Virat Kohli: ಸಹ ಆಟಗಾರನನ್ನು ನಿಂಧಿಸಿದ ಭಾರತದ ಅಭಿಮಾನಿಗಳ ಬೆವರಿಳಿಸಿದ ಕಿಂಗ್ ಕೊಹ್ಲಿ; ವಿಡಿಯೋ ನೋಡಿ
Virat Kohli: ವಾಸ್ತವವಾಗಿ ಅಭ್ಯಾಸ ಪಂದ್ಯದ ವೇಳೆ ಟೀಂ ಇಂಡಿಯಾದ ಯಂಗ್ ಬೌಲರ್ ಕಮಲೇಶ್ ನಾಗರಕೋಟಿ ಬಳಿ ಅಲ್ಲಿ ನೆರೆದಿದ್ದ ಅಭಿಮಾನಿಗಳು ಸೆಲ್ಫಿಗೆ ಪೋಸ್ ಕೊಡುವಂತೆ ಕೇಳಿದ್ದಾರೆ, ಆದರೆ ಇದಕ್ಕೆ ಕಮಲೇಶ್ ಒಲ್ಲೆ ಎಂದಿದ್ದಾರೆ.
ಟೀಂ ಇಂಡಿಯಾದ ಮಾಜಿ ನಾಯಕ ಮತ್ತು ಅನುಭವಿ ಆಟಗಾರ ವಿರಾಟ್ ಕೊಹ್ಲಿ (Virat Kohli) ಯಾವಾಗಲೂ ಕಷ್ಟದಲ್ಲಿರುವ ತಮ್ಮ ಸಹ ಆಟಗಾರರ ಬೆನ್ನಿಗೆ ನಿಲ್ಲುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಸಹ ಆಟಗಾರ ನಾಯಕನಾಗಿರಲಿ, ಇಲ್ಲದಿರಲಿ, ಕೊಹ್ಲಿ ಮಾತ್ರ ಕಷ್ಟದ ಸಮಯದಲ್ಲಿ ನೆರವಾಗುವುದನ್ನು ಮರೆಯುವುದಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಈ ಹಿಂದೆ ಹಲವು ನಿದರ್ಶನಗಳನ್ನು ನಾವು ನೋಡಿದ್ದೇವೆ. ಈಗ ಅಂತಹದ್ದೆ ಘಟನೆಯೊಂದು ಇಂಗ್ಲೆಂಡ್ನಲ್ಲಿ ನಡೆದುಹೋಗಿದೆ. ವಾಸ್ತವವಾಗಿ ಲೀಸೆಸ್ಟರ್‌ಶೈರ್‌ನಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ತಂಡದ ಯುವ ಆಟಗಾರ ಕಮಲೇಶ್ ನಾಗರಕೋಟಿ (Kamlesh Nagarkoti)ಯನ್ನು ಭಾರತದ ಅಭಿಮಾನಿಗಳೇ ನಿಂಧಿಸುತ್ತಿದ್ದರು. ಇದನ್ನು ಗಮನಿಸಿದ ಕೊಹ್ಲಿ ಕೂಡಲೇ ಬಾಲ್ಕನಿಗೆ ಬಂದವರೆ ಅಲ್ಲಿ ನೆರೆದಿದ್ದ ಅಭಿಮಾನಿಗಳ ಬೆವರಿಳಿಸಿದ್ದಾರೆ. ಈಗ ಕೊಹ್ಲಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕೊಹ್ಲಿ ವಿಡಿಯೋ ವೈರಲ್
ಲೀಸೆಸ್ಟರ್‌ಶೈರ್‌ನಲ್ಲಿ ಅಭ್ಯಾಸ ಪಂದ್ಯದ ವೇಳೆ ನಡೆದ ಈ ಘಟನೆಯನ್ನು ವಿಡಿಯೋ ಮಾಡಿಕೊಂಡಿರುವ ಕೊಹ್ಲಿ ಅಭಿಮಾನಿಗಳು ಈಗ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇತ್ತ ಕೊಹ್ಲಿ ಬಾಲ್ಕನಿಗೆ ಬಂದು ಸ್ಟೇಡಿಯಂನಲ್ಲಿ ಕುಳಿತಿದ್ದ ಅಭಿಮಾನಿಗಳ ಬೆವರಿಳಿಸುತ್ತಿರುವುದುನ್ನು ನಾವು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ವಾಸ್ತವವಾಗಿ ಅಭ್ಯಾಸ ಪಂದ್ಯದ ವೇಳೆ ಟೀಂ ಇಂಡಿಯಾದ ಯಂಗ್ ಬೌಲರ್ ಕಮಲೇಶ್ ನಾಗರಕೋಟಿ ಬಳಿ ಅಲ್ಲಿ ನೆರೆದಿದ್ದ ಅಭಿಮಾನಿಗಳು ಸೆಲ್ಫಿಗೆ ಪೋಸ್ ಕೊಡುವಂತೆ ಕೇಳಿದ್ದಾರೆ, ಆದರೆ ಇದಕ್ಕೆ ಕಮಲೇಶ್ ಒಲ್ಲೆ ಎಂದಿದ್ದಾರೆ. ಇದನ್ನು ಕಂಡು ಗರಂ ಆದ ಅಭಿಮಾನಿಗಳು ಕಮಲೇಶ್ರನ್ನು ಹೀಯಾಳಿಸಲು ಆರಂಭಿಸಿದ್ದಾರೆ. ಕೂಡಲೇ ಈ ವಿಷಯ ತಿಳಿದ ಕೊಹ್ಲಿ ಹೀಯಾಳಿಸುತ್ತಿದ್ದವರೊಂದಿಗೆ ವಾಗ್ವದಕ್ಕಿಳಿದು ಅವರ ಬಾಯಿ ಮುಚ್ಚಿಸಿದ್ದಾರೆ.
