Major Movie: ಪಾಕಿಸ್ತಾನದ ಮಂದಿ ಮುಗಿಬಿದ್ದು ನೋಡ್ತಿದ್ದಾರೆ ಭಾರತದ ‘ಮೇಜರ್​’ ಸಿನಿಮಾ; ಈ ಚಿತ್ರದಲ್ಲಿ ಅಂಥದ್ದೇನಿದೆ?

Major Movie | OTT: ಥಿಯೇಟರ್​ನಲ್ಲಿ ಜೂನ್​ 3ರಂದು ‘ಮೇಜರ್​’ ಸಿನಿಮಾ ತೆರೆಕಂಡಿತು. ಈಗ ಒಟಿಟಿಯಲ್ಲೂ ಈ ಚಿತ್ರವನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ.

Major Movie: ಪಾಕಿಸ್ತಾನದ ಮಂದಿ ಮುಗಿಬಿದ್ದು ನೋಡ್ತಿದ್ದಾರೆ ಭಾರತದ ‘ಮೇಜರ್​’ ಸಿನಿಮಾ; ಈ ಚಿತ್ರದಲ್ಲಿ ಅಂಥದ್ದೇನಿದೆ?
‘ಮೇಜರ್’ ಸಿನಿಮಾ ಪೋಸ್ಟರ್​
Follow us
TV9 Web
| Updated By: ಮದನ್​ ಕುಮಾರ್​

Updated on: Jul 08, 2022 | 1:37 PM

ಕಲೆಗೆ ಯಾವುದೇ ಗಡಿ ಇಲ್ಲ. ದೇಶ-ಭಾಷೆಗಳನ್ನೂ ಮೀರಿ ಸಿನಿಮಾ ಬೆಳೆಯುತ್ತದೆ. ಒಟಿಟಿ ಬಳಕೆ ಹೆಚ್ಚಿದ ನಂತರ ಪ್ರೇಕ್ಷಕರು ಎಲ್ಲ ದೇಶಗಳ ಸಿನಿಮಾಗಳನ್ನೂ ನೋಡಿ ಎಂಜಾಯ್​ ಮಾಡುವ ಟ್ರೆಂಡ್​ ಜೋರಾಗಿದೆ. ಆ ಪೈಕಿ ಕೆಲವು ಸಿನಿಮಾಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ತೆಲುಗಿನ ‘ಮೇಜರ್​’ ಚಿತ್ರವನ್ನು ಪಾಕಿಸ್ತಾನದ ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅಡಿವಿ ಶೇಷ್​ (Adivi Sesh) ಮತ್ತು ಸಾಯಿ ಮಂಜ್ರೇಕರ್​ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾ ನೆಟ್​ಫ್ಲಿಕ್ಸ್​ ಮೂಲಕ ಒಟಿಟಿಗೆ ಕಾಲಿಟ್ಟಿತು. ಎಲ್ಲ ಕಡೆಗಳಿಂದಲೂ ‘ಮೇಜರ್​’ (Major Movie) ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪಾಕಿಸ್ತಾನದ (Pakistan) ಪ್ರೇಕ್ಷಕರು ಈ ಸಿನಿಮಾ ಬಗ್ಗೆ ವಿಶೇಷ ಆಸಕ್ತಿ ತೋರಿಸಲು ಕಾರಣ 26/11 ಮುಂಬೈ ಅಟ್ಯಾಕ್​ ಘಟನೆ!

ಹೌದು, ಈ ಸಿನಿಮಾದ ಮುಖ್ಯ ಕಥಾಹಂದರವೇ 26/11 ಘಟನೆ. ಪಾಕ್​ ಭಯೋತ್ಪಾದಕರು ಮುಂಬೈನ ತಾಜ್​ ಹೋಟೆಲ್​ ಮೇಲೆ ದಾಳಿ ಮಾಡಿದ ಕರಾಳ ದಿನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಯೋತ್ಪಾದಕರ ವಿರುದ್ಧ ಹೋರಾಡುತ್ತಾ ಮೇಜರ್​ ಸಂದೀಪ್​ ಉನ್ನಿಕೃಷ್ಣನ್​ ಅವರು ಅಸುನೀಗಿದ್ದರು. ಅವರ ಬಯೋಪಿಕ್​ ಮಾದರಿಯಲ್ಲಿ ‘ಮೇಜರ್​’ ಸಿನಿಮಾ ಮೂಡಿಬಂದಿದೆ.

