AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IRE vs IND: ಪವರ್‌ಪ್ಲೇಯಲ್ಲಿ ಪವರ್​ಫುಲ್ ಬೌಲಿಂಗ್; ಟಿ20 ಕ್ರಿಕೆಟ್​ನಲ್ಲಿ ಭುವಿ ಈಗ ನಂ.1 ಬೌಲರ್..!

IRE vs IND: ಐರ್ಲೆಂಡ್ ಪ್ರವಾಸ ಕೈಗೊಂಡಿರುವ ಭಾರತ ತಂಡದ ಉಪನಾಯಕ ಭುವನೇಶ್ವರ್ ಕುಮಾರ್ ಭಾನುವಾರ ರಾತ್ರಿ ಇತಿಹಾಸ ನಿರ್ಮಿಸಿದರು. ಪವರ್‌ಪ್ಲೇ ಅವಧಿಯಲ್ಲಿ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

IRE vs IND: ಪವರ್‌ಪ್ಲೇಯಲ್ಲಿ ಪವರ್​ಫುಲ್ ಬೌಲಿಂಗ್; ಟಿ20 ಕ್ರಿಕೆಟ್​ನಲ್ಲಿ ಭುವಿ ಈಗ ನಂ.1 ಬೌಲರ್..!
ಭುವನೇಶ್ವರ್ ಕುಮಾರ್
TV9 Web
| Edited By: |

Updated on: Jun 27, 2022 | 2:36 PM

Share

ಐರ್ಲೆಂಡ್ ಪ್ರವಾಸ ಕೈಗೊಂಡಿರುವ ಭಾರತ ತಂಡದ ಉಪನಾಯಕ ಭುವನೇಶ್ವರ್ ಕುಮಾರ್ (Bhuvneshwar Kumar) ಭಾನುವಾರ ರಾತ್ರಿ ಇತಿಹಾಸ ನಿರ್ಮಿಸಿದರು. ಪವರ್‌ಪ್ಲೇ ಅವಧಿಯಲ್ಲಿ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇಂದು ಅವರು ಈ ವಿಷಯದಲ್ಲಿ ವೆಸ್ಟ್ ಇಂಡೀಸ್‌ನ ಸ್ಯಾಮ್ಯುಯೆಲ್ ಬದ್ರಿ (Samuel Badree) ಅವರನ್ನು ಹಿಂದಿಕ್ಕಿದ್ದಾರೆ. ಭುವನೇಶ್ವರ್ ಕುಮಾರ್ ಈಗ T20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪವರ್‌ಪ್ಲೇಯಲ್ಲಿ 34 ವಿಕೆಟ್‌ಗಳನ್ನು ಬೇಗನೆ ಕಬಳಿಸಿದ್ದಾರೆ. ಇದಕ್ಕೂ ಮೊದಲು ಪವರ್‌ಪ್ಲೇಯಲ್ಲಿ ಸ್ಯಾಮ್ಯುಯೆಲ್ 33 ವಿಕೆಟ್‌ಗಳ ದಾಖಲೆಯೊಂದಿಗೆ ಅಗ್ರಸ್ಥಾನದಲ್ಲಿದ್ದರು. ಐರ್ಲೆಂಡ್‌ನ ಆರಂಭಿಕ ಬ್ಯಾಟ್ಸ್‌ಮನ್ ಆಂಡ್ರ್ಯೂ ಬಾಲ್ಬೆರಿನ್ ಅವರನ್ನು ಔಟ್ ಮಾಡುವ ಮೂಲಕ ಭುವನೇಶ್ವರ್ ಕುಮಾರ್ ಈ ಸಾಧನೆ ಮಾಡಿದರು. ಪಂದ್ಯದ ಮೊದಲ ಓವರ್​ನಲ್ಲೇ ಐರ್ಲೆಂಡ್​ನ ಆರಂಭಿಕ ಆಟಗಾರ ಬಲ್ಬಿರಿನ್ ಬಲಿಯಾದರು. ಶೂನ್ಯ ಸ್ಕೋರ್​ನಲ್ಲಿ ಭುವಿ, ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು.

