AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Koffee With Karan: ಟೀಕೆಗಳ ನಡುವೆಯೂ ದಾಖಲೆ ಬರೆದ ‘ಕಾಫಿ ವಿತ್​​ ಕರಣ್​’ ಶೋ

Karan Johar: 8 ವಾರಗಳಿಂದ ‘ಟಾಪ್​ 5’ ಕಾರ್ಯಕ್ರಮಗಳ ಪಟ್ಟಿಯಲ್ಲಿ ‘ಕಾಫಿ ವಿತ್​ ಕರಣ್​’ ಶೋ ಸ್ಥಾನ ಪಡೆದುಕೊಂಡಿದೆ. ಅತಿ ಹೆಚ್ಚು ವೀಕ್ಷಣೆಗೆ ಒಳಪಟ್ಟ ಕಾರ್ಯಕ್ರಮ ಎಂಬ ಖ್ಯಾತಿಯನ್ನೂ ಇದು ಪಡೆದುಕೊಂಡಿದೆ.

Koffee With Karan: ಟೀಕೆಗಳ ನಡುವೆಯೂ ದಾಖಲೆ ಬರೆದ ‘ಕಾಫಿ ವಿತ್​​ ಕರಣ್​’ ಶೋ
ಶಾಹಿದ್​ ಕಪೂರ್, ಕಿಯಾರಾ ಅಡ್ವಾಣಿ, ಕರಣ್​ ಜೋಹರ್​
TV9 Web
| Edited By: |

Updated on:Aug 30, 2022 | 8:34 AM

Share

ಖ್ಯಾತ ನಿರ್ಮಾಪಕ ಕರಣ್​ ಜೋಹರ್ (Karan Johar)​ ಅವರು ನಿರೂಪಕನಾಗಿಯೂ ಯಶಸ್ಸು ಗಳಿಸಿದ್ದಾರೆ. ಅವರು ನಡೆಸಿಕೊಡುವ ‘ಕಾಫಿ ವಿತ್​ ಕರಣ್​’ (Koffee With Karan) ಶೋ ತಮ್ಮದೇ ಛಾಪು ಮೂಡಿಸಿದೆ. ಪ್ರಸ್ತುತ ಈ ಕಾರ್ಯಕ್ರಮದ 7ನೇ ಸೀಸನ್​ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಟಿವಿ ಬದಲು ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ ಎಂಬುದು ವಿಶೇಷ. ಟಿವಿ ಆಗಿರಲಿ ಅಥವಾ ಒಟಿಟಿ ಆಗಿರಲಿ.. ಕರಣ್​ ಜೋಹರ್​ ಸಖತ್ತಾಗಿಯೇ ಮಿಂಚುತ್ತಾರೆ. ನೇರವಾದ ಪ್ರಶ್ನೆಗಳನ್ನು ಕೇಳುವ ಮೂಲಕ ಅವರು ಈ ಕಾರ್ಯಕ್ರಮದ ಮೆರುಗು ಹೆಚ್ಚಿಸುತ್ತಾರೆ. ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ನಲ್ಲಿ (Disney Plus Hotstar) ಬಿತ್ತರ ಆಗುತ್ತಿರುವ ‘ಕಾಫಿ ವಿತ್​ ಕರಣ್​’ ಶೋ ಒಂದು ದಾಖಲೆ ಬರೆದಿದೆ. ಆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಕರಣ್​ ಜೋಹರ್​ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರತಿ ಗುರುವಾರ ‘ಕಾಫಿ ವಿತ್​ ಕರಣ್​’ ಹೊಸ ಸಂಚಿಕೆ ಪ್ರಸಾರ ಆಗುತ್ತದೆ. ಈಗಾಗಲೇ ಅಕ್ಷಯ್​ ಕುಮಾರ್​, ಸಮಂತಾ ರುತ್​ ಪ್ರಭು, ಜಾನ್ವಿ ಕಪೂರ್​, ಸಾರಾ ಆಲಿ ಖಾನ್​, ಅನನ್ಯಾ ಪಾಂಡೆ, ವಿಜಯ್​ ದೇವರಕೊಂಡ, ರಣವೀರ್​ ಸಿಂಗ್​, ಆಲಿಯಾ ಭಟ್​, ಆಮಿರ್ ಖಾನ್​, ಕರೀನಾ ಕಪೂರ್​ ಖಾನ್, ಶಾಹಿದ್​ ಕಪೂರ್​, ಕಿಯಾರಾ ಅಡ್ವಾಣಿ​ ಮುಂತಾದವರು ಈ ಕಾರ್ಯಕ್ರಮಕ್ಕೆ ಬಂದು ಮಾತನಾಡಿದ್ದಾರೆ. ಪ್ರೇಕ್ಷಕರಿಗೆ ಈ ಶೋ ಹೆಚ್ಚು ಇಷ್ಟ ಆಗುತ್ತಿದೆ.

