Samantha: ಸಮಂತಾಗೆ ಜೋಡಿಯಾಗಲು ಸಿದ್ಧವಾಗಿದೆ ಬಾಲಿವುಡ್​ ಹೀರೋಗಳ ಪಟ್ಟಿ; ಆದ್ರೂ ಫ್ಯಾನ್ಸ್​ಗೆ ಸಮಾಧಾನ ಇಲ್ಲ

Samantha Ruth Prabhu: ಬಾಲಿವುಡ್​ನಲ್ಲಿ ಸಮಂತಾ ಅವರ ಚೊಚ್ಚಲ ಪ್ರಾಜೆಕ್ಟ್​ ಬಗ್ಗೆ ಹೆಚ್ಚು ಕೌತುಕ ಮೂಡಿದೆ. ಈ ಕುರಿತು ಅಭಿಮಾನಿಗಳ ವಲಯದಲ್ಲಿ ಸಖತ್​ ಚರ್ಚೆ ಆಗುತ್ತಿದೆ.

Samantha: ಸಮಂತಾಗೆ ಜೋಡಿಯಾಗಲು ಸಿದ್ಧವಾಗಿದೆ ಬಾಲಿವುಡ್​ ಹೀರೋಗಳ ಪಟ್ಟಿ; ಆದ್ರೂ ಫ್ಯಾನ್ಸ್​ಗೆ ಸಮಾಧಾನ ಇಲ್ಲ
ಸಮಂತಾ
Follow us
TV9 Web
| Updated By: ಮದನ್​ ಕುಮಾರ್​

Updated on: Jul 09, 2022 | 8:30 AM

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ಸಖತ್​ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಮಿಂಚಿದ ಬಳಿಕ ಅವರಿಗೆ ಬಾಲಿವುಡ್​ನಲ್ಲೂ ಡಿಮ್ಯಾಂಡ್​ ಹೆಚ್ಚಿದೆ. ಬ್ಯಾಕ್​ ಟು ಬ್ಯಾಕ್​ ಹಿಂದಿ ಸಿನಿಮಾಗಳಿಗೆ ಅವರು ಸಹಿ ಮಾಡುತ್ತಿದ್ದಾರೆ. ತಮ್ಮ ಸಿನಿಮಾ ಜರ್ನಿ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ಸಮಂತಾ (Samantha) ಅವರಿಗೆ ಸ್ಪಷ್ಟ ಐಡಿಯಾ ಇದೆ. ಅದಕ್ಕೆ ತಕ್ಕಂತೆಯೇ ಅವರು ಆಫರ್​ಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ ಅವರ ಅಭಿಮಾನಿಗಳ ನಿರೀಕ್ಷೆ ಇನ್ನೂ ದೊಡ್ಡ ಮಟ್ಟದಲ್ಲಿದೆ. ಬಾಲಿವುಡ್​ನಲ್ಲಿ (Bollywood) ಸಮಂತಾ ಅವರು ಮೊದಲ ಶ್ರೇಣಿಯ ಹೀರೋಗಳ ಜೊತೆ ನಟಿಸಬೇಕು ಎಂಬುದು ಅಭಿಮಾನಿಗಳ ಆಸೆ. ಆದರೆ ಸದ್ಯಕ್ಕೆ ಅದು ಸಾಧ್ಯವಾಗುತ್ತಿಲ್ಲ. ಹಾಗಾಗಿ ಫ್ಯಾನ್ಸ್​ ಕೊಂಚ ಬೇಸರ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿಬಂದಿದೆ.

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿ ಹಿಂದಿಯಲ್ಲಿ ರಿಲೀಸ್​ ಆದಾಗ ಉತ್ತರ ಭಾರತದ ಪ್ರೇಕ್ಷಕರು ಮುಗಿಬಿದ್ದು ನೋಡಿದರು. ಅದರಲ್ಲಿ ಸಮಂತಾ ಮಾಡಿದ ರಾಜಿ ಎಂಬ ಪಾತ್ರ ಸಿಕ್ಕಾಪಟ್ಟೆ ಹೈಲೈಟ್​ ಆಯಿತು. ಬಳಿಕ ‘ಪುಷ್ಪ’ ಸಿನಿಮಾದಲ್ಲಿ ಅವರು ಐಟಂ ಡ್ಯಾನ್ಸ್​ ಮಾಡಿ ಧೂಳೆಬ್ಬಿಸಿದರು. ಇಷ್ಟೆಲ್ಲಾ ಜನಪ್ರಿಯತೆ ಇರುವ ಅವರ ಬಾಲಿವುಡ್​ ಪಯಣ ಅದ್ದೂರಿಯಾಗಿ ಇರಬೇಕು ಎಂದು ಫ್ಯಾನ್ಸ್​ ನಿರೀಕ್ಷಿಸುತ್ತಿದ್ದಾರೆ.