People talk about Surya Kumar yadav incident on how arrogant and egoistic Virat Kohli treat youngsters But no one will talk about this where Kohli got angry when crowd was bullying nagarkoti in recent practice match❤️ pic.twitter.com/TdIeUSPLTA
— akshat (@ReignOfVirat) June 25, 2022
ಕೊಹ್ಲಿಗೆ ಈ ಪ್ರವಾಸ ಅತ್ಯಂತ ಮಹತ್ವದ್ದಾಗಿದೆ
ಕೊಹ್ಲಿಯನ್ನು ಅವರ ಹಳೆಯ ಅವತಾರದಲ್ಲಿ ನೋಡಿದ ಅಭಿಮಾನಿಗಳು ತುಂಬಾ ಖುಷಿಪಟ್ಟಿದ್ದಾರೆ. ಇದೇ ವೇಳೆ ಕೆಲವರು ಕೊಹ್ಲಿಯನ್ನು ಹೊಗಳಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿಯ ಬ್ಯಾಟ್ ಕೊಂಚ ಅಬ್ಬರಿಸಿತ್ತು. ಮೊದಲ ಇನಿಂಗ್ಸ್‌ನಲ್ಲಿ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದರೂ ಕೇವಲ 33 ರನ್ ಗಳಿಸಲಷ್ಟೇ ಶಕ್ತರಾದರು. ಎದುರಾಳಿ ತಂಡದ ಬೌಲರ್ ರೋಮನ್ ವಾಕರ್ ಕೊಹ್ಲಿಯನ್ನು ಎಲ್ಬಿಡಬ್ಲ್ಯು ಮಾಡಿದರು. ಪಂದ್ಯದಲ್ಲಿ ಡಿಆರ್‌ಎಸ್ ಇರಲಿಲ್ಲ, ಈ ಕಾರಣದಿಂದಾಗಿ ಕೊಹ್ಲಿ ಔಟಾದರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಈ ತೀರ್ಪಿನಿಂದ ಬೆಸರಗೊಂಡ ಕೊಹ್ಲಿ ಅಂಪೈರ್ ಜೊತೆ ಜಗಳವಾಡುತ್ತಿರುವುದು ಕೂಡ ಕಂಡು ಬಂತು. ಆದರೆ 2ನೇ ಇನ್ನಿಂಗ್ಸ್ನಲ್ಲಿ ಕೊಹ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿ ಫಾರ್ಮ್ಗೆ ಮರಳುವ ಎಲ್ಲಾ ಸೂಚನೆಯನ್ನು ನೀಡಿದ್ದಾರೆ.
ಟೀಂ ಇಂಡಿಯಾ ಇಂಗ್ಲೆಂಡ್‌ಗೆ ಆಗಮಿಸಿದ್ದು, ಜುಲೈ 1 ರಿಂದ 6 ವೈಟ್ ಬಾಲ್ ಪಂದ್ಯಗಳನ್ನು ಆಡಲಿದೆ. ನಂತರ 3 ODI ಮತ್ತು 3 T20 ಪಂದ್ಯಗಳನ್ನು ಸಹ ಆಡಲಿದೆ. ಗಮನಾರ್ಹವಾಗಿ, ಇದು ಭಾರತದ ತಂಡದ ಅಧಿಕೃತ ನಾಯಕನಾಗಿ ರೋಹಿತ್ ಶರ್ಮಾ ಅವರ ಮೊದಲ ವಿದೇಶ ಪ್ರವಾಸವಾಗಿದೆ. ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್‌ಗೆ ಭಾರತ ತಯಾರಿ ನಡೆಸುತ್ತಿರುವ ಈ ಸಂದರ್ಭದಲ್ಲಿ ರೋಹಿತ್ ಮತ್ತು ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಈ ಪ್ರವಾಸದಲ್ಲಿ ಪ್ರತಿ ಪಂದ್ಯವನ್ನು ಗೆಲ್ಲಲು ಹೋರಾಡಬೇಕಿದೆ.
Published On - 4:04 pm, Mon, 27 June 22