ಒಟಿಟಿ ಪ್ರಿಯರಿಗೆ ಕಹಿ ಸುದ್ದಿ ನೀಡಿದ ಬಾಲಿವುಡ್​; ಸಿನಿಮಾ ರಿಲೀಸ್ ವಿಚಾರದಲ್ಲಿ ಭಾರೀ ಬದಲಾವಣೆ

ಚಿತ್ರಮಂದಿರದಲ್ಲಿ ಕಲೆಕ್ಷನ್ ಆಗದ ಕಾರಣ ಅನೇಕ ಸಿನಿಮಾಗಳು ರಿಲೀಸ್ ಆದ ಕೆಲವೇ ವಾರಗಳಲ್ಲಿ ಒಟಿಟಿಗೆ ಹೆಜ್ಜೆ ಹಾಕಿವೆ. ಆದರೆ, ಇನ್ನುಮುಂದೆ ಥಿಯೇಟರ್​ನಲ್ಲಿ ರಿಲೀಸ್ ಆದ ಚಿತ್ರಗಳು ಒಟಿಟಿಯಲ್ಲಿ ರಿಲೀಸ್ ಆಗಲು ಪ್ರೇಕ್ಷಕರು 8 ವಾರ ಕಾಯಲೇಬೇಕು.

ಒಟಿಟಿ ಪ್ರಿಯರಿಗೆ ಕಹಿ ಸುದ್ದಿ ನೀಡಿದ ಬಾಲಿವುಡ್​; ಸಿನಿಮಾ ರಿಲೀಸ್ ವಿಚಾರದಲ್ಲಿ ಭಾರೀ ಬದಲಾವಣೆ
ಒಟಿಟಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 09, 2022 | 10:08 AM

ಕೊವಿಡ್ (Covid) ಕಾಣಿಸಿಕೊಂಡ ನಂತರದಲ್ಲಿ ಸಿನಿಮಾ ರಂಗದವರು ಒಟಿಟಿಗೆ ಹೆಚ್ಚು ಆದ್ಯತೆ ನೀಡಲು ಆರಂಭಿಸಿದರು. ಹಲವು ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆದವು. ಕೆಲ ಸಿನಿಮಾಗಳು ಥಿಯೇಟರ್​ನಲ್ಲಿ ರಿಲೀಸ್ ಆದ ಹೊರತಾಗಿಯೂ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗದೆ ಇದ್ದರೆ ಅದನ್ನು ಮೂರು ಅಥವಾ ನಾಲ್ಕೇ ವಾರಕ್ಕೆ ಒಟಿಟಿಗೆ ತರಲಾಗುತ್ತಿತ್ತು. ಆದರೆ, ಈಗ ಒಟಿಟಿ ವಿಚಾರದಲ್ಲಿ ಬಾಲಿವುಡ್ (Bollywood)​ ಮಂದಿ ದೊಡ್ಡ ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ವರದಿ ಆಗಿದೆ. ಇದರಿಂದ ಆನ್​ಲೈನ್​ನಲ್ಲಿ ಸಿನಿಮಾ ನೋಡಬೇಕು ಎಂದುಕೊಂಡಿದ್ದವರಿಗೆ ಕೊಂಚ ಬೇಸರ ಆಗಿದೆ.

ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್​ನಲ್ಲಿ ಸಾಕಷ್ಟು ದೊಡ್ಡ ಬಜೆಟ್ ಚಿತ್ರಗಳು ರಿಲೀಸ್ ಆಗಿವೆ. ಇದರಲ್ಲಿ ಗೆದ್ದಿದ್ದು ಬೆರಳೆಣಿಕೆಯ ಸಿನಿಮಾಗಳು ಮಾತ್ರ. ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ ನಟರ ಸಿನಿಮಾಗಳೇ ಮಕಾಡೆ ಮಲಗಿದವು. ಚಿತ್ರಮಂದಿರದಲ್ಲಿ ಕಲೆಕ್ಷನ್ ಆಗದ ಕಾರಣ ಅನೇಕ ಸಿನಿಮಾಗಳು ರಿಲೀಸ್ ಆದ ಕೆಲವೇ ವಾರಗಳಲ್ಲಿ ಒಟಿಟಿಗೆ ಹೆಜ್ಜೆ ಹಾಕಿವೆ. ಆದರೆ, ಇನ್ನುಮುಂದೆ ಥಿಯೇಟರ್​ನಲ್ಲಿ ರಿಲೀಸ್ ಆದ ಚಿತ್ರಗಳು ಒಟಿಟಿಯಲ್ಲಿ ರಿಲೀಸ್ ಆಗಲು ಪ್ರೇಕ್ಷಕರು 8 ವಾರ ಕಾಯಲೇಬೇಕು. ಈ ಹೊಸ ನಿಯಮ ಆಗಸ್ಟ್​ 1ರಿಂದ ಜಾರಿಗೆ ಬರಲಿದೆ.

