ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಕಿಡಿಗೇಡಿಯೊಬ್ಬ ಬೆಂಕಿಯಿಟ್ಟು ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ

ಅವನಿಗೆ ಈ ಕಾರಿನ ಮಾಲೀಕನ ಜೊತೆ ತಂಟೆ-ತಕರಾರು ಇದ್ದರೆ ಅದನ್ನು ಇತ್ಯರ್ಥಪಡಿಸಿಕೊಳ್ಳಲು ಕೋರ್ಟು-ಕಚೇರಿಗಳಿವೆ, ಪೊಲೀಸ್ ಠಾಣೆಯಿದೆ. ಪಾಪದ ಕಾರಿಗೆ ಬೆಂಕಿ ಇಡುವುದರಲ್ಲಿ ಏನರ್ಥ?

TV9kannada Web Team

| Edited By: Arun Belly

Jun 28, 2022 | 10:42 AM

ಶಿವಮೊಗ್ಗ:  ಇದೆಂಥ ಈರ್ಷ್ಯೆ, ಮತ್ಸರ ಮತ್ತು ವಿಕೃತಿ  ಮಾರಾಯ್ರೇ? ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚುವುದು ವಿಕೃತಿಯಲ್ಲದೆ ಮತ್ತೇನು? ಈ ಘಟನೆ ಶಿವಮೊಗ್ಗ (Shivamogga) ನಗರದ ಜೆ ಎಸ್ ಕೆ ಎಮ್ ರಸ್ತೆಯಲ್ಲಿ (JKSM Road) ನಡೆದಿದೆ. ದುಷ್ಕರ್ಮಿಯೊಬ್ಬ ಕಾರೊಳಗೆ ಪೆಟ್ರೋಲ್ (petrol) ಸುರಿದು ಬೆಂಕಿಯಿಟ್ಟು ಪರಾರಿಯಾಗುವ ದೃಶ್ಯ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಅವನಿಗೆ ಈ ಕಾರಿನ ಮಾಲೀಕನ ಜೊತೆ ತಂಟೆ-ತಕರಾರು ಇದ್ದರೆ ಅದನ್ನು ಇತ್ಯರ್ಥಪಡಿಸಿಕೊಳ್ಳಲು ಕೋರ್ಟು-ಕಚೇರಿಗಳಿವೆ, ಪೊಲೀಸ್ ಠಾಣೆಯಿದೆ. ಪಾಪದ ಕಾರಿಗೆ ಬೆಂಕಿ ಇಡುವುದರಲ್ಲಿ ಏನರ್ಥ? ಸದ್ಯಕ್ಕಂತೂ ಅವನು ತಪ್ಪಿಸಿಕೊಂಡಿದ್ದಾನೆ, ಅದರೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ:  Virat Kohli: ಸಹ ಆಟಗಾರನನ್ನು ನಿಂಧಿಸಿದ ಭಾರತದ ಅಭಿಮಾನಿಗಳ ಬೆವರಿಳಿಸಿದ ಕಿಂಗ್ ಕೊಹ್ಲಿ; ವಿಡಿಯೋ ನೋಡಿ

Follow us on

Click on your DTH Provider to Add TV9 Kannada