ENG vs IND: ಮಂಡಳಿಯ ಸಲಹೆ ತಿರಸ್ಕರಿಸಿದ ರೋಹಿತ್ ಶರ್ಮಾ ಮೇಲೆ ಕೆಂಡಕಾರಿದ ಬಿಸಿಸಿಐ..!

ENG vs IND: ಭಾರತ-ಇಂಗ್ಲೆಂಡ್ ಪ್ರವಾಸದಲ್ಲಿರುವ ಆಟಗಾರರ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೋಪಗೊಂಡಿದೆ ಎಂದು ವರದಿಯಾಗಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಆಟಗಾರರು ಮುಕ್ತವಾಗಿ ಬೀದಿಗಳಲ್ಲಿ ತಿರುಗಾಡುತ್ತಿದ್ದು, ಜತೆಗೆ ಅಭಿಮಾನಿಗಳೊಂದಿಗೆ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.

ENG vs IND: ಮಂಡಳಿಯ ಸಲಹೆ ತಿರಸ್ಕರಿಸಿದ ರೋಹಿತ್ ಶರ್ಮಾ ಮೇಲೆ ಕೆಂಡಕಾರಿದ ಬಿಸಿಸಿಐ..!
ರೋಹಿತ್ ಶರ್ಮಾ
Follow us
TV9 Web
| Updated By: ಪೃಥ್ವಿಶಂಕರ

Updated on:Jun 27, 2022 | 3:33 PM

ಭಾರತ-ಇಂಗ್ಲೆಂಡ್ ಪ್ರವಾಸ (India-England tour)ದಲ್ಲಿರುವ ಆಟಗಾರರ ಮೇಲೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕೋಪಗೊಂಡಿದೆ ಎಂದು ವರದಿಯಾಗಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಆಟಗಾರರು ಮುಕ್ತವಾಗಿ ಬೀದಿಗಳಲ್ಲಿ ತಿರುಗಾಡುತ್ತಿದ್ದು, ಜತೆಗೆ ಅಭಿಮಾನಿಗಳೊಂದಿಗೆ ಫೋಟೋ ಕೂಡ ತೆಗೆಸಿಕೊಂಡಿದ್ದಾರೆ. ಈ ಮೂಲಕ ಮಂಡಳಿ ಹಾಗೂ ವೈದ್ಯಕೀಯ ತಂಡ ನೀಡಿದ ಸಲಹೆಯನ್ನು ಆಟಗಾರರು ನಿರ್ಲಕ್ಷಿಸಿದಂತಿದೆ. ಇದೇ ಬಿಸಿಸಿಐ ಅಸಮಾಧಾನಕ್ಕೆ ನಿಜವಾದ ಕಾರಣ. ಆಟಗಾರರ ಬೇಜವಬ್ದಾರಿತನದಿಂದ ಕೊರೊನಾ ಸೋಂಕು ಈಗ ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟಿದೆ. ಇದರ ಫಲವಾಗಿ ತಂಡದ ನಾಯಕ ರೋಹಿತ್​ಗೆ (Rohit Sharma) ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್​ನಲ್ಲಿ ಅವರು ಆಡುವುದು ಅನುಮಾನವಾಗಿದೆ. ಈ ಬಗ್ಗೆ ಅಸಮಾದಾನ ಹೊರಹಾಕಿರುವ ಬಿಸಿಸಿಐ ಅಧಿಕಾರಿಯೊಬ್ಬರು, “ಇದು ನಮ್ಮ ಗಮನಕ್ಕೆ ಬಂದಿತು. ಅವರಿಗೆ ಅಪಾಯಗಳ ಬಗ್ಗೆ ಮುನ್ನೇಚ್ಚರಿಕೆಯನ್ನು ಸಹ ನೀಡಲಾಗಿತ್ತು. ಅವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ಗಳಿಲ್ಲದೆ ಜನರೊಂದಿಗೆ ಬೆರೆಯಬೇಡಿ ಎಂದು ಕೂಡ ತಿಳಿಸಲಾಗಿತ್ತು. ಆದರೆ ನೀವು ನೋಡುವಂತೆ, ರೋಹಿತ್, ವಿರಾಟ್, ರಿಷಬ್ ಮತ್ತು ಬಹುತೇಕ ಎಲ್ಲರೂ ಈ ಮಾತನ್ನು ಕಡೆಗಣಿಸಿದ್ದಾರೆ. ಇದರ ಫಲವೆಂಬಂಗತೆ ಈಗ ರೋಹಿತ್ ಸೋಂಕಿಗೆ ತುತ್ತಾಗಿದ್ದಾರೆ ಎಂದು BCCI ಅಧಿಕಾರಿಯೊಬ್ಬರು InsideSport ಗೆ ತಿಳಿಸಿದ್ದಾರೆ.

ರೋಹಿತ್ ಆಡುತ್ತಾರಾ?

