Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಲಿಯಾ ಕೋಪಕ್ಕೆ ಪಾಕಿಸ್ತಾನ ನಟಿಯರ ಬೆಂಬಲ; ‘ನಮ್ಮಲ್ಲೊಂದೇ ಹೀಗೆ ಎಂದುಕೊಂಡಿದ್ದೆ’ ಎಂದ ಪಾಕ್ ನಟಿ

ಆಲಿಯಾ ಭಟ್ ಬಗ್ಗೆಯೂ ಈ ಮೊದಲು ಹಲವು ವದಂತಿಗಳು ಹುಟ್ಟಿಕೊಂಡಿದ್ದವು. ಆದರೆ, ಇದಕ್ಕೆಲ್ಲ ಅವರು ಬೇಸರ ಮಾಡಿಕೊಂಡಿಲ್ಲ. ಆದರೆ ಅವರ ಕುರಿತು ಹರಿದಾಡಿದ ವರದಿ ಬಗ್ಗೆ ಸಿಟ್ಟಾಗಿದ್ದಾರೆ.

ಆಲಿಯಾ ಕೋಪಕ್ಕೆ ಪಾಕಿಸ್ತಾನ ನಟಿಯರ ಬೆಂಬಲ; ‘ನಮ್ಮಲ್ಲೊಂದೇ ಹೀಗೆ ಎಂದುಕೊಂಡಿದ್ದೆ’ ಎಂದ ಪಾಕ್ ನಟಿ
ಜಾರಾ-ಆಲಿಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 29, 2022 | 10:25 PM

ನಟಿ ಆಲಿಯಾ ಭಟ್ (Alia Bhatt) ಅವರು ಇತ್ತೀಚೆಗೆ ಮಗುವಿನ ಆಗಮನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟರು. ಪ್ರೆಗ್ನೆನ್ಸಿಯಿಂದ ಈಗ ಆಲಿಯಾ ಒಪ್ಪಿಕೊಂಡಿರುವ ಸಿನಿಮಾ ಕೆಲಸಗಳು ವಿಳಂಬವಾಗಲಿದೆ ಎನ್ನುವ ವರದಿಗಳು ಪ್ರಕಟವಾದವು. ಆಲಿಯಾ ಅವರನ್ನು ಇಂಗ್ಲೆಂಡ್​ನಿಂದ ಭಾರತಕ್ಕೆ ಕರೆತರಲು ಪತಿ ರಣಬೀರ್ ಕಪೂರ್ (Ranbir Kapoor) ಅಲ್ಲಿಗೆ ತೆರಳಲಿದ್ದಾರೆ ಎಂದು ವರದಿ ಆಯಿತು. ಇದಕ್ಕೆ ಆಲಿಯಾ ಖಡಕ್ ಉತ್ತರ ನೀಡಿದ್ದರು. ಓಪನ್ ಆಗಿಯೇ ಈ ಬಗ್ಗೆ ಅವರು ಅಸಮಾಧಾನ ಹೊರಹಾಕಿದ್ದಾರೆ. ಈಗ ಆಲಿಯಾ ಬೆಂಬಲಕ್ಕೆ ಅನೇಕರು ನಿಂತಿದ್ದಾರೆ. ಪಾಕಿಸ್ತಾನದ ನಟಿಯರೂ ಆಲಿಯಾಗೆ ಸಪೋರ್ಟ್ ಮಾಡಿದ್ದಾರೆ.

ಸೆಲೆಬ್ರಿಟಿಗಳ ಬಗ್ಗೆ ನಿತ್ಯ ಹಲವು ವದಂತಿಗಳು ಹುಟ್ಟಿಕೊಳ್ಳುತ್ತಿರುತ್ತದೆ. ಬಹುತೇಕ ನಟಿಯರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆಲಿಯಾ ಭಟ್ ಬಗ್ಗೆಯೂ ಈ ಮೊದಲು ಹಲವು ವದಂತಿಗಳು ಹುಟ್ಟಿಕೊಂಡಿದ್ದವು. ಆದರೆ, ಇದಕ್ಕೆಲ್ಲ ಅವರು ಬೇಸರ ಮಾಡಿಕೊಂಡಿಲ್ಲ. ಆದರೆ ಅವರ ಕುರಿತು ಹರಿದಾಡಿದ ವರದಿ ಬಗ್ಗೆ ಸಿಟ್ಟಾಗಿದ್ದಾರೆ.

