸ್​ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. 11 ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಈಗಾಗಲೇ 5 ಸ್ಪರ್ಧಿಗಳು ಎಲಿಮಿನೇಟ್​ ಆಗಿದ್ದಾರೆ. ಇದ್ದ ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ. ಈಗ ಕ್ಯಾಪ್ಟನ್ಸಿ ಟಾಸ್ಕ್​ಗೆ ಎರಡು ಟೀಂ ಮಾಡಲಾಗಿದೆ. ಎಲ್ಲರೂ ಕ್ಯಾಪ್ಟನ್ಸಿ ಟಾಸ್ಕ್​ಗೆ ಟಫ್ ಕಾಂಪಿಟೇಷನ್ ನೀಡುತ್ತಿದ್ದಾರೆ. ಈ ಮಧ್ಯೆ ನಂದು ಅವರು ಜಶ್ವಂತ್ ವಿರುದ್ಧ ಉರಿದುಕೊಂಡಿದ್ದಾರೆ.

ಇದನ್ನೂ ಓದಿ
Image
ಸಾನ್ಯಾ, ಜಶ್ವಂತ್ ಬಗ್ಗೆ ಕೆಟ್ಟದಾಗಿ ಮಾತನಾಡಿ ಸಿಕ್ಕಿ ಬಿದ್ದ ಉದಯ್ ಸೂರ್ಯ
Image
ಬಿಗ್ ಬಾಸ್​ಗೆ ಅವಾಜ್ ಹಾಕಿದ ಸೋನು ಶ್ರೀನಿವಾಸ್ ಗೌಡ; ಕ್ಷಮೆ ಕೇಳಲು ಪಟ್ಟು ಹಿಡಿದ ವೈರಲ್ ಹುಡುಗಿ
Image
ಆ್ಯಟಿಟ್ಯೂಡ್ ತೋರಿಸಿದ ಜಯಶ್ರೀಗೆ ಕಠಿಣ ಶಿಕ್ಷೆ ಕೊಟ್ಟ ಬಿಗ್ ಬಾಸ್; ಎಲಿಮಿನೇಷನ್​ಗೆ ಮತ್ತಷ್ಟು ಹತ್ತಿರ
Image
ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಯ್ತು ಬಾಡಿ ಶೇಮಿಂಗ್? ಅಭಿಪ್ರಾಯ ಹೊರ ಹಾಕಿದ ಸಾನ್ಯಾ ಅಯ್ಯರ್

ಬಿಗ್ ಬಾಸ್ ಮನೆಯಲ್ಲಿ ಅಡುಗೆ ಮಾಡೋಕೆ ಜಶ್ವಂತ್​ಗೆ ಸೂಚಿಸಲಾಯಿತು. ಜಶ್ವಂತ್ ಎಲ್ಲರಿಗೂ ಅಡುಗೆ ಮಾಡಿ ಕೊಟ್ಟಿದ್ದಾರೆ. ಅಡುಗೆ ಮಾಡಿದ ನಂತರ ಎಲ್ಲರೂ ಟೇಬಲ್​ಗೆ ಬಂದು ಊಟ ಮಾಡೋಕೆ ಶುರು ಮಾಡಿದರು. ನಂದಿನಿ ಹಾಗೂ ಸಾನ್ಯಾ ಇಬ್ಬರ ಪಕ್ಕದಲ್ಲೂ ಕುರ್ಚಿ ಖಾಲಿ ಇತ್ತು. ಆಗ ಜಶ್ವಂತ್ ಬಂದು ಸಾನ್ಯಾ ಪಕ್ಕ ಕೂತರು. ಇದು ನಂದಿನಿಗೆ ಬೇಸರ ಮೂಡಿಸಿದೆ.

ಸಾನ್ಯಾ ಅಯ್ಯರ್ ಹಾಗೂ ಜಶ್ವಂತ್ ಕ್ಲೋಸ್ ಆಗಿದ್ದಾರೆ ಎಂಬ ವಿಚಾರಕ್ಕೆ ನಂದಿನಿ ಅವರು ಸಿಟ್ಟು ಮಾಡಿಕೊಂಡಿದ್ದಾರೆ. ಈ ವಿಚಾರಕ್ಕೆ ಅವರು ನಂದಿನಿ ಕೋಪಗೊಂಡಿದ್ದಾರೆ. ಜಶ್ವಂತ್ ಬಳಿ ಈ ವಿಚಾರಕ್ಕೆ ಅವರು ಸ್ಪಷ್ಟನೆ ನೀಡುವ ಕೆಲಸ ಮಾಡಿದರು. ಆದರೆ, ನಂದಿನಿ ಕೋಪವನ್ನು ಮುಂದುವರಿಸಿದರು. ಸಾನ್ಯಾ ಎದುರಲ್ಲೂ ನಂದಿನಿ ಅವರು ಈ ವಿಚಾರ ಪ್ರಸ್ತಾಪ ಮಾಡಿದರು.

ಇದನ್ನೂ ಓದಿ: ‘ಬಿಗ್ ಬಾಸ್’ ಮನೆಯಲ್ಲಿ ಸುದೀಪ್ ಹೇಳಿದ ಮಾತನ್ನು ನಡೆಸಿಕೊಡಲೇ ಇಲ್ಲ ಸಾನ್ಯಾ ಅಯ್ಯರ್​

ಸಾನ್ಯಾ, ‘ನಮ್ಮಿಬ್ಬರ ನಡುವೆ ಫ್ರೆಂಡ್​ಶಿಪ್​ ಮಾತ್ರ ಇದೆ’ ಎಂದರು. ಇದಕ್ಕೆ ನಂದಿನಿ ಬೇಸರ ಮಾಡಿಕೊಂಡರು. ‘ನಿಮ್ಮಿಬ್ಬರ ನಡುವೆ ಏನೋ ಇದೆ ಎಂದು ನನಗೆ ಅನಿಸುತ್ತಿಲ್ಲ. ಆದರೆ, ಮನೆಯ ಮಂದಿ ಬೇರೆ ರೀತಿ ನೋಡುತ್ತಾರೆ. ಅದು ನನಗೆ ಇಷ್ಟ ಆಗಲ್ಲ. ಅವನಿಗೆ ಬಿಗ್ ಬಾಸ್ ಮನೆಯ ಹೊರಗೆ ಅನೇಕರು ಕ್ಲೋಸ್ ಇದ್ದಾರೆ. ಅದು ನನಗೆ ಮ್ಯಾಟರ್ ಆಗಲ್ಲ’ ಎಂದರು. ಆದರೆ, ಅವರ ಹೊಟ್ಟೆಕಿಚ್ಚಿನ ಭಾವನೆ ಮಾತ್ರ ಎದ್ದು ಕಾಣುತ್ತಿತ್ತು.