Samantha: ‘ನಾಗ ಚೈತನ್ಯಗೆ ಡಿವೋರ್ಸ್​ ನೀಡಿದ ಬಳಿಕ ಕಷ್ಟ ಆಯ್ತು’; ಕಡೆಗೂ ನಿಜ ಒಪ್ಪಿಕೊಂಡ ಸಮಂತಾ

Samantha | Koffee with Karan 7: ವಿಚ್ಛೇದನ ಪಡೆದ ನಂತರ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಸಮಂತಾ ತಿಳಿಸಿದ್ದಾರೆ. ‘ಕಾಫಿ ವಿತ್​ ಕರಣ್​ 7’ ಶೋನಲ್ಲಿ ಅವರು ಅನೇಕ ವಿಚಾರದ ಬಗ್ಗೆ ಬಾಯ್ಬಿಟ್ಟಿದ್ದಾರೆ.

Samantha: ‘ನಾಗ ಚೈತನ್ಯಗೆ ಡಿವೋರ್ಸ್​ ನೀಡಿದ ಬಳಿಕ ಕಷ್ಟ ಆಯ್ತು’; ಕಡೆಗೂ ನಿಜ ಒಪ್ಪಿಕೊಂಡ ಸಮಂತಾ
ಸಮಂತಾ, ನಾಗ ಚೈತನ್ಯ
Follow us
| Updated By: ಮದನ್​ ಕುಮಾರ್​

Updated on: Jul 21, 2022 | 8:26 PM

ಕಳೆದೊಂದು ವರ್ಷದಲ್ಲಿ ನಟಿ ಸಮಂತಾ ರುತ್​ ಪ್ರಭು (Samantha) ಅವರ ಖಾಸಗಿ ಜೀವನದಲ್ಲಿ ಭಾರಿ ಬದಲಾವಣೆ ಆಗಿದೆ. ಅವರು ವಿಚ್ಛೇದನ ಪಡೆದು ಮತ್ತೆ ಸಿಂಗಲ್​ ಆಗುತ್ತಾರೆ ಎಂದು ಅಭಿಮಾನಿಗಳು ಊಹಿಸಿರಲಿಲ್ಲ. 2021ರ ಅಕ್ಟೋಬರ್​ನಲ್ಲಿ ಸಮಂತಾ ಮತ್ತು ನಾಗ ಚೈತನ್ಯ (Naga Chaitanya) ಅವರು ವಿಚ್ಛೇದನ ಘೋಷಿಸಿದರು. ಅಷ್ಟಕ್ಕೂ ಈ ಸೆಲೆಬ್ರಿಟಿ ದಂಪತಿ ಡಿವೋರ್ಸ್​ ಪಡೆದಿದ್ದು ಯಾಕೆ ಎಂಬುದು ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ. ಇಬ್ಬರದ್ದು ಲವ್​ ಕಮ್​ ಅರೇಂಜ್​ ಮ್ಯಾರೇಜ್​. ಹಲವು ವರ್ಷಗಳ ಕಾಲ ಪ್ರೀತಿಸಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಇಬ್ಬರ ನಡುವೆ ಮನಸ್ತಾಪ ಮೂಡಿದ್ದರಿಂದ ಸಂಸಾರದಲ್ಲಿ ಬಿರುಕು ಉಂಟಾಯಿತು. ಕಡೆಗೂ ವಿಚ್ಛೇದನ ಪಡೆಯುವ ಮೂಲಕ ಮದುವೆ ಮುರಿದುಬಿತ್ತು. ಆ ನಂತರದ ದಿನಗಳ ಬಗ್ಗೆ ‘ಕಾಫಿ ವಿತ್​ ಕರಣ್​’ (Koffee with Karan) ಶೋನಲ್ಲಿ ಸಮಂತಾ ಬಾಯಿ ಬಿಟ್ಟಿದ್ದಾರೆ.

