ಒಳ ಉಡುಪು ಹಾಕದೆ ಪಾರದರ್ಶಕ ಬಟ್ಟೆ ಹಾಕಿದ ‘ಮಾರ್ವೆಲ್’ ನಟಿ; ಟ್ರೋಲ್ ಮಾಡಿದವರಿಗೆ ಖಡಕ್ ಉತ್ತರ
ಇತ್ತೀಚೆಗೆ ಪಿಂಕ್ ಬಣ್ಣದ ಬಟ್ಟೆ ಧರಿಸಿ ಫ್ಲೋರೆನ್ಸ್ ಸಾರ್ವಜನಿಕವಾಗು ಕಾಣಿಸಿಕೊಂಡಿದ್ದರು. ಈ ಬಟ್ಟೆ ಸಂಪೂರ್ಣ ಪಾರದರ್ಶಕವಾಗಿತ್ತು. ಅವರು ಒಳ ಉಡುಪು ಕೂಡ ಹಾಕಿರಲಿಲ್ಲ.
ಸೆಲೆಬ್ರಿಟಿಗಳು (Celebrity) ಧರಿಸುವ ಬಟ್ಟೆಯ ಮೇಲೆ ಅವರ ಫ್ಯಾನ್ಸ್ ಕಣ್ಣಿಟ್ಟಿರುತ್ತಾರೆ. ಅವರು ತೊಟ್ಟ ದಿರಿಸು ಇಷ್ಟವಾಗದಿದ್ದರೆ ಮನ ಬಂದಂತೆ ಟ್ರೋಲ್ ಮಾಡಲಾಗುತ್ತದೆ. ಈಗ ಹಾಲಿವುಡ್ (Hollywood) ನಟಿ ಫ್ಲೋರೆನ್ಸ್ ಫ್ಯೂ (Florence Pugh) ಅವರು ಇದೇ ಮಾದರಿಯಲ್ಲಿ ಟ್ರೋಲ್ ಕಾಟಕ್ಕೆ ಒಳಗಾಗಿದ್ದಾರೆ. ಅವರು ಎದೆ ಕಾಣುವ ರೀತಿಯಲ್ಲಿ ಪಾರದರ್ಶಕ ಬಟ್ಟೆ ಹಾಕಿದ್ದರು. ಈ ವಿಚಾರದಲ್ಲಿ ಅವರು ಟೀಕೆಗೆ ಗುರಿಯಾಗಿದ್ದಾರೆ. ಈ ಬಗ್ಗೆ ಅವರು ಸರಿಯಾಗಿ ತಿರುಗೇಟು ನೀಡಿದ್ದಾರೆ.
2014ರಲ್ಲಿ ತೆರೆಗೆ ಬಂದ ಇಂಗ್ಲಿಷ್ ಸಿನಿಮಾ ‘ದಿ ಫಾಲಿಂಗ್’ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ನಟಿ ಫ್ಲೋರೆನ್ಸ್. ನಂತರ ಅವರು ವೆಬ್ ಸರಣಿಯಲ್ಲೂ ಕಾಣಿಸಿಕೊಂಡರು. ಮಾರ್ವೆಲ್ ಸ್ಟುಡಿಯೋ ನಿರ್ಮಾಣದ ‘ಬ್ಲ್ಯಾಕ್ ವಿಡೋ’ ಚಿತ್ರದಲ್ಲಿ ಬಣ್ಣ ಹಚ್ಚಿ ಖ್ಯಾತಿ ಹೆಚ್ಚಿಸಿಕೊಂಡರು. ಈ ಸಿನಿಮಾ 2021ರಲ್ಲಿ ತೆರೆಗೆ ಬಂತು. ಅಷ್ಟೇ ಅಲ್ಲ, ಮಾರ್ವೆಲ್ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದ ವೆಬ್ ಸರಣಿಯಲ್ಲೂ ಅವರು ಬಣ್ಣ ಹಚ್ಚಿದರು. ಈಗ ಅವರು ಟ್ರೋಲ್ ಕಾಟಕ್ಕೆ ಒಳಗಾಗಿದ್ದಾರೆ.
ಇತ್ತೀಚೆಗೆ ಪಿಂಕ್ ಬಣ್ಣದ ಬಟ್ಟೆ ಧರಿಸಿ ಫ್ಲೋರೆನ್ಸ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಈ ಬಟ್ಟೆ ಸಂಪೂರ್ಣ ಪಾರದರ್ಶಕವಾಗಿತ್ತು. ಅವರು ಒಳ ಉಡುಪು ಕೂಡ ಹಾಕಿರಲಿಲ್ಲ. ಹೀಗಾಗಿ, ಅವರ ಎದೆ ಭಾಗ ಸಂಪೂರ್ಣವಾಗಿ ಕಾಣಿಸಿದೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಅನೇಕರು ಟೀಕೆ ಮಾಡಿದ್ದರು. ಕೆಲವರು ಅಶ್ಲೀಲ ಕಮೆಂಟ್ಗಳನ್ನು ಕೂಡ ಹಾಕಿದ್ದರು. ಇದಕ್ಕೆ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಅಷ್ಟೇ ಅಲ್ಲ ಈ ರೀತಿ ಟ್ರೋಲ್ ಮಾಡಿದವರಿಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಹಾಲಿವುಡ್ ದಿಗ್ಗಜ ನಟ ಜೇಮ್ಸ್ ಕಾನ್ ನಿಧನ; ‘ದಿ ಗಾಡ್ಫಾದರ್’ ಕಲಾವಿದನಿಗೆ ಶ್ರದ್ಧಾಂಜಲಿ
ಕೆಟ್ಟ ರೀತಿಯಲ್ಲಿ ಟ್ರೋಲ್ ಮಾಡುವುದನ್ನು ಯಾವ ಸೆಲೆಬ್ರಿಟಿಗಳು ಸಹಿಸುವುದಿಲ್ಲ. ಅದೇ ರೀತಿ ಫ್ಲೋರೆನ್ಸ್ ಕೂಡ ಈ ವಿಚಾರದಲ್ಲಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ‘ಅದು ನೆಗೆಟಿವ್ ಕಮೆಂಟ್ ಇರಬಹುದು ಅಥವಾ ಪಾಸಿಟಿವ್ ಕಮೆಂಟ್ ಇರಬಹುದು, ನಾವು ಏನು ಮಾಡುತ್ತಿದ್ದೇವೆ ಎಂಬುದು ನಮಗೆ ತಿಳಿದಿದೆ. ಮಹಿಳೆಯ ದೇಹವನ್ನು ಸಾರ್ವಜನಿಕವಾಗಿ, ಹೆಮ್ಮೆಯಿಂದ, ಎಲ್ಲರೂ ನೋಡುವಂತೆ ಸಂಪೂರ್ಣವಾಗಿ ನಾಶಮಾಡುವುದು ಪುರುಷರಿಗೆ ಎಷ್ಟು ಸುಲಭ’ ಎಂದಿರುವ ಅವರು, ‘ನನ್ನ ಸ್ತನದ ಗಾತ್ರದ ಬಗ್ಗೆ ನನಗೆ ಸಂಪೂರ್ಣವಾಗಿ ತಿಳಿದಿದೆ. ನೀವು ಸ್ತನಗಳಿಗೆ ಏಕೆ ಹೆದರುತ್ತೀರಿ?’ ಎಂದು ಪ್ರಶ್ನೆ ಮಾಡಿದ್ದಾರೆ.
Published On - 7:50 pm, Mon, 11 July 22