ಪಾಕಿಸ್ತಾನದ ಮಸೀದಿಯಲ್ಲಿ ಬಾಲಿವುಡ್ ನಟಿಯ ಎಡವಟ್ಟು; ಅರೆಸ್ಟ್ ವಾರೆಂಟ್ ಹೊರಡಿಸಿದ ಕೋರ್ಟ್
ಸಬಾ ಅವರು ಮೂಲತಃ ಪಾಕಿಸ್ತಾನದವರು. ಸಾಕಷ್ಟು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಕಳೆದ ವರ್ಷ ಡಾನ್ಸ್ ವಿಡಿಯೋ ಚಿತ್ರೀಕರಣಕ್ಕಾಗಿ ಅವರು ಲಾಹೋರ್ನ ಐತಿಹಾಸಿಕ ಮಸೀದಿಯಲ್ಲಿ ಹೆಜ್ಜೆ ಹಾಕಿದ್ದರು.
ಬಾಲಿವುಡ್ನಲ್ಲಿ ಇರ್ಫಾನ್ ಖಾನ್ ನಟನೆಯ ‘ಹಿಂದಿ ಮೀಡಿಯಮ್’ ಸಿನಿಮಾ 2017ರಲ್ಲಿ ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ಇರ್ಫಾನ್ ಖಾನ್ ಜತೆಗೆ ಸಬಾ ಖಮಾರ್ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಇವರಿಗೆ ಈಗ ಸಂಕಷ್ಟವೊಂದು ಎದುರಾಗಿದೆ. ಅವರನ್ನು ಬಂಧಿಸುವಂತೆ ಪಾಕಿಸ್ತಾನದ ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿದೆ.
ಸಬಾ ಅವರು ಮೂಲತಃ ಪಾಕಿಸ್ತಾನದವರು. ಸಾಕಷ್ಟು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ. ಕಳೆದ ವರ್ಷ ಡಾನ್ಸ್ ವಿಡಿಯೋ ಚಿತ್ರೀಕರಣಕ್ಕಾಗಿ ಅವರು ಲಾಹೋರ್ನ ಐತಿಹಾಸಿಕ ಮಸೀದಿಯಲ್ಲಿ ಹೆಜ್ಜೆ ಹಾಕಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಪ್ರಕರಣ ಕೂಡ ದಾಖಲಾಗಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಿಲ್ಲ. ಈ ಸಂಬಂಧ ಲಾಹೋರ್ನ ಮ್ಯಾಜಿಸ್ಟ್ರಿಯಲ್ ಕೋರ್ಟ್ ಜಾಮೀನು ಸಹಿತ ವಾರಂಟ್ ಹೊರಡಿಸಿದೆ. ಸಬಾ ಜತೆ ಗಾಯಕ ಬಿಲಾಲ್ ಸಯೀದ್ಗೂ ಸಂಕಷ್ಟ ಎದುರಾಗಿದೆ. ಅಕ್ಟೋಬರ್ 6ಕ್ಕೆ ಮುಂದಿನ ವಿಚಾರಣೆ ನಿಗದಿ ಮಾಡಲಾಗಿದೆ.
ಲಾಹೋರ್ನ ವಾಜಿರ್ ಖಾನ್ ಮಸೀದಿಯಲ್ಲಿ ವಿಡಿಯೋ ಸಾಂಗ್ ಶೂಟ್ ಮಾಡಲಾಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪಾಕಿಸ್ತಾನದಲ್ಲಿ ಅನೇಕರು ಸಿಟ್ಟಿಗೆದ್ದಿದ್ದರು. ಮಸೀದಿಯನ್ನು ಅಪವಿತ್ರಗೊಳಿಸಲಾಗಿದೆ ಎಂದು ದೂರು ದಾಖಲು ಮಾಡಿದ್ದರು. ಇನ್ನು, ಸಬಾಗೆ ಕೊಲೆ ಬೆದರಿಕೆ ಕೂಡ ಬಂದಿತ್ತು.
ಹಿಂದಿ ಮೀಡಿಯಮ್ ಸಿನಿಮಾದಲ್ಲಿ ಸಬಾ ನಟನೆಗೆ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 69 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇರ್ಫಾನ್ ಖಾನ್ ನಟನೆಯನ್ನು ಅನೇಕರು ಹೊಗಳಿದ್ದರು. ಸಬಾ ಪಾಕಿಸ್ತಾನದಲ್ಲಿ ಸಿನಿಮಾ ಹಾಗೂ ಶಾರ್ಟ್ ಮೂವಿಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಅವರಿಗೆ ಪಾಕಿಸ್ತಾನದಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ. ಆದರೆ, ಸಬಾ ಮಾಡಿದ ತಪ್ಪಿನಿಂದಾಗಿ ಕೆಲ ಅಭಿಮಾನಿಗಳೇ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಇದನ್ನೂ ಓದಿ: ರಜತ್ ಬೇಡಿ ಕಾರು ಡಿಕ್ಕಿಯಿಂದ ಗಾಯಗೊಂಡಿದ್ದ ವ್ಯಕ್ತಿ ನಿಧನ; ಬಾಲಿವುಡ್ ನಟನಿಗೆ ಹೆಚ್ಚಿತು ಸಂಕಷ್ಟ
ನಾನು ವಿರಾಟ್ ಕೊಹ್ಲಿಯನ್ನು ಪ್ರೀತಿಸುತ್ತಿದ್ದೆ’; ರಹಸ್ಯ ಬಿಚ್ಚಿಟ್ಟ ಬಾಲಿವುಡ್ ನಟಿ