‘ಕಾಫಿ ವಿತ್​ ಕರಣ್​ ಶೋ’ 7ನೇ ಸೀಸನ್​ ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ‘ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​’ ಮೂಲಕ ಬಿತ್ತರ ಆಗುತ್ತಿರುವ ಈ ಶೋನಲ್ಲಿ ಸಮಂತಾ ಅವರು ಭಾಗಿ ಆಗಿದ್ದಾರೆ. ಅವರ ಜೊತೆ ಅಕ್ಷಯ್​ ಕುಮಾರ್​ ಕೂಡ ಅತಿಥಿಯಾಗಿ ಬಂದಿದ್ದಾರೆ. ನಿರೂಪಕ ಕರಣ್​ ಜೋಹರ್​ ಕೇಳಿದ ಅನೇಕ ಪ್ರಶ್ನೆಗಳಿಗೆ ಸಮಂತಾ ನೇರವಾಗಿ ಉತ್ತರ ನೀಡಿದ್ದಾರೆ. ಗುರುವಾರ (ಜುಲೈ 21) ಸಮಂತಾ-ಅಕ್ಷಯ್​ ಕುಮಾರ್​ ಎಪಿಸೋಡ್​ ಪ್ರಸಾರ ಆಗಿದೆ.

ವಿಚ್ಛೇದನ ಆದ ಬಳಿಕ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಸಮಂತಾ ತಿಳಿಸಿದ್ದಾರೆ. ‘ತುಂಬ ಕಷ್ಟ ಆಗಿತ್ತು’ ಎಂದು ಅವರು ಹೇಳಿದ್ದಾರೆ. ಆದರೆ ಈಗ ಅವರು ಆ ಕಷ್ಟದಿಂದ ಹೊರಬಂದಿದ್ದಾರೆ. ವಿಚ್ಛೇದನದ ನೋವಿನಿಂದ ಚೇತರಿಸಿಕೊಂಡಿದ್ದಾರೆ. ‘ಈಗ ಪರಿಸ್ಥಿತಿ ಚೆನ್ನಾಗಿದೆ. ಹಿಂದೆಂದಿಗಿಂತಲೂ ಈಗ ಹೆಚ್ಚು ಗಟ್ಟಿ ಆಗಿದ್ದೇನೆ’ ಎಂದು ಸಮಂತಾ ಹೇಳಿದ್ದಾರೆ. ಅವರು ‘ಕಾಫಿ ವಿತ್​ ಕರಣ್​ ಶೋ’ನಲ್ಲಿ ಭಾಗಿ ಆಗಿರುವುದು ಇದೇ ಮೊದಲು.

ಇದನ್ನೂ ಓದಿ
Image
Samantha: ಸಮಂತಾಗೆ ಜೋಡಿಯಾಗಲು ಸಿದ್ಧವಾಗಿದೆ ಬಾಲಿವುಡ್​ ಹೀರೋಗಳ ಪಟ್ಟಿ; ಆದ್ರೂ ಫ್ಯಾನ್ಸ್​ಗೆ ಸಮಾಧಾನ ಇಲ್ಲ
Image
ದೇಶದ ಅತ್ಯಂತ ಜನಪ್ರಿಯ ನಟಿ ಸಮಂತಾ; ರಶ್ಮಿಕಾ ಮಂದಣ್ಣಗೆ ಎಷ್ಟನೇ ಸ್ಥಾನ?
Image
No Entry 2: ಸಲ್ಮಾನ್​ ಖಾನ್​ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಸಮಂತಾ? ‘ನೋ ಎಂಟ್ರಿ’ಯಲ್ಲೂ ಸಿಗಬಹುದು ಎಂಟ್ರಿ
Image
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?

ಸಮಂತಾ ಕೈಯಲ್ಲಿ ಈಗ ಹಲವು ಪ್ರಾಜೆಕ್ಟ್​ಗಳಿವೆ. ತೆಲುಗಿನ ‘ಖುಷಿ’, ‘ಯಶೋಧ’, ‘ಶಾಕುಂತಲಂ’ ಮುಂತಾದ ಸಿನಿಮಾಗಳ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಸೂಪರ್​ ಹಿಟ್​ ಆದ ಬಳಿಕ ಒಟಿಟಿಯಿಂದ ಅವರಿಗೆ ಸಖತ್​ ಆಫರ್​ ಬರುತ್ತಿದೆ. ದಕ್ಷಿಣ ಭಾರತಕ್ಕಷ್ಟೇ ಅವರು ಸೀಮಿತ ಆಗಿಲ್ಲ. ಇಂಗ್ಲಿಷ್​ ನಿರ್ದೇಶಕ ಫಿಲಿಪ್​​ ಜಾನ್​ ಜೊತೆ ಅವರು ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೊಸ ಹೊಸ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