ಇದನ್ನೂ ಓದಿ
Image
Nayanthara: ಸಮಂತಾ ಎದುರು ನಯನತಾರಾಗೆ ಅವಮಾನ ಮಾಡಿದ ಕರಣ್​ ಜೋಹರ್​; ಸಿಡಿದೆದ್ದ ಫ್ಯಾನ್ಸ್​
Image
Alia Bhatt: ಪ್ರೆಗ್ನೆಂಟ್​ ಆಗಿದ್ದು ಆಲಿಯಾ ಭಟ್​, ಆದರೆ ಸುದ್ದಿ ಕೇಳಿ ಕಣ್ಣೀರು ಹಾಕಿದ್ದು ಕರಣ್​ ಜೋಹರ್​
Image
Karan Johar: ಕರಣ್​ ಜೋಹರ್​ ಮಕ್ಕಳ ವಿಡಿಯೋ ವೈರಲ್​; ವಿಮಾನ ನಿಲ್ದಾಣದಲ್ಲಿ ನಮಸ್ತೆ ಮಾಡೋದು ಕಲಿಸಿದ ನಿರ್ಮಾಪಕ
Image
‘ನಾವು ‘ಕೆಜಿಎಫ್​’ ರೀತಿಯ ಸಿನಿಮಾ ಮಾಡಿದ್ರೆ ಕಟು ಟೀಕೆ ವ್ಯಕ್ತವಾಗುತ್ತಿತ್ತು’: ಕರಣ್​ ಜೋಹರ್​ ಆರೋಪ

ಕಳೆದ 8 ವಾರಗಳಿಂದಲೂ ‘ಟಾಪ್​ 5’ ಕಾರ್ಯಕ್ರಮಗಳ ಪಟ್ಟಿಯಲ್ಲಿ ‘ಕಾಫಿ ವಿತ್​ ಕರಣ್​’ ಶೋ ಸ್ಥಾನ ಪಡೆದುಕೊಂಡಿದೆ. ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ಕಾರ್ಯಕ್ರಮ ಎಂಬ ಖ್ಯಾತಿಯನ್ನೂ ಇದು ಪಡೆದುಕೊಂಡಿದೆ. ಆ ಮೂಲಕ ದಾಖಲೆ ಬರೆದಿದೆ. ಈ ಸುದ್ದಿಯನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಕರಣ್​ ಜೋಹರ್​ ಖುಷಿ ಪಟ್ಟಿದ್ದಾರೆ.

ಇನ್ನು, ಈ ಕಾರ್ಯಕ್ರಮದ ಬಗ್ಗೆ ಒಂದು ವರ್ಗದ ಪ್ರೇಕ್ಷಕರಿಂದ ಟೀಕೆ ಕೂಡ ವ್ಯಕ್ತವಾಗುತ್ತಿದೆ. ಈ ಶೋನಲ್ಲಿ ಹೆಚ್ಚು ಅಡಲ್ಟ್​ ಮಾತುಗಳೇ ಇರುತ್ತವೆ. ಕೆಲವೊಮ್ಮೆ ಅದು ಮಿತಿ ಮೀರುತ್ತದೆ ಕೂಡ. ಎಲ್ಲ ಪ್ರೇಕ್ಷಕರಿಗೆ ಈ ಶೋ ಸರಿ ಹೊಂದುವುದಿಲ್ಲ ಎಂದು ಹಲವರು ಟೀಕೆ ಮಾಡಿದ್ದುಂಟು. ಆದರೂ ಕೂಡ ಒಟಿಟಿ ವೀಕ್ಷಕರ ಮನ ಗೆಲ್ಲುವಲ್ಲಿ ‘ಕಾಫಿ ವಿತ್​ ಕರಣ್​’ 7ನೇ ಸೀಸನ್​ ಯಶಸ್ವಿ ಆಗಿದೆ.

ನಿರ್ದೇಶಕನಾಗಿಯೂ ಕರಣ್​ ಜೋಹರ್​ ಬ್ಯುಸಿ ಆಗಿದ್ದಾರೆ. ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾವನ್ನು ಅವರು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:34 am, Tue, 30 August 22

Follow Us
TV9 Web
TV9 Web

TV9 Kannada

Read More
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ
ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