ಹಾಲಿವುಡ್​ನ ‘ಹಾರ್ಟ್ ಆಫ್ ಸ್ಟೋನ್​’ ಸಿನಿಮಾದಲ್ಲಿ ಆಲಿಯಾ ನಟಿಸುತ್ತಿದ್ದಾರೆ. ಈಗ ಆಲಿಯಾ ಪ್ರೆಗ್ನೆಂಟ್ ಆದ್ದರಿಂದ ಈ ಚಿತ್ರದ ಕೆಲಸಗಳು ವಿಳಂಬವಾಗುತ್ತದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇನ್ನು, ಈ ಚಿತ್ರದ ಶೂಟಿಂಗ್​ ಲಂಡನ್​ನಲ್ಲಿ ನಡೆಯುತ್ತಿದೆ. ಆಲಿಯಾರನ್ನು ಕರೆತರಲು ರಣಬೀರ್ ಕಪೂರ್ ಇಂಗ್ಲೆಂಡ್​ಗೆ ಹೋಗುತ್ತಾರೆ ಎನ್ನಲಾಗಿತ್ತು. ಇವೆರಡನ್ನೂ ಆಲಿಯಾ ಅಲ್ಲಗಳೆದಿದ್ದಾರೆ. ‘ನಾವಿನ್ನೂ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಇದು 2022. ನಾವು ಹಳೇ ಕಾಲದ ಆಲೋಚನೆಯಿಂದ ಹೊರಬರಬಹುದೇ?’ ಎಂದು ಆಲಿಯಾ ಪ್ರಶ್ನೆ ಮಾಡಿದ್ದರು.

ಇದನ್ನೂ ಓದಿ
Image
ವಿಮಾನ ನಿಲ್ದಾಣದಲ್ಲಿ ಗಾಬರಿಯಿಂದ ಓಡಿ ಹೋದ ನಟಿ ಆಲಿಯಾ ಭಟ್​; ವೈರಲ್​ ವಿಡಿಯೋದ ಸತ್ಯಾಂಶ ಏನು?
Image
ಮದುವೆ ಬಳಿಕ ಕೆಲಸಕ್ಕೆ ಹೊರಟ ಆಲಿಯಾ ಭಟ್​; ವಿಮಾನ ನಿಲ್ದಾಣದ ಎದುರು ಕಾಣಿಸಿಕೊಂಡ ಸುಂದರಿ
Image
ರಣಬೀರ್​​-ಆಲಿಯಾ ಮದುವೆಗೆ ದೀಪಿಕಾ, ಕತ್ರಿನಾ ಗಿಫ್ಟ್​ ಏನು? ದಂಪತಿಗೆ ಕೋಟ್ಯಂತರ ರೂ. ಬೆಲೆಯ ಉಡುಗೊರೆ
Image
ಹೆಣ್ಣಿನ ಕಡೆಯವರು ಕೇಳಿದ್ದು 11 ಕೋಟಿ ರೂ; ರಣಬೀರ್ ಕೊಟ್ಟಿದ್ದು 1 ಲಕ್ಷ ಮಾತ್ರ: ಆಲಿಯಾ ಮದುವೆ ಇನ್​ಸೈಡ್​​ ವಿಷಯ

ಆಲಿಯಾ ಅವರ ಈ ಹೇಳಿಕೆಗೆ ಪಾಕಿಸ್ತಾನ ನಟಿಯರಾದ ಜಾರಾ ನೂರಾ ಅಬ್ಬಾಸ್ ಹಾಗೂ ದುರ್​-ಎ-ಫಿಶನ್​ ಸಲೀಮ್ ಬೆಂಬಲ ನೀಡಿದ್ದಾರೆ. ‘ಪಾಕಿಸ್ತಾನದವರು ಮಾತ್ರ ಈ ರೀತಿ ಯೋಚಿಸುತ್ತಾರೆ ಎಂದು ನಾನು ಅಂದುಕೊಂಡಿದ್ದೆ. ನಾನು ಪ್ರೆಗ್ನೆನ್ಸಿ ಘೋಷಿಸಿದಾಗ ಅನೇಕ ಬ್ರ್ಯಾಂಡ್​ಗಳು ನನ್ನನ್ನು ಕೈಬಿಡಲು ಮುಂದಾದವು. ಮಹಿಳೆಯರು ಗರ್ಭಿಣಿ ಆಗುತ್ತಿದ್ದಾರೆ ಎಂದಾಗ ನಮ್ಮನ್ನು ಉಪಯೋಗಕ್ಕೆ ಬಾರದವರು ಎಂದು ಸಮಾಜ ನಿರ್ಧರಿಸುತ್ತದೆ. ನಮ್ಮ ಕಲೆಯನ್ನು ಪುರುಷರ ಎದುರು ಸಾಬೀತುಪಡಿಸಬೇಕಾಗಿಲ್ಲ’ ಎಂದು ಜಾರಾ ಬರೆದುಕೊಂಡಿದ್ದಾರೆ. ದುರ್​-ಎ-ಫಿಶನ್​ ಸಲೀಮ್ ಕೂಡ ಆಲಿಯಾ ಪರ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಪ್ರೆಗ್ನೆನ್ಸಿ ಘೋಷಣೆಗೂ ಮೊದಲು ಆಲಿಯಾ ಭಟ್ ತೆಗೆದುಕೊಂಡಿದ್ರು ಒಂದು ಮಹತ್ವದ ನಿರ್ಧಾರ

Alia Bhatt: ಪ್ರೆಗ್ನೆನ್ಸಿ ಬೆನ್ನಲ್ಲೇ ಆಲಿಯಾಗೆ ವಿಪರೀತ ಕೋಪ; ಅದಕ್ಕೆ ಕಾರಣ ಗಂಡನ ಕುರಿತ ಒಂದೇ ಒಂದು ಗಾಸಿಪ್​

Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