AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nayanthara: ಸಮಂತಾ ಎದುರು ನಯನತಾರಾಗೆ ಅವಮಾನ ಮಾಡಿದ ಕರಣ್​ ಜೋಹರ್​; ಸಿಡಿದೆದ್ದ ಫ್ಯಾನ್ಸ್​

Koffee with Karan Season 7: ‘ಕಾಫಿ ವಿತ್​ ಕರಣ್​’ ಕಾರ್ಯಕ್ರಮ ಎಂದರೆ ವಿವಾದಗಳು ಸಹಜ. ಈ ಶೋನಲ್ಲಿ ಸೆಲೆಬ್ರಿಟಿಗಳು ನೀಡುವ ಪ್ರತಿ ಹೇಳಿಕೆ ಕೂಡ ಚರ್ಚೆ ಹುಟ್ಟುಹಾಕುತ್ತದೆ. ಈಗ ನಯನತಾರಾ ವಿಚಾರವನ್ನು ಎಳೆದು ತರಲಾಗಿದೆ.

Nayanthara: ಸಮಂತಾ ಎದುರು ನಯನತಾರಾಗೆ ಅವಮಾನ ಮಾಡಿದ ಕರಣ್​ ಜೋಹರ್​; ಸಿಡಿದೆದ್ದ ಫ್ಯಾನ್ಸ್​
ಕರಣ್ ಜೋಹರ್, ನಯನತಾರಾ
TV9 Web
| Updated By: ಮದನ್​ ಕುಮಾರ್​|

Updated on:Jul 25, 2022 | 7:25 AM

Share

ಕರಣ್​ ಜೋಹರ್​ ಅವರು ಹತ್ತು ಹಲವು ಕಾರಣಗಳಿಗಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ನಡೆಸಿಕೊಡುವ ಜನಪ್ರಿಯ ‘ಕಾಫಿ ವಿತ್​ ಕರಣ್​’ (Koffee with Karan) ಶೋನ 7ನೇ ಸೀಸನ್​ ಪ್ರಸಾರ ಆಗುತ್ತಿದೆ. ಆ ಕಾರಣದಿಂದ ಅವರು ಹೆಚ್ಚು ಚರ್ಚೆಗೆ ಒಳಗಾಗುತ್ತಿದ್ದಾರೆ. ಅನೇಕ ಅತಿಥಿಗಳನ್ನು ಆಹ್ವಾನಿಸುವ ಮೂಲಕ ಕರಣ್​ ಜೋಹರ್​ (Karan Johar) ಅವರು ಈ ಕಾರ್ಯಕ್ರಮದ ರಂಗು ಹೆಚ್ಚಿಸುತ್ತಿದ್ದಾರೆ. ಕಳೆದ ಎಪಿಸೋಡ್​ನಲ್ಲಿ ಅಕ್ಷಯ್​ ಕುಮಾರ್​ ಮತ್ತು ಸಮಂತಾ ರುತ್​ ಪ್ರಭು ಅವರು ಆಗಮಿಸಿದ್ದರು. ಈ ವೇಳೆ ಸಮಂತಾ ಹೇಳಿದ ಅನೇಕ ಮಾತುಗಳು ಗಮನ ಸೆಳೆದಿವೆ. ಇದೇ ಎಪಿಸೋಡ್​ನಲ್ಲಿ ನಟಿ ನಯನತಾರಾಗೆ ಅವಮಾನ ಆಗಿದೆ ಎಂಬ ಆರೋಪ ಎದುರಾಗಿದೆ. ಹಾಗಾಗಿ ನಯನತಾರಾ (Nayanthara) ಅಭಿಮಾನಿಗಳು ಕರಣ್​ ಜೋಹರ್​ ವಿರುದ್ಧ ಸಿಡಿದೆದ್ದಿದ್ದಾರೆ.

‘ಕಾಫಿ ವಿತ್​ ಕರಣ್​’ ಕಾರ್ಯಕ್ರಮ ಎಂದರೆ ವಿವಾದಗಳು ಸಹಜ. ಈ ಶೋನಲ್ಲಿ ಸೆಲೆಬ್ರಿಟಿಗಳು ನೀಡುವ ಪ್ರತಿ ಹೇಳಿಕೆ ಕೂಡ ಚರ್ಚೆ ಹುಟ್ಟುಹಾಕುತ್ತದೆ. ಈಗ ನಯನತಾರಾ ವಿಚಾರವನ್ನು ಎಳೆದು ತರಲಾಗಿದೆ. ಇತ್ತೀಚೆಗಿನ ಸಂಚಿಕೆಯಲ್ಲಿ ಸಮಂತಾಗೆ ಕರಣ್​ ಜೋಹರ್​ ಒಂದು ಪ್ರಶ್ನೆ ಕೇಳಿದರು. ‘ದಕ್ಷಿಣ ಭಾರತದಲ್ಲಿ ಈಗ ಟಾಪ್​ ನಟಿ ಯಾರು’ ಎಂದು ಕೇಳಿದ್ದಕ್ಕೆ ನಯನತಾರಾ ಹೆಸರನ್ನು ಸಮಂತಾ ಹೇಳಿದ್ದಾರೆ.