ಕಳೆದ ವಾರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಶಾಪಿಂಗ್‌ಗೆ ತೆರಳಿದ್ದರು. ಈ ವೇಳೆ ಅಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದರು. ಆಗಲೂ ಮಾಸ್ಕ್ ಇಲ್ಲದೆ ತಿರುಗಾಡುತ್ತಿರುವ ಬಗ್ಗೆ ಬಿಸಿಸಿಐ ಕಳವಳ ವ್ಯಕ್ತಪಡಿಸಿತ್ತು. ಲೀಸೆಸ್ಟರ್‌ಶೈರ್ ವಿರುದ್ಧದ ಅಭ್ಯಾಸ ಪಂದ್ಯದ ಮೂರನೇ ದಿನದಂದು ರೋಹಿತ್ ಶರ್ಮಾ ಅವರ ಕೊರೊನಾ ಪರೀಕ್ಷೆಯ ವರದಿ ಪಾಸಿಟಿವ್ ಬಂದಿದೆ. ನಿಯಮದಂತೆ, ರೋಹಿತ್ ಲೀಸೆಸ್ಟರ್‌ಶೈರ್‌ನ ಹೋಟೆಲ್‌ನಲ್ಲಿ ಐದು ದಿನಗಳ ಕಾಲ ಪ್ರತ್ಯೇಕವಾಗಿರಬೇಕಾಗುತ್ತದೆ. ಅವರ RT PCR ಪರೀಕ್ಷೆಯು ಜೂನ್ 30 ರಂದು ಆರನೇ ದಿನದಂದು ನೆಗೆಟಿವ್ ಬರಬೇಕು, ಆಗ ಮಾತ್ರ ಅವರು ಇಂಗ್ಲೆಂಡ್ ವಿರುದ್ಧ ಪ್ರಾರಂಭವಾಗುವ ಟೆಸ್ಟ್ ಪಂದ್ಯದಲ್ಲಿ ಆಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ
Image
IRE vs IND: ಪವರ್‌ಪ್ಲೇಯಲ್ಲಿ ಪವರ್​ಫುಲ್ ಬೌಲಿಂಗ್; ಟಿ20 ಕ್ರಿಕೆಟ್​ನಲ್ಲಿ ಭುವಿ ಈಗ ನಂ.1 ಬೌಲರ್..!
Image
India vs Ireland 1st T20 Playing 11: ಮೊದಲ ಟಿ20 ಪಂದ್ಯಕ್ಕೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
Image
IND vs IRE: ಟೀಂ ಇಂಡಿಯಾಕ್ಕೆ ಜಮ್ಮು ಎಕ್ಸ್‌ಪ್ರೆಸ್ ಪ್ರವೇಶ; ಉಮ್ರಾನ್ ಮಲಿಕ್‌ಗೆ ಚೊಚ್ಚಲ ಅವಕಾಶ

ಇದನ್ನೂ ಓದಿ: T20I World Record: ಟಿ20 ಕ್ರಿಕೆಟ್​ನಲ್ಲಿ ಪಾಕಿಸ್ತಾನಕ್ಕೆ ಸೆಡ್ಡು ಹೊಡೆಯಲಿದೆ ಭಾರತ; ಹೊಸ ದಾಖಲೆಯತ್ತ ರೋಹಿತ್ ಸೇನೆ!

ರೋಹಿತ್ ಬದಲು ಯಾರಿಗೆ ನಾಯಕತ್ವ?

ಇಲ್ಲವಾದಲ್ಲಿ ಅವರ ಸ್ಥಾನಕ್ಕೆ ಭಾರತ ಮತ್ತೊಬ್ಬ ನಾಯಕನನ್ನು ಆಯ್ಕೆ ಮಾಡಬೇಕಾಗುತ್ತದೆ. ಹೀಗಾಗಿ ಬಿಸಿಸಿಐ ಬುಮ್ರಾಗೆ ನಾಯಕನಪಟ್ಟ ಕಟ್ಟಲಲಿದೆ ಎಂಬ ವದಂತಿ ಈಗ ಎಲ್ಲೆಡೆ ಕೇಳಲಾರಂಭಿಸಿದೆ. ಐದನೇ ಟೆಸ್ಟ್ ಕಳೆದ ವರ್ಷ ಸೆಪ್ಟೆಂಬರ್ 10 ರಿಂದ 14 ರ ನಡುವೆ ನಡೆಯಬೇಕಿತ್ತು. ಆದರೆ ಭಾರತ ತಂಡದಲ್ಲಿ ಕೋವಿಡ್ ಸೋಂಕಿನಿಂದಾಗಿ ವಿರಾಟ್ ಮತ್ತು ರೋಹಿತ್ ಇಬ್ಬರೂ ಪಂದ್ಯವನ್ನು ಆಡಲು ನಿರಾಕರಿಸಿದರು. ಐದನೇ ಟೆಸ್ಟ್ ಜುಲೈ 1 ರಿಂದ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಭಾರತ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಟೆಸ್ಟ್ ಸರಣಿಯ ನಂತರ ಮೂರು ODI ಮತ್ತು ಮೂರು T20I ಪಂದ್ಯಗಳ ಸರಣಿ ನಡೆಯಲಿದೆ.

Published On - 3:33 pm, Mon, 27 June 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್