ಗಂಟೆಗೆ 208 ಕಿ.ಮೀ ವೇಗ

ಸ್ವಿಂಗ್ ಬೌಲರ್ ಎಂದೇ ಗುರುತಿಸಿಕೊಂಡಿರುವ ಭುವನೇಶ್ವರ್ ಕುಮಾರ್ ಐರ್ಲೆಂಡ್ ವಿರುದ್ದ ಬರೋಬ್ಬರಿ ಗಂಟೆಗೆ 208 ಕಿ.ಮೀ ವೇಗದಲ್ಲಿ ಚೆಂಡೆಸೆದಿದ್ದಾರೆ ಎಂದು ಟಿವಿ ಪರದೆಯಲ್ಲಿ ತೋರಿಸಲಾಯಿತು. ಇತ್ತ ಇದನ್ನು ನೋಡಿದ ಕ್ರಿಕೆಟ್ ಅಭಿಮಾನಿಗಳು ದಂಗಾದರು. ಏಕೆಂದರೆ ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ಚೆಂಡು ಎಸೆದ ದಾಖಲೆ ಬರೆದಿರುವ ಶೋಯೆಬ್ ಅಖ್ತರ್ ಕೂಡ ಈ ವೇಗದಲ್ಲಿ ಬಾಲ್ ಮಾಡಿರಲಿಲ್ಲ. ಅಲ್ಲದೆ ಯಾರು ಕೂಡ 170 ಕಿ.ಮೀ ವೇಗವನ್ನು ದಾಟಿಲ್ಲ. ಆದರೆ 130-140 ಅಸುಪಾಸಿನ ವೇಗದಲ್ಲಿ ಚೆಂಡೆಸೆಯುವ ಭುವನೇಶ್ವರ್ ಕುಮಾರ್ 208 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ ಎಂದು ತೋರಿಸುವ ಮೂಲಕ ಶಾಕ್ ನೀಡಿದ್ದರು.

ವಾಸ್ತವವಾಗಿ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್​ ವೇಳೆ ಸ್ಪೀಡೋಮೀಟರ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂತು. ಹೀಗಾಗಿ ಮೊದಲ ಓವರ್​ನ ಮೊದಲ ಎಸೆತವನ್ನು ಸ್ಪೀಡೋಮೀಟರ್ 201 ಕಿ.ಮೀ. ವೇಗ ಎಂದು ತೋರಿಸಿತ್ತು. ಇದಾದ ಬಳಿಕ ಅದೇ ಓವರ್‌ನಲ್ಲಿ, ಸ್ಪೀಡೋಮೀಟರ್ ಮತ್ತೊಮ್ಮೆ ಭುವನೇಶ್ವರ್ ಅವರ ಚೆಂಡಿನ ವೇಗವನ್ನು ಗಂಟೆಗೆ 208 ಕಿ.ಮೀ. ತೋರಿಸಿ ಎಲ್ಲರಿಗೂ ಆಘಾತ ನೀಡಿದರು. ಅಂದರೆ ಸ್ಪೀಡೋಮೀಟರ್ ದೋಷದಿಂದ ಕ್ರಿಕೆಟ್​ ಇತಿಹಾಸದಲ್ಲೇ ಅತಿ ವೇಗದ ಚೆಂಡನ್ನು ಎಸೆದ ಶೋಯೆಬ್ ಅಖ್ತರ್ ಅವರ 161.3 kmph ದಾಖಲೆಯನ್ನು ಭುವಿ ಕೇವಲ 2 ಎಸೆತಗಳ ಮೂಲಕ ದಾಟಿದ್ದರು. ಆ ಬಳಿಕ ಇದು ಸ್ಪೀಡೋಮೀಟರ್ ಎಡವಟ್ಟು ಎಂಬುದು ಗೊತ್ತಾಗಿದೆ. ಹೀಗಾಗಿ ಇದನ್ನು ಪರಿಗಣಿಸಬೇಡಿ ಎಂದು ತಿಳಿಸಲಾಗಿದೆ.

