‘ನಮ್ಮ 25 ಕೋಟಿ ನಮಗೆ ಹಿಂದಿರುಗಿಸಿ’; ನಯನತಾರಾ-ವಿಘ್ನೇಶ್​ಗೆ ಗಂಟುಬಿದ್ದ ನೆಟ್​ಫ್ಲಿಕ್ಸ್

ಇವರ ಮದುವೆಯ ಸುಂದರ ಕ್ಷಣಗಳನ್ನು ನೆಟ್​ಫ್ಲಿಕ್ಸ್ ಸೆರೆ ಹಿಡಿದಿತ್ತು. ಇದನ್ನು ಎಕ್ಸ್​​ಕ್ಲೂಸಿವ್ ಆಗಿ ಪ್ರಸಾರ ಮಾಡಲು ದಂಪತಿಗೆ 25 ಕೋಟಿ ರೂಪಾಯಿ ನೀಡಿತ್ತು ಎನ್ನಲಾಗಿದೆ.

‘ನಮ್ಮ 25 ಕೋಟಿ ನಮಗೆ ಹಿಂದಿರುಗಿಸಿ’; ನಯನತಾರಾ-ವಿಘ್ನೇಶ್​ಗೆ ಗಂಟುಬಿದ್ದ ನೆಟ್​ಫ್ಲಿಕ್ಸ್
ವಿಘ್ನೇಶ್-ನಯನತಾರಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 20, 2022 | 3:31 PM

ನಟಿ ನಯನಾತಾರಾ (Nayanthara) ಹಾಗೂ ನಿರ್ದೇಶಕ ವಿಘ್ನೇಶ್​ ಶಿವನ್​ಗೆ (Vignesh Shivan) ನೆಟ್​ಫ್ಲಿಕ್ಸ್ ಗಂಟು ಬಿದ್ದಿದೆ. ಒಟಿಟಿ ಸಂಸ್ಥೆ ಈ ದಂಪತಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 25 ಕೋಟಿ ರೂಪಾಯಿ ಪಾವತಿಸಿತ್ತು. ಇದನ್ನು ಹಿಂದಿರುಗಿಸಿ ಎಂದು ನೆಟ್​ಫ್ಲಿಕ್ಸ್ ಇವರಿಗೆ ನೋಟಿಸ್ ನೀಡಿದೆ ಎನ್ನಲಾಗುತ್ತಿದೆ. ಇದು ಸದ್ಯದ ಮಟ್ಟಿಗೆ ಅಂತೆ-ಕಂತೆಯೇ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೂನ್ ತಿಂಗಳಲ್ಲಿ ಮದುವೆ ಆದರು. ತಿರುಪತಿಯಲ್ಲಿ ಮದುವೆ ಆಗಬೇಕು ಎಂಬುದು ಇವರ ಆಸೆ ಆಗಿತ್ತು. ಆದರೆ, ಇದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಈ ಜೋಡಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ವಿವಾಹ ಆಗಿತ್ತು. ಇವರ ಮದುವೆಯ ಸುಂದರ ಕ್ಷಣಗಳನ್ನು ನೆಟ್​ಫ್ಲಿಕ್ಸ್ ಸೆರೆ ಹಿಡಿದಿತ್ತು. ಇದನ್ನು ಎಕ್ಸ್​​ಕ್ಲೂಸಿವ್ ಆಗಿ ಪ್ರಸಾರ ಮಾಡಲು ದಂಪತಿಗೆ 25 ಕೋಟಿ ರೂಪಾಯಿ ನೀಡಿತ್ತು ಎನ್ನಲಾಗಿದೆ.

ಶೂಟಿಂಗ್​ಗೆ ಸಹಕಾರಿ ಆಗಲಿ ಎಂಬ ಕಾರಣಕ್ಕೆ ನಯನತಾರಾ ಮದುವೆಯಲ್ಲಿ ನೆಟ್​ಫ್ಲಿಕ್ಸ್ ಹಲವು ಅರೇಜ್​ಮೆಂಟ್ಸ್​ಗಳನ್ನು ಮಾಡಿತ್ತು. ಇದಲ್ಲದೆ, ಊಟದ ಖರ್ಚನ್ನು ನೆಟ್​ಫ್ಲಿಕ್ಸ್ ನೋಡಿಕೊಂಡಿದೆ ಎನ್ನಲಾಗಿದೆ. ಪ್ರತಿ ಪ್ಲೇಟ್​ಗೆ ಒಟಿಟಿ ದಿಗ್ಗಜ 3500 ರೂಪಾಯಿ ಪಾವತಿ ಮಾಡಿತ್ತು ಎನ್ನಲಾಗಿದೆ. ಆದರೆ, ಈಗ ನೆಟ್​ಫ್ಲಿಕ್ಸ್ ಈ ಡೀಲ್​ಅನ್ನು ರದ್ದು ಮಾಡಿದೆ.