ಥಿಯೇಟರ್​ನಲ್ಲಿ ಜೂನ್​ 3ರಂದು ‘ಮೇಜರ್​’ ಸಿನಿಮಾ ತೆರೆಕಂಡಿತು. ಉತ್ತಮ ಬಾಕ್ಸ್​ ಆಫೀಸ್​ ಕಲೆಕ್ಷನ್​ ಮಾಡುವುದರ ಜೊತೆಗೆ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿದ್ದರಿಂದ ಚಿತ್ರತಂಡಕ್ಕೆ ಖುಷಿ ಆಗಿತ್ತು. ಈಗ ಒಟಿಟಿಯಲ್ಲೂ ಈ ಚಿತ್ರವನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಭಾರತದ ಸಿನಿಮಾದಲ್ಲಿ ಪಾಕಿಸ್ತಾನದ ಬಗ್ಗೆ ಯಾವ ರೀತಿಯ ಅಭಿಪ್ರಾಯವನ್ನು ಬಿಂಬಿಸಲಾಗಿದೆ ಎಂಬುದನ್ನು ತಿಳಿಯುವ ಕೌತುಕ ಅಲ್ಲಿನ ಪ್ರೇಕ್ಷಕರಿಗೆ ಇದೆ. ಹಾಗಾಗಿ ಪಾಕ್​ ಪ್ರೇಕ್ಷಕರು ನೆಟ್​ಫ್ಲಿಕ್ಸ್​ನಲ್ಲಿ ‘ಮೇಜರ್​’ ಚಿತ್ರವನ್ನು ಮುಗಿಬಿದ್ದು ನೋಡುತ್ತಿದ್ದಾರೆ.

ಇದನ್ನೂ ಓದಿ
Image
ಆಲಿಯಾ ಕೋಪಕ್ಕೆ ಪಾಕಿಸ್ತಾನ ನಟಿಯರ ಬೆಂಬಲ; ‘ನಮ್ಮಲ್ಲೊಂದೇ ಹೀಗೆ ಎಂದುಕೊಂಡಿದ್ದೆ’ ಎಂದ ಪಾಕ್ ನಟಿ
Image
ಸೌತ್​ ಚಿತ್ರಗಳ ಎದುರು ಶೋ ಕಳೆದುಕೊಂಡ ‘ಸಾಮ್ರಾಟ್​ ಪೃಥ್ವಿರಾಜ್​’? ‘ವಿಕ್ರಮ್’​, ‘ಮೇಜರ್’​ ಮೇಲುಗೈ
Image
ಪಾಕಿಸ್ತಾನದ ಮಸೀದಿಯಲ್ಲಿ ಬಾಲಿವುಡ್​ ನಟಿಯ ಎಡವಟ್ಟು; ಅರೆಸ್ಟ್​ ವಾರೆಂಟ್​ ಹೊರಡಿಸಿದ ಕೋರ್ಟ್​
Image
ಪಾಕಿಸ್ತಾನಿ ಹುಡುಗನ ಜೊತೆ ಮದುವೆ ರದ್ದು ಮಾಡಿಕೊಂಡ ಬಾಲಿವುಡ್​ ನಟಿ ಸಬಾ! ಕಹಿಸತ್ಯಗಳೇ ಕಾರಣ

ಇದನ್ನೂ ಓದಿ: ಪಾಕಿಸ್ತಾನ, ಅಮೆರಿಕದಲ್ಲೂ ಅನುಷ್ಕಾ ಶರ್ಮಾ ಹೋಲುವ ನಟಿಯರು; ಒಬ್ಬರಿಗೆ ಇಷ್ಟ, ಮತ್ತೊಬ್ಬರಿಗೆ ಕಷ್ಟ

ಜುಲೈ 7ರಂದು ಪಾಕಿಸ್ತಾನದಲ್ಲಿ ‘ಮೇಜರ್​’ ಸಿನಿಮಾ ನೆಟ್​​ಫ್ಲಿಕ್ಸ್​ ಟ್ರೆಂಡಿಂಗ್​ನಲ್ಲಿ ನಂ.1 ಆಗಿತ್ತು. ಭಾರತದಲ್ಲೂ ಈ ಚಿತ್ರಕ್ಕೆ ಪ್ರೇಕ್ಷಕರು ಫುಲ್​ ಮಾರ್ಕ್ಸ್​ ನೀಡುತ್ತಿದ್ದಾರೆ. ಆ ಮೂಲಕ ನಟ ಅಡಿವಿ ಶೇಷ್​ ಅವರ ವೃತ್ತಿ ಜೀವನಕ್ಕೆ ದೊಡ್ಡ ಮೈಲೇಜ್​ ಸಿಕ್ಕಿದೆ. ಸಂದೀಪ್​ ಉನ್ನಿಕೃಷ್ಣನ್​ ಅವರ ಪಾತ್ರದಲ್ಲಿ ಅವರ ನಟನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾಗೆ ಶಶಿ ಕಿರಣ್​ ಟಿಕ್ಕಾ ನಿರ್ದೇಶನ ಮಾಡಿದ್ದಾರೆ.

ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್