ದೇಶದ ಅತ್ಯಂತ ಜನಪ್ರಿಯ ನಟಿ ಸಮಂತಾ; ರಶ್ಮಿಕಾ ಮಂದಣ್ಣಗೆ ಎಷ್ಟನೇ ಸ್ಥಾನ?

ಕೊಡಗಿನ ಹುಡುಗಿ ರಶ್ಮಿಕಾ ಮಂದಣ್ಣಗೂ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ರಶ್ಮಿಕಾ ಅವರು ಟಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ‘ಪುಷ್ಪ’ ಚಿತ್ರದಿಂದ ಅವರ ಖ್ಯಾತಿ ಹೆಚ್ಚಿದೆ.

ದೇಶದ ಅತ್ಯಂತ ಜನಪ್ರಿಯ ನಟಿ ಸಮಂತಾ; ರಶ್ಮಿಕಾ ಮಂದಣ್ಣಗೆ ಎಷ್ಟನೇ ಸ್ಥಾನ?
ಸಮಂತಾ-ರಶ್ಮಿಕಾ
TV9kannada Web Team

| Edited By: Rajesh Duggumane

Jun 27, 2022 | 5:41 PM

ಸಮಂತಾ (Samantha) ಅವರು ಈಗ ಬೇಡಿಕೆಯ ನಟಿಯರಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ವಿಚ್ಛೇದನದ ನಂತರದಲ್ಲಿ ಹಲವು ಸಿನಿಮಾ ಆಫರ್​ಗಳನ್ನು ಒಪ್ಪಿಕೊಳ್ಳುತ್ತಿರುವ ಅವರು, ಬಹುಬೇಡಿಕೆಯ ನಟಿ ಎಂದೇ ಗುರುತಿಸಿಕೊಂಡಿದ್ದಾರೆ. ಸಖತ್ ಬೋಲ್ಡ್ ಪಾತ್ರಗಳನ್ನು ಮಾಡಿ ಗಮನ ಸೆಳೆಯುತ್ತಿದ್ದಾರೆ. ಈಗ ಸಂಸ್ಥೆಯೊಂದು ನಡೆಸಿದ ಸಮೀಕ್ಷೆ ಪ್ರಕಾರ ಭಾರತದ ಅತ್ಯಂತ ಜನಪ್ರಿಯರ ನಟಿಯರ ಸಾಲಿನಲ್ಲಿ ಸಮಂತಾಗೆ ಮೊದಲ ಸ್ಥಾನ ಸಿಕ್ಕಿದೆ. ದಕ್ಷಿಣ ಭಾರತದ ಹಲವು ನಟಿಯರು ಈ ಪಟ್ಟಿಯಲ್ಲಿದ್ದಾರೆ.