ಬಾಲಿವುಡ್​ನಲ್ಲಿ ಸಮಂತಾ ಅವರ ಚೊಚ್ಚಲ ಪ್ರಾಜೆಕ್ಟ್​ ಬಗ್ಗೆ ಹೆಚ್ಚು ಕೌತುಕ ಮೂಡಿದೆ. ಮೂಲಗಳ ಪ್ರಕಾರ ಅವರು ಆಯುಷ್ಮಾನ್​ ಖುರಾನ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಆದಾದ ಬಳಿಕ ವಿಕ್ಕಿ ಕೌಶಲ್​ ಜೊತೆ ನಟಿಸಲಿದ್ದಾರೆ. ಈ ಹೀರೋಗಳಿಗೂ ದೊಡ್ಡ ಅಭಿಮಾನಿ ಬಳಗ ಇದೆ ಎಂಬುದು ನಿಜ. ಆದರೆ ಅಕ್ಷಯ್​ ಕುಮಾರ್​, ಸಲ್ಮಾನ್​ ಖಾನ್​, ಶಾರುಖ್​ ಖಾನ್​, ಆಮಿರ್​ ಖಾನ್​ ರೀತಿ ಸೂಪರ್​ ಸ್ಟಾರ್​ಗಳ ಜೊತೆ ಸಮಂತಾ ನಟಿಸಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ
Image
Sobhita Dhulipala: ಸಮಂತಾ ಮಾಜಿ ಪತಿ ನಾಗ ಚೈತನ್ಯ ಹೆಸರು ಎತ್ತಿದ್ದಕ್ಕೆ ಮಧ್ಯ ಬೆರಳು ತೋರಿಸಿ ಗರಂ ಆದ ಶೋಭಿತಾ?
Image
ದೇಶದ ಅತ್ಯಂತ ಜನಪ್ರಿಯ ನಟಿ ಸಮಂತಾ; ರಶ್ಮಿಕಾ ಮಂದಣ್ಣಗೆ ಎಷ್ಟನೇ ಸ್ಥಾನ?
Image
‘ನಿಮ್ಮ ಕೆಲಸದ ಮೇಲೆ ಗಮನಹರಿಸಿ’; ನಾಗ ಚೈತನ್ಯ ಫ್ಯಾನ್ಸ್​​ಗೆ ಎಚ್ಚರಿಕೆ ನೀಡಿದ ಸಮಂತಾ
Image
ಒಟ್ಟಿಗೆ ಕಾಣಿಸಿಕೊಂಡ ಸಮಂತಾ ಮತ್ತು ರಣವೀರ್ ಸಿಂಗ್​​; ವೈರಲ್ ಆಯ್ತು ಫೋಟೋ

ಇದನ್ನೂ ಓದಿ: Samantha: ಸಮಂತಾ-ನಾಗ ಚೈತನ್ಯ ವಿಚ್ಛೇದನಕ್ಕೆ ಅಸಲಿ ಕಾರಣ ಬಹಿರಂಗ ಆಗುವ ಸಮಯ ಬಂತಾ? ಹೆಚ್ಚಿತು ಕೌತುಕ

ಸಮಂತಾ ಅವರು ಕೇವಲ ಒಂದು ಭಾಷೆಯ ಚಿತ್ರರಂಗಕ್ಕೆ ಸೀಮಿತ ಆಗಿಲ್ಲ. ಎಲ್ಲ ಭಾಷೆಯಲ್ಲೂ ಅವರು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಇಂಗ್ಲಿಷ್​ ನಿರ್ದೇಶಕ ಫಿಲಿಪ್​​ ಜಾನ್​ ಜೊತೆ ಅವರು ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ‘ಖುಷಿ’, ‘ಯಶೋಧ’, ‘ಶಾಕುಂತಲಂ’ ಮುಂತಾದ ಸಿನಿಮಾಗಳ ಕೆಲಸಗಳಲ್ಲೂ ಅವರು ಬ್ಯುಸಿ ಆಗಿದ್ದಾರೆ. ಒಟಿಟಿ ದುನಿಯಾದಿಂದಲೂ ಅವರಿಗೆ ಹಲವು ಆಫರ್​ಗಳು ಬರುತ್ತಿವೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