ಇದನ್ನೂ ಓದಿ
Image
Nayanthara Marriage: ಪ್ರಭುದೇವ ಜತೆ ಡೇಟಿಂಗ್​ ಮಾಡುತ್ತಿದ್ದ ನಯನತಾರಾ ಬ್ರೇಕಪ್​ ಮಾಡಿಕೊಂಡಿದ್ದು ಯಾಕೆ?
Image
Nayanthara Vignesh Shivan Wedding: ನಯನತಾರಾ-ವಿಘ್ನೇಶ್​ ಮದುವೆಗೆ ಬಂದ ಶಾರುಖ್​ ಖಾನ್​, ರಜನಿಕಾಂತ್​; ಇಲ್ಲಿವೆ ಫೋಟೋಗಳು
Image
Nayanthara Vignesh Wedding: ‘ಸೂಪರ್​’ ಚಿತ್ರದ ನಟಿ​ ನಯನತಾರಾಗೆ ಮದುವೆ ಸಂಭ್ರಮ; ವಿಘ್ನೇಶ್​ ಶಿವನ್​ ಕೈ ಹಿಡಿದ ಸುಂದರಿ
Image
Nayanthara Wedding: ನಯನತಾರಾ ಜತೆ ಮದುವೆ ಆಗೋಕಿಂತ ಕೆಲವೇ ಗಂಟೆ ಮುನ್ನ ಪ್ರಮುಖರಿಗೆ ಧನ್ಯವಾದ ತಿಳಿಸಿದ ವಿಘ್ನೇಶ್​ ಶಿವನ್​

ನೆಟ್​ಫ್ಲಿಕ್ಸ್ ಈ ದಂಪತಿಗೆ ಕೆಲ ಷರತ್ತುಗಳನ್ನು ವಿಧಿಸಿತ್ತು. ‘ಮದುವೆಯ ಫೋಟೋ ಹಾಗೂ ವಿಡಿಯೋಗಳನ್ನು ನಾವೇ ಪ್ರಸಾರ ಮಾಡುತ್ತೇವೆ, ನೀವು ಎಲ್ಲಿಯೂ ಅದನ್ನು ಪೋಸ್ಟ್ ಮಾಡಬಾರದು’ ಎಂಬುದು ಕೂಡ ಷರತ್ತಿನಲ್ಲಿತ್ತು ಎನ್ನಲಾಗಿದೆ. ಆದರೆ, ಈ ಷರತ್ತನ್ನು ವಿಘ್ನೇಶ್ ಶಿವನ್ ಮುರಿದಿದ್ದಾರೆ. ಮದುವೆ ಆಗುತ್ತಿದ್ದಂತೆ ಇನ್​ಸ್ಟಾಗ್ರಾಮ್​ನಲ್ಲಿ ಹಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಈ ಬಗ್ಗೆ ದಂಪತಿಗೆ ನೆಟ್​ಫ್ಲಿಕ್ಸ್ ಎಚ್ಚರಿಕೆ ನೀಡಿತ್ತು. ಆದಾಗ್ಯೂ, ವಿಘ್ನೇಶ್ ಶಿವನ್ ನಿರಂತರವಾಗಿ ಫೋಟೋ ಪೋಸ್ಟ್ ಮಾಡುತ್ತಲೇ ಬಂದರು. ಹೀಗಾಗಿ, ಈ ಡೀಲ್ ಕ್ಯಾನ್ಸಲ್ ಆಗಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ: ನವ ದಂಪತಿ ನಯನತಾರಾ-ವಿಘ್ನೇಶ್​ ಶಿವನ್​ ನಡುವೆ ಮಲೈಕಾ ಅರೋರಾಗೆ ಏನು ಕೆಲಸ? ಫೋಟೋ ವೈರಲ್​

ಈ ಮದುವೆಗೆ ಶಾರುಖ್ ಖಾನ್, ಅಟ್ಲೀ, ರಜನಿಕಾಂತ್ ಸೇರಿ ಅನೇಕ ಸೆಲೆಬ್ರಿಟಿಗಳು ಬಂದಿದ್ದರು. ಈ ಕಾರಣಕ್ಕೂ ಈ ಸ್ಟಾರ್ ದಂಪತಿಯ ವಿವಾಹ ದೃಶ್ಯಗಳನ್ನು ಪ್ರಸಾರ ಮಾಡಲು ನೆಟ್​ಫ್ಲಿಕ್ಸ್ ಆಸಕ್ತಿ ತೋರಿತ್ತು. ಈ ಕಾರಣಕ್ಕೆ ಈಗ ಈ ದಂಪತಿ 25 ಕೋಟಿ ರೂಪಾಯಿ ಹಿಂದಿರುಗಿಸಬೇಕಿದೆ.

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!