ಈ ಸಮೀಕ್ಷೆ ಪ್ರಕಾರ ಭಾರತದಲ್ಲಿ ಸದ್ಯ ಅತ್ಯಂತ ಜನಪ್ರಿಯ ನಟಿ ಎಂಬ ಹೆಗ್ಗಳಿಕೆ ಸಮಂತಾಗೆ ಸಿಕ್ಕಿದೆ. ಇದಕ್ಕೆ ಕಾರಣ ಹಲವು. ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್​ ಸರಣಿಯಲ್ಲಿ ಸಮಂತಾ ನಟಿಸಿದರು. ಈ ವೆಬ್ ಸರಣಿಯಿಂದ ಹಿಂದಿ ನಾಡಿನಲ್ಲೂ ಸಮಂತಾ ಜನಪ್ರಿಯತೆ ಹೆಚ್ಚಿತು. ಆ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ‘ಪುಷ್ಪ’ ಚಿತ್ರದ ವಿಶೇಷ ಸಾಂಗ್​ನಲ್ಲಿ ಹೆಜ್ಜೆ ಹಾಕಿ ಸಮಂತಾ ಸಖತ್ ಸುದ್ದಿ ಆದರು. ಈ ಕಾರಣಕ್ಕೆ ಸಮಂತಾ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಈ ಪಟ್ಟಿಯಲ್ಲಿ ನಯನತಾರಾಗೆ ಮೂರನೇ ಸ್ಥಾನ ಸಿಕ್ಕಿದೆ. ಅವರು ಶಾರುಖ್ ಖಾನ್ ನಟನೆಯ ‘ಜವಾನ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ನಿರ್ದೇಶಕ ವಿಘ್ನೇಶ್ ಶಿವನ್ ಜತೆ ಮದುವೆ ಆಗಿದ್ದಾರೆ. ಅವರ ಬೇಡಿಕೆ ಕುಗ್ಗಿಲ್ಲ. ಸದ್ಯ ಮಗುವಿನ ಆರೈಕೆಯಲ್ಲಿರುವ ಕಾಜಲ್ ಅಗರ್​ವಾಲ್​ ಅವರು ಐದನೇ ಸ್ಥಾನದಲ್ಲಿದ್ದಾರೆ. ನಟನೆ ಹಾಗೂ ಗ್ಲಾಮರ್ ಮೂಲಕ ಗಮನ ಸೆಳೆದ ಕೀರ್ತಿ ಸುರೇಶ್​ಗೆ ಆರನೇ ಸ್ಥಾನ ಸಿಕ್ಕಿದೆ.

ಕೊಡಗಿನ ಹುಡುಗಿ ರಶ್ಮಿಕಾ ಮಂದಣ್ಣಗೂ ಈ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ರಶ್ಮಿಕಾ ಅವರು ಟಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ‘ಪುಷ್ಪ’ ಚಿತ್ರದಿಂದ ಅವರ ಖ್ಯಾತಿ ಹೆಚ್ಚಿದೆ. ಬಾಲಿವುಡ್​ನಲ್ಲಿ ಅವರು ನಟಿಸುತ್ತಿರುವ ‘ಮಿಷನ್​ ಮಜ್ನು’ ಹಾಗೂ ‘ಗುಡ್​ಬೈ’ ಚಿತ್ರಗಳು ತೆರೆಗೆ ಬಂದ ನಂತರದಲ್ಲಿ ಅವರ ಖ್ಯಾತಿ ಮತ್ತಷ್ಟು ಹೆಚ್ಚಲಿದೆ. ಟಾಪ್ 10ನಲ್ಲಿ ರಶ್ಮಿಕಾ 8ನೇ ಸ್ಥಾನದಲ್ಲಿದ್ದಾರೆ.

ಬಹುಭಾಷೆಯಲ್ಲಿ ನಟಿಸುತ್ತಿರುವ ಪೂಜಾ ಹೆಗ್ಡೆ 9ನೇ ಸ್ಥಾನದಲ್ಲಿದ್ದಾರೆ. ‘ಬಾಬುಬಲಿ 2’ ಬಳಿಕ ಅನುಷ್ಕಾ ಶೆಟ್ಟಿ ಚಾರ್ಮ್ ಕುಸಿದಿದೆ. ಆದರೂ ಅವರ ಅಭಿಮಾನಿ ಬಳಗ ಕುಗ್ಗಿಲ್ಲ. ಅವರಿಗೆ 10ನೇ ಸ್ಥಾನ ಸಿಕ್ಕಿದೆ.

ಇದನ್ನೂ ಓದಿ:No Entry 2: ಸಲ್ಮಾನ್​ ಖಾನ್​ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಸಮಂತಾ? ‘ನೋ ಎಂಟ್ರಿ’ಯಲ್ಲೂ ಸಿಗಬಹುದು ಎಂಟ್ರಿ

 ರಶ್ಮಿಕಾ ಮಾತ್ರವಲ್ಲ, ಅವರ ನಾಯಿ ಬಗ್ಗೆಯೂ ಗಾಸಿಪ್​; ಬಹಿರಂಗವಾಗಿಯೇ ಸ್ಪಷ್ಟನೆ ನೀಡಿದ ನಟಿ

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada