AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

James Caan: ಹಾಲಿವುಡ್​ ದಿಗ್ಗಜ ನಟ ಜೇಮ್ಸ್​ ಕಾನ್​ ನಿಧನ; ‘ದಿ ಗಾಡ್​ಫಾದರ್​’ ಕಲಾವಿದನಿಗೆ ಶ್ರದ್ಧಾಂಜಲಿ

James Caan Death: ತೀರಾ ಇತ್ತೀಚಿನ ವರ್ಷಗಳವರೆಗೂ ಜೇಮ್ಸ್​ ಕಾನ್​ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದರು. ಸಿನಿಮಾ ಮಾತ್ರವಲ್ಲದೇ ಹಲವಾರು ಟಿವಿ ಶೋಗಳಲ್ಲಿ ಅವರು ನಟಿಸಿದ್ದರು.

James Caan: ಹಾಲಿವುಡ್​ ದಿಗ್ಗಜ ನಟ ಜೇಮ್ಸ್​ ಕಾನ್​ ನಿಧನ; ‘ದಿ ಗಾಡ್​ಫಾದರ್​’ ಕಲಾವಿದನಿಗೆ ಶ್ರದ್ಧಾಂಜಲಿ
ಜೇಮ್ಸ್ ಕಾನ್
TV9 Web
| Edited By: |

Updated on:Jul 08, 2022 | 8:49 AM

Share

‘ದಿ ಗಾಡ್​ಫಾದರ್​’ (The Godfather) ಸಿನಿಮಾ ಖ್ಯಾತಿಯ ಹಾಲಿವುಡ್​ ನಟ ಜೇಮ್ಸ್​ ಕಾನ್​ (James Caan) ಅವರು ನಿಧನರಾಗಿದ್ದಾರೆ. ಬುಧವಾರ (ಜುಲೈ 6) ಸಂಜೆ ಅವರು ಕೊನೆಯುಸಿರು ಎಳೆದರು ಎಂದು ಕುಟುಂಬದವರೇ ತಿಳಿಸಿದ್ದಾರೆ. ಟ್ವಿಟರ್​ ಮೂಲಕ ಈ ಸುದ್ದಿಯನ್ನು ಖಚಿತಪಡಿಸಲಾಗಿದೆ. ಬರೋಬ್ಬರಿ ಆರು ದಶಕಗಳ ಕಾಲ ಬಣ್ಣದ ಲೋಕದಲ್ಲಿ ಜೇಮ್ಸ್​ ಕಾನ್​ ಸಕ್ರಿಯರಾಗಿದ್ದರು. ಅಮೆರಿಕದ ಈ ನಟನಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಹಲವಾರು ಗಮನಾರ್ಹ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಅವರು ಈಗ ನೆನಪು ಪಾತ್ರ. ಜೇಮ್ಸ್​ ಕಾನ್​ ನಿಧನಕ್ಕೆ (James Caan Death) ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ಕಂಬನಿ ಮಿಡಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಜೇಮ್ಸ್​ ಕಾನ್​ ಅವರಿಗೆ 82 ವರ್ಷ ವಯಸ್ಸಾಗಿತ್ತು. ‘ಜಿಮ್ಮಿ ಅವರು ಬುಧವಾರ ಸಂಜೆ ಮೃತರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಹರಿದುಬರುತ್ತಿರುವ ಪ್ರೀತಿ ಮತ್ತು ಸಂತಾಪಕ್ಕೆ ಕುಟುಂಬದಿಂದ ಧನ್ಯವಾದಗಳು. ಈ ಕಷ್ಟದ ಸಂದರ್ಭದಲ್ಲಿ ಕುಟುಂಬದ ಖಾಸಗಿತನವನ್ನು ಗೌರವಿಸಬೇಕಾಗಿ ವಿನಂತಿ’ ಎಂದು ಟ್ವೀಟ್​ ಮಾಡಲಾಗಿದೆ.

ಇದನ್ನೂ ಓದಿ
Image
ಯೋಗರಾಜ್ ಭಟ್ ಮಾವ, ಸ್ಯಾಂಡಲ್​ವುಡ್ ಕಲಾವಿದ ಸತ್ಯ ನಾರಾಯಣ್ ಹೃದಯಾಘಾತದಿಂದ ನಿಧನ
Image
Edava Basheer Death: ಹಾಡುವಾಗಲೇ ವೇದಿಕೆಯಲ್ಲಿ ಕುಸಿದು ಬಿದ್ದು ಆರ್ಕೆಸ್ಟ್ರಾ ಗಾಯಕ ಎಡವ ಬಶೀರ್​ ನಿಧನ; ವಿಡಿಯೋ ವೈರಲ್​
Image
Chalapathi Chowdary Death: ಹಿರಿಯ ನಟ ಕ್ಯಾಪ್ಟನ್​ ಚಲಪತಿ ಚೌದ್ರಿ ನಿಧನ
Image
Mohan Juneja: ಖ್ಯಾತ ನಟ ಮೋಹನ್​ ಜುನೇಜ ನಿಧನ; ‘ಕೆಜಿಎಫ್​’ ಚಿತ್ರದಲ್ಲಿ ಅಭಿನಯಿಸಿದ್ದ ಜನಪ್ರಿಯ ಕಲಾವಿದ ಇನ್ನಿಲ್ಲ