12-12 ಓವರ್‌ಗಳ ಪಂದ್ಯ

ಮಳೆಯಿಂದಾಗಿ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗಲಿಲ್ಲ. 11:20ಕ್ಕೆ ಪಂದ್ಯ ಆರಂಭವಾದಾಗ 20 ಓವರ್‌ಗಳ ಬದಲಿಗೆ 12-12 ಓವರ್‌ಗಳಿಗೆ ಇಳಿಸಲಾಯಿತು. ಈ ಪಂದ್ಯದ ಪವರ್‌ಪ್ಲೇ ಓವರ್‌ಗಳ ಸಂಖ್ಯೆಯನ್ನು ಆರು ಓವರ್‌ಗಳ ಬದಲಿಗೆ ನಾಲ್ಕು ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಒಟ್ಟು 12 ಓವರ್​ಗಳಲ್ಲಿ ಇಬ್ಬರು ಬೌಲರ್‌ಗಳಿಗೆ ಮೂರು ಓವರ್‌ಗಳು ಮತ್ತು ಮೂವರು ಬೌಲರ್​ಗಳಿಗೆ ಎರಡು ಓವರ್‌ಗಳನ್ನು ಸೀಮಿತಗೊಳಿಸಲಾಯಿತು. ಈ ಸರಣಿಯಲ್ಲಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದು, ಹಾರ್ದಿಕ್ ಅವರಿಗೂ ಈ ಪಂದ್ಯ ಭಾರತ ತಂಡದ ನಾಯಕನಾಗಿ ಚೊಚ್ಚಲ ಪಂದ್ಯವಾಗಿತ್ತು. ಪಾಂಡ್ಯ ಈ ಹಿಂದೆ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದರು.

ಸೂರ್ಯ ವಾಪಸ್, ಉಮ್ರಾನ್ ಮಲಿಕ್ ಪಾದಾರ್ಪಣೆ

ಈ ಪಂದ್ಯದೊಂದಿಗೆ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾಗೆ ಮರಳಿದ್ದಾರೆ. ಐಪಿಎಲ್ ವೇಳೆ ಅವರು ಗಾಯಗೊಂಡಿದ್ದ ಸೂರ್ಯ ಗುಣಮುಖರಾಗಿ ತಂಡ ಸೇರಿದ್ದರು. ಆದರೆ ಈ ಪಂದ್ಯದಲ್ಲಿ ಅವರಿಗೆ ಖಾತೆ ತೆರೆಯುವ ಅವಕಾಶವೂ ದೊರೆಯಲಿಲ್ಲ. ಮೊದಲ ಎಸೆತದಲ್ಲಿ ಎಲ್​ಬಿಡ್ಬ್ಲ್ಯೂ ಬಲೆಗೆ ಬಿದ್ದರು. ಐಪಿಎಲ್‌ನಲ್ಲಿನ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ ಉಮ್ರಾನ್ ಮಲಿಕ್ ಐರ್ಲೆಂಡ್ ವಿರುದ್ಧದ ಮೊದಲ T20 ಪಂದ್ಯದಲ್ಲಿ ತಮ್ಮ ಅಂತರಾಷ್ಟ್ರೀಯ ಪಾದಾರ್ಪಣೆ ಮಾಡಿದರು. ಉಮ್ರಾನ್ ಮಲಿಕ್ ಮೇಲೆ ಟೀಂ ಇಂಡಿಯಾ ಹೆಚ್ಚಿನ ನಿರೀಕ್ಷೆ ಹೊಂದಿತ್ತು. ಆದರೆ ಅವರು ಕೂಡ ಹೆಚ್ಚಿನ ಪ್ರಭಾವ ಬೀರಲಾಗಲಿಲ್ಲ. ಹಾಕಿದ ಒಂದು ಓವರ್​ನಲ್ಲೇ ಉಮ್ರಾನ್ ತುಂಬಾ ದುಬಾರಿಯಾದರು. ಹೀಗಾಗಿ ನಾಯಕ ಪಾಂಡ್ಯ ಅವರಿಗೆ 2ನೇ ಓವರ್ ಎಸೆಯುವ ಅವಕಾಶ ಸಹ ನೀಡಲಿಲ್ಲ.