‘ಅವರು ಯಾವತ್ತಿದ್ರೂ ನಮ್ಮ ಹೀರೋಯಿನ್’; ಡ್ರಾಮಾ ಜ್ಯೂನಿಯರ್ಸ್ನಲ್ಲಿ ಒಂದಾದ ‘ಮಲ್ಲ’ ಜೋಡಿ
ಜೀ ಕನ್ನಡ ವಾಹಿನಿಯಲ್ಲಿ ‘ಡ್ರಾಮಾ ಜ್ಯೂನಿಯರ್ಸ್’ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 7.30ಕ್ಕೆ ಪ್ರಸಾರ ಆಗಲಿದೆ. ಈ ವೀಕೆಂಡ್ನಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಅತಿಥಿಯಾಗಿ ಆಗಮಿಸಿದ ಶೋ ಪ್ರಸಾರ ಕಾಣಲಿದೆ.
ಪ್ರಿಯಾಂಕಾ ಉಪೇಂದ್ರ (Priyanka Upendra) ಅವರಿಗೆ ಸ್ಯಾಂಡಲ್ವುಡ್ನಲ್ಲಿ ಸಖತ್ ಬೇಡಿಕೆ ಇದೆ. ಅವರು ನಟಿಸಿದ ಅನೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಬೆಂಗಾಲಿ ಮೂಲದವರಾದರೂ ಅವರು ಈಗ ನೆಲೆಸಿರುವುದು ಕರ್ನಾಟಕದಲ್ಲಿ. ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ. ಸದ್ಯ, ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಈ ಮಧ್ಯೆ ಬಿಡುವು ಮಾಡಿಕೊಂಡು ಅವರು ಕಿರುತೆರೆ ಶೋಗೂ ಬಂದಿದ್ದಾರೆ. ಜೀ ಕನ್ನಡ ವಾಹಿನಿಯ ‘ಡ್ರಾಮಾ ಜ್ಯೂನಿಯರ್ಸ್’ ಶೋಗೆ (Drama Juniors Season 4) ಅವರ ಆಗಮನ ಆಗಿದೆ.
‘ಡ್ರಾಮಾ ಜ್ಯೂನಿಯರ್ಸ್’ನ 4ನೇ ಸೀಸನ್ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ. ಇದಕ್ಕೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಸಾಕಷ್ಟು ಕಲಾವಿದರಿಗೆ ಈ ವೇದಿಕೆ ಅವಕಾಶ ನೀಡಿದೆ. ರವಿಚಂದ್ರನ್ ಹಾಗೂ ಲಕ್ಷ್ಮೀ ಇಬ್ಬರೂ ಈ ಕಾರ್ಯಕ್ರಮಕ್ಕೆ ಜಡ್ಜ್ ಆಗಿದ್ದಾರೆ. ಈ ಬಾರಿ ಈ ವೇದಿಕೆಗೆ ಪ್ರಿಯಾಂಕಾ ಉಪೇಂದ್ರ ಅವರ ಆಗಮನ ಆಗಿದೆ. ‘ಡ್ರಾಮಾ ಜ್ಯೂನಿಯರ್ಸ್’ ವೇದಿಕೆಗೆ ಹೊಸ ಕಳೆ ಬಂದಿದೆ.
ಪ್ರಿಯಾಂಕಾ ಉಪೇಂದ್ರ ಅವರು ವೇದಿಕೆ ಮೇಲೆ ಬರುತ್ತಿದ್ದಂತೆ ರವಿಚಂದ್ರನ್ ಅವರು ‘ಅವರು ಯಾವಾಗಲೂ ನಮ್ಮ ಹೀರೋಯಿನ್’ ಎಂದು ಸ್ವಾಗತಿಸಿದರು. ರವಿಚಂದ್ರನ್ ಹಾಗೂ ಪ್ರಿಯಾಂಕಾ ‘ಮಲ್ಲ’ ಹಾಗೂ ‘ಕ್ರೇಜಿ ಸ್ಟಾರ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಕಾರಣಕ್ಕೆ ಇಬ್ಬರ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆದಿದೆ. ಈ ಕಾರಣದಿಂದ ಅವರನ್ನು ತುಂಬಾನೇ ಪ್ರೀತಿಯಿಂದ ಬರಮಾಡಿಕೊಂಡರು ರವಿಚಂದ್ರನ್.
View this post on Instagram
‘ಡ್ರಾಮಾ ಜ್ಯೂನಿಯರ್ಸ್’ ವೇದಿಕೆ ಮೇಲೆ ಪ್ರಿಯಾಂಕಾ ಉಪೇಂದ್ರ ಹಾಗೂ ರವಿಚಂದ್ರನ್ ಸಖತ್ ಆಗಿ ಸ್ಟೆಪ್ ಹಾಕಿ ಎಲ್ಲರ ಗಮನ ಸೆಳೆದರು. ಇದನ್ನು ರೀಲ್ಸ್ ಮಾಡಿ ಜೀ ಕನ್ನಡ ವಾಹಿನಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ‘ಮಲ್ಲ’ ಚಿತ್ರದ ‘ಯಮ್ಮೋ ಯಮ್ಮೋ ನೋಡ್ಡೇ ನೋಡ್ಡೇ..’ ಹಾಡು ಸಖತ್ ಫೇಮಸ್ ಆಗಿತ್ತು. ಇದೇ ಹಾಡಿಗೆ ರವಿಚಂದ್ರನ್ ಹಾಗೂ ಪ್ರಿಯಾಂಕಾ ಡ್ಯಾನ್ಸ್ ಮಾಡಿದ್ದಾರೆ.
ಇದನ್ನೂ ಓದಿ: ಸ್ಕೂಲ್ ಟೀಚರ್ ಆದ್ರು ಪ್ರಿಯಾಂಕಾ ಉಪೇಂದ್ರ; ‘ಮಿಸ್ ನಂದಿನಿ’ ಚಿತ್ರದಲ್ಲಿ ಹಿರಿಯ ನಟಿ ಭವ್ಯಾ ಪಾತ್ರ ಏನು?
ಜೀ ಕನ್ನಡ ವಾಹಿನಿಯಲ್ಲಿ ‘ಡ್ರಾಮಾ ಜ್ಯೂನಿಯರ್ಸ್’ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 7.30ಕ್ಕೆ ಪ್ರಸಾರ ಆಗಲಿದೆ. ಈ ವೀಕೆಂಡ್ನಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಅತಿಥಿಯಾಗಿ ಆಗಮಿಸಿದ ಎಪಿಸೋಡ್ ಪ್ರಸಾರ ಕಾಣಲಿದೆ. ಇದಕ್ಕಾಗಿ ಅವರ ಫ್ಯಾನ್ಸ್ ಕಾದು ಕೂತಿದ್ದಾರೆ.