ಜೇಮ್ಸ್​ ಕಾನ್​ ಜನಿಸಿದ್ದು 1940ರಲ್ಲಿ. ಬಾಲ್ಯದಲ್ಲಿಯೇ ಅವರಿಗೆ ನಟನೆ ಬಗ್ಗೆ ಆಸಕ್ತಿ ಇತ್ತು. ನಂತರದ ದಿನಗಳಲ್ಲಿ ಅವರು ರಂಗಭೂಮಿಯಲ್ಲಿ ತೊಡಗಿಕೊಂಡರು. ಬಳಿಕ ಟಿವಿ ಶೋಗಳು ಹಾಗೂ ಸಿನಿಮಾಗಳಲ್ಲೂ ಅವರಿಗೆ ಅವಕಾಶ ಸಿಗಲು ಆರಂಭ ಆಯಿತು. 1960ರ ಸಮಯದಲ್ಲಿ ಅವರು ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳಲು ಶುರುಮಾಡಿದರು. 1965ರಲ್ಲಿ ‘ಎಲ್ ಡೊರಾಡೊ’ ಸಿನಿಮಾ ಮೂಲಕ ಅವರು ಮೊದಲ ಬಾರಿಗೆ ಹೀರೋ ಆದರು. ಹಾಗಿದ್ದರೂ ಕೂಡ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದು ‘ದಿ ಗಾಡ್​ಫಾದರ್​’ ಚಿತ್ರದ ಮೂಲಕ.

ಇದನ್ನೂ ಓದಿ: Jr NTR: ರಸ್ತೆ ಅಪಘಾತದಲ್ಲಿ ಜ್ಯೂ. ಎನ್​ಟಿಆರ್​ ಅಭಿಮಾನಿ ನಿಧನ; ಸ್ಟಾರ್​ ನಟನ ಪ್ರಾರ್ಥನೆಯೂ ಫಲಿಸಲಿಲ್ಲ

1972ರಲ್ಲಿ ‘ದಿ ಗಾಡ್​ ಫಾದರ್​’ ಸಿನಿಮಾ ತೆರೆಕಂಡಿತು. ಆ ಚಿತ್ರದಲ್ಲಿ ಜೇಮ್ಸ್ ಕಾನ್​ ಮಾಡಿದ ಸನ್ನಿ ಕಾರ್ಲಿಯೋನ್​ ಎಂಬ ಪಾತ್ರ ಸಖತ್​ ಜನಪ್ರಿಯವಾಯಿತು. ಆ ಮೂಲಕ ಅವರು ಅಪಾರ ಜನಪ್ರಿಯತೆ ಪಡೆದುಕೊಂಡರು. ಆ ಪಾತ್ರದಲ್ಲಿನ ಅಭಿನಯಕ್ಕಾಗಿ ಅವರು ಆಸ್ಕರ್​ ಪ್ರಶಸ್ತಿ ಮತ್ತು ಗೋಲ್ಡನ್​ ಗ್ಲೋಬ್​ ಪ್ರಶಸ್ತಿಗೆ ನಾಮಿನೇಟ್​ ಆಗಿದ್ದರು.

ತೀರಾ ಇತ್ತೀಚಿನ ವರ್ಷಗಳವರೆಗೂ ಜೇಮ್ಸ್​ ಕಾನ್​ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದರು. ಸಿನಿಮಾ ಮಾತ್ರವಲ್ಲದೇ ಹಲವಾರು ಟಿವಿ ಶೋಗಳಲ್ಲಿ ಅವರು ನಟಿಸಿದ್ದರು. ಹಲವಾರು ಸ್ಮರಣೀಯ ಪಾತ್ರಗಳ ಮೂಲಕ ಅವರು ಅಭಿಮಾನಿಗಳ ಮನದಲ್ಲಿ ಎಂದೆಂದಿಗೂ ಶಾಶ್ವತವಾಗಿ ಇರಲಿದ್ದಾರೆ.

Published On - 7:36 am, Fri, 8 July 22

Follow Us
TV9 Web
TV9 Web

TV9 Kannada

Read More
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