‘ರಕ್ಷಾ ಬಂಧನ’, ‘ಲಾಲ್ ಸಿಂಗ್ ಚಡ್ಡಾ’, ‘ಲೈಗರ್’, ‘ಬ್ರಹ್ಮಾಸ್ತ್ರ’ ಮೊದಲಾದ ದೊಡ್ಡ ಬಜೆಟ್ ಚಿತ್ರಗಳು ತೆರೆಗೆ ಬರಲು ರೆಡಿ ಆಗಿವೆ. ಈ ಸಿನಿಮಾವನ್ನು ಆನ್​ಲೈನ್​ನಲ್ಲಿ ನೋಡಬೇಕು ಎಂದರೆ ಎರಡು ತಿಂಗಳ ಕಾಯಬೇಕು. ಇದರಿಂದಾಗಿ ಒಟಿಟಿ ಪ್ರಿಯರಿಗೆ ಕೊಂಚ ಬೇಸರ ಆಗಿದೆ.

ಇದನ್ನೂ ಓದಿ
Image
Virata Parvam OTT Release: ಥಿಯೇಟರ್​ನಲ್ಲಿ ಸೋತ ಸಾಯಿ ಪಲ್ಲವಿಯ ‘ವಿರಾಟ ಪರ್ವಂ’ ಚಿತ್ರಕ್ಕೀಗ ಒಟಿಟಿಯೇ ಗತಿ; ಪ್ರಸಾರ​ ಯಾವಾಗ?
Image
Sai Pallavi: ಥಿಯೇಟರ್​ಗೆ ಜನರನ್ನು ಕರೆಸುವಲ್ಲಿ ಸೋತ ಸಾಯಿ ಪಲ್ಲವಿ; ‘ಲೇಡಿ ಪವರ್​ ಸ್ಟಾರ್​’ ಬಿರುದು ಈಗೇನಾಯ್ತು?
Image
Sai Pallavi: ಸಾಯಿ ಪಲ್ಲವಿ ಬೆಂಬಲಕ್ಕೆ ನಿಂತ ಸಾವಿರಾರು ಮಂದಿ; ಸ್ಪಷ್ಟನೆ ವಿಡಿಯೋ ಕಂಡು ಜನರು ಹೇಳ್ತಿರೋದೇನು?
Image
Sai Pallavi: ಸಾಯಿ ಪಲ್ಲವಿ ವಿವಾದದ ಬಳಿಕ ‘ವಿರಾಟ ಪರ್ವಂ’ ಚಿತ್ರಕ್ಕೆ ಜನರು ನೀಡಿದ ರೇಟಿಂಗ್​ ಎಷ್ಟು?

ಇದನ್ನೂ ಓದಿ: ಥಿಯೇಟರ್​ನಲ್ಲಿ ಸೋತ ಸಾಯಿ ಪಲ್ಲವಿಯ ‘ವಿರಾಟ ಪರ್ವಂ’ ಚಿತ್ರಕ್ಕೀಗ ಒಟಿಟಿಯೇ ಗತಿ; ಪ್ರಸಾರ​ ಯಾವಾಗ?

ಮಹಾರಾಷ್ಟ್ರ ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ ಚಿತ್ರಮಂದಿರದಲ್ಲಿ ಶೇ.100 ಆಸನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಲ ಸಿನಿಮಾಗಳು ಒಳ್ಳೆಯ ಕಲೆಕ್ಷನ್ ಮಾಡುತ್ತಿವೆ. ಒಂದೇ ತಿಂಗಳಿಗೆ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂಬ ಕಾರಣಕ್ಕೆ ಹಲವು ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗುತ್ತಿರಲಿಲ್ಲ. ಈ ಕಾರಣದಿಂದ  8 ವಾರಗಳ ನಂತರ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಆದರೆ ಒಂದಷ್ಟು ಮಂದಿ ಥಿಯೇಟರ್​ನತ್ತ ಹೆಜ್ಜೆ ಹಾಕುವ ಸಾಧ್ಯತೆ ಇರುತ್ತದೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