ಮಾಜಿ ಪತಿ ನಾಗ ಚೈತನ್ಯ ಜೊತೆ ಸ್ಪರ್ಧೆಗೆ ಇಳಿಯಲು ನೋ ಎಂದ ಸಮಂತಾ
‘ಯಶೋದ’ ಸಿನಿಮಾದ ಟಾಕಿ ಪೋರ್ಷನ್ ಶೂಟಿಂಗ್ ಪೂರ್ಣಗೊಂಡಿದೆ. ಸಾಕಷ್ಟು ಸಿಜಿ ಕೆಲಸಗಳು ಬಾಕಿ ಉಳಿದಿವೆ. ಈ ಕಾರಣಕ್ಕೆ ಸಿನಿಮಾ ರಿಲೀಸ್ ದಿನಾಂಕ ಮುಂದೂಡುವ ಆಲೋಚನೆಯಲ್ಲಿ ಚಿತ್ರತಂಡ ಇದೆ.
ನಾಗ ಚೈತನ್ಯ (Naga Chaitanya) ಹಾಗೂ ಸಮಂತಾ ವಿಚ್ಛೇದನ ಪಡೆದು ಒಂದು ವರ್ಷ ಕಳೆಯುತ್ತಾ ಬಂದಿದೆ. ಆದರೆ, ಇವರ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಮಾತ್ರ ಕಡಿಮೆ ಆಗಿಲ್ಲ. ಇಬ್ಬರೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರುವುದರಿಂದ ಕೆಲ ಕಾರ್ಯಕ್ರಮಗಳಲ್ಲಿ ಮುಖಾಮುಖಿ ಆಗುವ ಪರಿಸ್ಥಿತಿ ಬಂದೊದಗುತ್ತದೆ. ಈಗ ಇಬ್ಬರ ಚಿತ್ರಗಳೂ ಒಂದೇ ವಾರ ತೆರೆಗೆ ಬರುವುದರಲ್ಲಿತ್ತು. ಆದರೆ, ಸಮಂತಾ (Samantha) ಚಿತ್ರತಂಡದವರು ಸಿನಿಮಾ ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡ ಬಗ್ಗೆ ವರದಿ ಆಗಿದೆ. ಹೀಗಾಗಿ ಬಾಕ್ಸ್ ಆಫೀಸ್ ಕ್ಲ್ಯಾಶ್ ತಪ್ಪಿದೆ.
ಸಮಂತಾ ಅವರು ‘ಯಶೋದ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಗಮನ ಸೆಳೆದಿತ್ತು. ಸಮಂತಾ ಅವರ ಪಾತ್ರ ಹೈಲೈಟ್ ಆಗಿತ್ತು. ಈ ಚಿತ್ರವನ್ನು ಆಗಸ್ಟ್ 12ರಂದು ರಿಲೀಸ್ ಮಾಡುವ ಬಗ್ಗೆ ಚಿತ್ರತಂಡ ಘೋಷಣೆ ಮಾಡಿತ್ತು. ಇನ್ನು, ನಾಗ ಚೈತನ್ಯ ಅವರು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಆಮಿರ್ ಖಾನ್ ಅವರು ಈ ಚಿತ್ರದ ಹೀರೋ. ಈಗಾಗಲೇ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ಸಿನಿಮಾ ಆಗಸ್ಟ್ 11ರಂದು ತೆರೆಗೆ ಬರುತ್ತಿದೆ. ಈಗ ಎರಡೂ ಚಿತ್ರಗಳು ಒಂದೇ ವಾರ ತೆರೆಗೆ ಬರಬೇಕಿತ್ತು. ಆದರೆ, ಇದು ಸಾಧ್ಯವಾಗುತ್ತಿಲ್ಲ.
‘ಯಶೋದ’ ಸಿನಿಮಾದ ಟಾಕಿ ಪೋರ್ಷನ್ ಶೂಟಿಂಗ್ ಪೂರ್ಣಗೊಂಡಿದೆ. ಒಂದು ಸಾಂಗ್ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಈ ಚಿತ್ರ ತಂಡದವರು ಈಗ ಪೋಸ್ಟ್ ಪ್ರೊಡಕ್ಷನ್ನಲ್ಲಿ ತೊಡಗಿಕೊಂಡಿದ್ದು, ಸಾಕಷ್ಟು ಸಿಜಿ ಕೆಲಸಗಳು ಬಾಕಿ ಉಳಿದಿವೆ. ಈ ಕಾರಣಕ್ಕೆ ಸಿನಿಮಾ ರಿಲೀಸ್ ದಿನಾಂಕ ಮುಂದೂಡುವ ಆಲೋಚನೆಯಲ್ಲಿ ಚಿತ್ರತಂಡ ಇದೆ.
‘ಯಶೋದ’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಈ ಕಾರಣಕ್ಕೆ ಚಿತ್ರತಂಡದವರು ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲು ನಿರ್ಧರಿಸಿದ್ದಾರೆ. ಈ ಕಾರಣದಿಂದ ಪ್ರಚಾರಕ್ಕೆ ಒಂದಷ್ಟು ಸಮಯವನ್ನು ಚಿತ್ರತಂಡ ಮೀಸಲಿಡಲಿದೆ.
ಇದನ್ನೂ ಓದಿ: Samantha: ಸಮಂತಾಗೆ ಜೋಡಿಯಾಗಲು ಸಿದ್ಧವಾಗಿದೆ ಬಾಲಿವುಡ್ ಹೀರೋಗಳ ಪಟ್ಟಿ; ಆದ್ರೂ ಫ್ಯಾನ್ಸ್ಗೆ ಸಮಾಧಾನ ಇಲ್ಲ
‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಬಗ್ಗೆ ಆಮಿರ್ ಖಾನ್ ಅವರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇಂಗ್ಲಿಷ್ನ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್ ಇದಾಗಿದೆ. ಒಂದು ವರ್ಗದ ಫ್ಯಾನ್ಸ್ಗೆ ಟ್ರೇಲರ್ ಇಷ್ಟವಾಗಿಲ್ಲ. ಈ ಚಿತ್ರದ ರಿಲೀಸ್ ದಿನಾಂಕ ಪದೇಪದೇ ವಿಳಂಬವಾಗಿತ್ತು.