‘ಆದರೆ ನಯನತಾರಾ ಹೆಸರು ನನ್ನ ಪಟ್ಟಿಯಲ್ಲಿ ಇಲ್ಲ’ ಎಂದು ಹೇಳುವ ಮೂಲಕ ಕರಣ್​ ಜೋಹರ್​ ಅವರು ಅಚ್ಚರಿಯ ಪ್ರತಿಕ್ರಿಯೆ ನೀಡಿದರು. ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯ ವರದಿಯನ್ನು ಆಧರಿಸಿ ಕರಣ್​ ಜೋಹರ್​ ಆ ಪ್ರಶ್ನೆ ಕೇಳಿದ್ದರು. ಹಾಗಾಗಿ ಆ ಪಟ್ಟಿಯಲ್ಲಿ ನಯನತಾರಾ ಹೆಸರು ಇರಲಿಲ್ಲ. ಆ ಸಮೀಕ್ಷೆ ಪ್ರಕಾರ ಸಮಂತಾ ಅವರೇ ನಂಬರ್​ ಒನ್​ ನಟಿ.

ಇದನ್ನೂ ಓದಿ
Image
Nayanthara Wedding Video: ನಯನತಾರಾ ಮದುವೆ ವಿಡಿಯೋ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಆಗೋದು ಖಚಿತ; ಇಲ್ಲಿದೆ ಅಪ್​ಡೇಟ್​
Image
Malaika Arora: ನವ ದಂಪತಿ ನಯನತಾರಾ-ವಿಘ್ನೇಶ್​ ಶಿವನ್​ ನಡುವೆ ಮಲೈಕಾ ಅರೋರಾಗೆ ಏನು ಕೆಲಸ? ಫೋಟೋ ವೈರಲ್​
Image
Nayanthara: ಹನಿಮೂನ್​ ಮುಗಿಸಿ ಬಂದ ನಯನತಾರಾ; ಶಾರುಖ್​ ಖಾನ್​ ಜೊತೆ ತಕ್ಷಣ ಶೂಟಿಂಗ್​ ಶುರು
Image
ಹನಿಮೂನ್ ಫೋಟೋ ಹಂಚಿಕೊಂಡ ನಯನತಾರಾ-ವಿಘ್ನೇಶ್; ನವ ದಂಪತಿ ತೆರಳಿದ್ದೆಲ್ಲಿಗೆ?

ಬೇಕಂತಲೇ ಈ ರೀತಿ ನಯನತಾರಾಗೆ ಅವಮಾನ ಮಾಡಲಾಗಿದೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಕರಣ್​ ಜೋಹರ್​ ಹಾಗೂ ಕಾಫಿ ವಿತ್​ ಕರಣ್​ ಶೋ ವಿರುದ್ಧ ನಯನತಾರಾ ಫ್ಯಾನ್ಸ್​ ಕಟು ಟೀಕೆ ಮಾಡುತ್ತಿದ್ದಾರೆ. ಜೂನ್​ 9ರಂದು ವಿಘ್ನೇಶ್​ ಶಿವನ್​ ಜೊತೆ ನಯನತಾರಾ ಮದುವೆ ನೆರವೇರಿತು. ಮದುವೆ ಬಳಿಕವೂ ಅವರು ಅನೇಕ ಸ್ಟಾರ್​ ನಟರ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಶಾರುಖ್​ ಖಾನ್​ ನಟನೆಯ ‘ಜವಾನ್​’ ಚಿತ್ರಕ್ಕೆ ಅವರೇ ನಾಯಕಿ ಆಗಿದ್ದಾರೆ.

Published On - 7:25 am, Mon, 25 July 22

ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಭಾರತದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬ್ರಿಟಿಷ್ ಪ್ರಧಾನಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಅಕ್ಕನಿಗೆ ಗಂಡ ಮತ್ತು ಅವನ ಮನೆಯವರಿಂದ ವಿಪರೀತ ಹಿಂಸೆ: ಸಹೋದರಿ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ
ಶಿರೂರು ದುರಂತ ಸಂಭವಿಸಿ ವರ್ಷ ಕಳೆದರೂ ಮುಗಿಯದ ಜನರ ಆತಂಕ
ಕ್ರಾಂತಿವೀರ ದಂಥ ಬಿರುದುಗಳೆಲ್ಲ ನನಗೆ ಬೇಡ ಎಂದು ನಗುತ್ತಾ ಹೇಳಿದ ರಾಜಣ್ಣ
ಕ್ರಾಂತಿವೀರ ದಂಥ ಬಿರುದುಗಳೆಲ್ಲ ನನಗೆ ಬೇಡ ಎಂದು ನಗುತ್ತಾ ಹೇಳಿದ ರಾಜಣ್ಣ
ಕರ್ನಾಟಕದ ಎಲ್ಲ ಸಂಸದರಿಗೆ ಇದು ಸ್ವಾಭಿಮಾನದ ಪ್ರಶ್ನೆ: ಶಿವಕುಮಾರ್
ಕರ್ನಾಟಕದ ಎಲ್ಲ ಸಂಸದರಿಗೆ ಇದು ಸ್ವಾಭಿಮಾನದ ಪ್ರಶ್ನೆ: ಶಿವಕುಮಾರ್