‘ಆ ಕಾಂಟ್ರವರ್ಸಿ ಆದಾಗಲೇ ನಾನು ಅವರು ಕನೆಕ್ಟ್ ಆಗಿದ್ದು’; ಸುದೀಪ್ ಹೀಗೆ ಹೇಳಿದ್ದು ಯಾರ ಬಗ್ಗೆ?

ವಿವಾದ ಹುಟ್ಟಿಕೊಂಡಾಗ ಅನೂಪ ಭಂಡಾರಿ ಅವರು ಸಾಕಷ್ಟು ಚಿಂತೆಗೆ ಒಳಗಾಗಿದ್ದರು. ಆ ವೇಳೆ ಸುದೀಪ್ ಅವರು ಅನೂಪ್ ಬೆಂಬಲಕ್ಕೆ ನಿಂತಿದ್ದರು. ಈ ಬಗ್ಗೆ ಕಿಚ್ಚ ಅವರು ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

TV9kannada Web Team

| Edited By: Rajesh Duggumane

Jun 27, 2022 | 8:00 PM

ಕಿಚ್ಚ ಸುದೀಪ್ (Kichcha Sudeep) ಅವರು ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜುಲೈ 28ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಅನೂಪ್​​ ಭಂಡಾರಿ ಆ್ಯಕ್ಷನ್ ಕಟ್​ ಹೇಳಿದ್ದಾರೆ. ‘ರಾಜರಥ’ ಸಿನಿಮಾ ತೆರೆಕಂಡಾಗ ಅನೂಪ್ ಅವರು ಕಾಂಟ್ರವರ್ಸಿ ಮಾಡಿಕೊಂಡಿದ್ದರು. ಯೂಟ್ಯೂಬ್​ ಚಾನೆಲ್​ಗೆ ನೀಡಿದ ಸಂದರ್ಶನದ ವೇಳೆ ವಿವಾದ ಹುಟ್ಟಿಕೊಂಡಿತ್ತು. ಆ ಕಾಂಟ್ರವರ್ಸಿ ಸುದೀಪ್ ಗಮನಕ್ಕೂ ಬಂದಿತ್ತು. ಆ ವಿವಾದದಲ್ಲಿ ಅನೂಪ್ ಭಂಡಾರಿ ಅವರದ್ದು ತಪ್ಪು ಇರಲಿಲ್ಲ ಅನೋದು ಸುದೀಪ್ ಮಾತು. ಈ ವಿವಾದ ಹುಟ್ಟಿಕೊಂಡಾಗ ಅನೂಪ ಭಂಡಾರಿ ಅವರು ಸಾಕಷ್ಟು ಚಿಂತೆಗೆ ಒಳಗಾಗಿದ್ದರು. ಆ ವೇಳೆ ಸುದೀಪ್ ಅವರು ಅನೂಪ್ ಬೆಂಬಲಕ್ಕೆ ನಿಂತಿದ್ದರು. ಈ ಬಗ್ಗೆ ಕಿಚ್ಚ ಅವರು ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: ‘ಅವರು ಪಬ್ಲಿಕ್​ಅಲ್ಲಿ ಕೇಳಿದ್ರು, ನಾನು ಪಬ್ಲಿಕ್​ನಲ್ಲೇ ಉತ್ತರಿಸಿದೆ’: ಸುದೀಪ್ ಖಡಕ್ ಮಾತು

 ‘ವಿಕ್ರಾಂತ್​ ರೋಣ’ ಚಿತ್ರಕ್ಕೆ ಅಮಿತಾಭ್​ ಬಚ್ಚನ್​ ಸಾಥ್​; ಕಿಚ್ಚ ಸುದೀಪ್​ ಸಿನಿಮಾಗೆ ‘ಬಿಗ್​ ಬಿ’ ಬೆಂಬಲ

Follow us on

Click on your DTH Provider to Add TV9 Kannada