‘ಊ ಅಂಟಾವಾ ಮಾವ..’ ಎಂದು ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ-ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಹಾಗೂ ಸಮಂತಾ ಈವರೆಗೆ ಒಟ್ಟಾಗಿ ನಟಿಸಿಲ್ಲ. ಆದರೆ, ಇವರು ಇದೇ ಮೊದಲ ಬಾರಿಗೆ ಚಾಟ್ ಶೋಗಾಗಿ ಒಂದಾಗಿದ್ದಾರೆ.
ನಟಿ ಸಮಂತಾ (Samantha) ಇತ್ತೀಚೆಗೆ ಸಖತ್ ಸುದ್ದಿಯಲ್ಲಿದ್ದಾರೆ. ಅವರು ಹೆಜ್ಜೆ ಹಾಕಿದ ‘ಪುಷ್ಪ’ (Pushpa Movie) ಚಿತ್ರದ ‘ಊ ಅಂಟಾವಾ ಮಾವ..’ ಸಾಂಗ್ ಸೂಪರ್ ಹಿಟ್ ಆಯಿತು. ಸಮಂತಾ ಅವರ ಬೋಲ್ಡ್ ಲುಕ್ ನೋಡಿ ಸಾಕಷ್ಟು ಮಂದಿ ಫಿದಾ ಆದರು. ಈ ಹಾಡು ಸೂಪರ್ ಹಿಟ್ ಆಗಲು ದೇವಿಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆಯ ಕೊಡುಗೆ ಕೂಡ ದೊಡ್ಡದಿದೆ. ಟಾಲಿವುಡ್ನಿಂದ ಹಿಡಿದು ಬಾಲಿವುಡ್ವರೆಗೆ ಅನೇಕರಿಗೆ ಈ ಹಾಡು ಇಷ್ಟ. ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಕೂಡ ಈ ಸಾಂಗ್ಗೆ ಹೆಜ್ಜೆ ಹಾಕಿದ್ದರು. ಈಗ ಸಮಂತಾ ಹಾಗೂ ಅಕ್ಷಯ್ ಕುಮಾರ್ ‘ಊ ಅಂಟಾವಾ ಮಾವ..’ ಎಂದು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
ಸಮಂತಾ ಹಾಗೂ ಅಕ್ಷಯ್ ಕುಮಾರ್ ಅವರು ‘ಕಾಫಿ ವಿತ್ ಕರಣ್ ಸೀಸನ್ 7’ರ ಮೂರನೇ ಎಪಿಸೋಡ್ಗೆ ಅತಿಥಿಯಾಗಿ ಬಂದಿದ್ದಾರೆ. ಸಮಂತಾ ಅವರು ಬಾಲಿವುಡ್ನಲ್ಲೂ ಹೆಸರು ಮಾಡಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸೀರಿಸ್ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಹಿಂದಿಯಿಂದ ಅವರಿಗೆ ಸಾಕಷ್ಟು ಆಫರ್ಗಳು ಬರುತ್ತಿವೆ. ಈ ಕಾರಣಕ್ಕೆ ಅವರಿಗೆ ‘ಕಾಫಿ ವಿತ್ ಕರಣ್ಗೆ’ ಅತಿಥಿಯಾಗಿ ಬರಲು ಆಮಂತ್ರಣ ಸಿಕ್ಕಿದೆ.
ಅಕ್ಷಯ್ ಕುಮಾರ್ ಹಾಗೂ ಸಮಂತಾ ಈವರೆಗೆ ಒಟ್ಟಾಗಿ ನಟಿಸಿಲ್ಲ. ಆದರೆ, ಇವರು ಇದೇ ಮೊದಲ ಬಾರಿಗೆ ಚಾಟ್ ಶೋಗಾಗಿ ಒಂದಾಗಿದ್ದಾರೆ. ಇವರ ಕೆಮಿಸ್ಟ್ರಿ ಚೆನ್ನಾಗಿ ವರ್ಕ್ ಆಗಿದೆ ಎಂಬುದಕ್ಕೆ ಈ ಶೋನ ಪ್ರೋಮೋಗಳೇ ಸಾಕ್ಷಿ. ಈಗ ‘ಊ ಅಂಟಾವಾ ಮಾವ..’ ಹಾಡಿನಲ್ಲಿ ಇಬ್ಬರೂ ಒಟ್ಟಾಗಿ ಹೆಜ್ಜೆ ಹಾಕಿದ್ದು ಫ್ಯಾನ್ಸ್ಗೆ ಇಷ್ಟವಾಗಿದೆ. ಇಬ್ಬರನ್ನೂ ಒಟ್ಟಾಗಿ ತೆರೆಮೇಲೆ ನೋಡಬೇಕು ಎಂದು ಫ್ಯಾನ್ಸ್ ಆಶಿಸಿದ್ದಾರೆ.
View this post on Instagram
ಇದನ್ನೂ ಓದಿ: ಸಮಂತಾ ಈಗ ಟ್ರಾಫಿಕ್ ಪೊಲೀಸ್, ಸ್ಟಾರ್ ನಟನ ವಾಹನ ಅಡ್ಡಗಟ್ಟಿದ ನಟಿ; ಇದು ಸಿನಿಮಾ ವಿಚಾರ ಅಲ್ಲ
‘ಕಾಫಿ ವಿತ್ ಕರಣ್’ ಶೋನಲ್ಲಿ ಅನೇಕ ವಿವಾದಾತ್ಮಕ ಪ್ರಶ್ನೆಗಳೂ ಎದುರಾಗುತ್ತವೆ. ವೈಯಕ್ತಿಕ ಜೀವನದ ಬಗ್ಗೆ ನೇರವಾಗಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸಮಂತಾ ಅವರು ವಿಚ್ಛೇದನದ ನಂತರದಲ್ಲಿ ಇದೇ ಮೊದಲ ಬಾರಿಗೆ ಚಾಟ್ ಶೋ ಒಂದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿಚ್ಛೇದನಕ್ಕೆ ಕಾರಣ ಏನು ಎಂಬುದನ್ನು ಸಮಂತಾ ಈವರೆಗೆ ರಿವೀಲ್ ಮಾಡಿಲ್ಲ. ‘ಕಾಫಿ ವಿತ್ ಕರಣ್’ ವೇದಿಕೆ ಮೇಲೆ ಈ ಪ್ರಶ್ನೆಗೆ ಉತ್ತರ ಸಿಗಬಹುದೇ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಇಂದು (ಜುಲೈ 21) ರಾತ್ರಿ 7 ಗಂಟೆಗೆ ಈ ಶೋ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಪ್ರಸಾರ ಕಾಣಲಿದೆ.