‘ಮನೆಗೆ ನುಗ್ಗಿ ಹೊಡೆದಿದ್ದೆ’; ‘ಕಾಫಿ ವಿತ್ ಕರಣ್​’ ಶೋ ಆರಂಭಕ್ಕೂ ಮುನ್ನ ಕರಣ್ ಜೋಹರ್​ಗೆ ಹಳೆ ಘಟನೆ ನೆನಪಿಸಿದ ಕಂಗನಾ

ಕರಣ್​​ ಬಗ್ಗೆ ಕಂಗನಾಗೆ ಅಸಮಾಧಾನ ಇದೆ. ಹೀಗಾಗಿ, ಅವರು ಸದಾ ಕರಣ್ ವಿರುದ್ಧ ಹರಿಹಾಯುತ್ತಿರುತ್ತಾರೆ. ಈಗ ಮತ್ತೆ ಕರಣ್ ಜೋಹರ್ ವಿರುದ್ಧ ನಟಿ ಧ್ವನಿ ಎತ್ತಿದ್ದಾರೆ.  

‘ಮನೆಗೆ ನುಗ್ಗಿ ಹೊಡೆದಿದ್ದೆ’; ‘ಕಾಫಿ ವಿತ್ ಕರಣ್​’ ಶೋ ಆರಂಭಕ್ಕೂ ಮುನ್ನ ಕರಣ್ ಜೋಹರ್​ಗೆ ಹಳೆ ಘಟನೆ ನೆನಪಿಸಿದ ಕಂಗನಾ
ಕಂಗನಾ-ಕರಣ್
TV9kannada Web Team

| Edited By: Rajesh Duggumane

Jul 07, 2022 | 6:35 PM

ನಟಿ ಕಂಗನಾ ರಣಾವತ್ (Kangana Ranaut) ಅವರ ಸಿನಿಮಾಗಳು ಸೋತರೂ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ‘ಧಾಕಡ್’ ಸಿನಿಮಾ ಹೀನಾಯವಾಗಿ ಸೋತಿತ್ತು. ಕೆಲವೇ ದಿನಗಳ ಕಾಲ ಸುಮ್ಮನಿದ್ದ ಅವರು ಈಗ ಟೀಕೆ ಮಾಡುವುದನ್ನು ಮತ್ತೆ ಆರಂಭಿಸಿದ್ದಾರೆ. ಕರಣ್ ಜೋಹರ್ (Karan Johar) ಅವರು ನಡೆಸಿಕೊಡುವ ‘ಕಾಫಿ ವಿತ್ ಕರಣ್ ಸೀಸನ್ 7​’ (Koffee With Karan 7) ಇಂದು (ಜುಲೈ 7​) ಮೊದಲ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಅದಕ್ಕೂ ಮೊದಲು ಹಳೆಯ ಘಟನೆಯನ್ನು ಕಂಗನಾ ಅವರು ಕರಣ್​ಗೆ ನೆನಪಿಸಿದ್ದಾರೆ.

ಕರಣ್ ಜೋಹರ್ ಬಾಲಿವುಡ್​ನ ಖ್ಯಾತ ನಿರ್ಮಾಪಕರು. ಹಲವು ಸೆಲೆಬ್ರಿಟಿಗಳನ್ನು ಅವರು ಲಾಂಚ್ ಮಾಡಿದ್ದಾರೆ. ಯಾವುದೆ ಹಿನ್ನೆಲೆ ಇಲ್ಲದೆ ಬಂದ ಕಲಾವಿದರನ್ನು ಅವರು ತುಳಿಯಲು ನೋಡುತ್ತಾರೆ ಎಂಬ ಆರೋಪ ಕೂಡ ಇದೆ. ಈ ವಿಚಾರದಲ್ಲಿ ಕರಣ್​​ ಬಗ್ಗೆ ಕಂಗನಾಗೆ ಅಸಮಾಧಾನ ಇದೆ. ಹೀಗಾಗಿ, ಅವರು ಸದಾ ಕರಣ್ ವಿರುದ್ಧ ಹರಿಹಾಯುತ್ತಿರುತ್ತಾರೆ. ಈಗ ಮತ್ತೆ ಕರಣ್ ಜೋಹರ್ ವಿರುದ್ಧ ನಟಿ ಧ್ವನಿ ಎತ್ತಿದ್ದಾರೆ.

‘ಕಾಫಿ ವಿತ್ ಕರಣ್ ಸೀಸನ್ 5’ರಲ್ಲಿ ಕಂಗನಾ ಭಾಗಿ ಆಗಿದ್ದರು. ಈ ವೇಳೆ ಕಂಗನಾ ಇಂಗ್ಲಿಷ್ ಬಗ್ಗೆ ಕರಣ್ ಆಡಿಕೊಂಡು ನಕ್ಕಿದ್ದರು. ನಂತರ ಪ್ರತಿ ವಿಚಾರದಲ್ಲೂ ಕರಣ್​ಗೆ ತಿರುಗೇಟು ನೀಡಿದ್ದರು ಕಂಗನಾ. ‘ನನ್ನ ಬಗ್ಗೆ ಬಯೋಪಿಕ್ ಮಾಡಿದರೆ ನಿಮಗೂ ಒಂದು ಪಾತ್ರವಿದೆ. ಬಾಲಿವುಡ್​ನಲ್ಲಿ ಹೊರಗಿನವರನ್ನು ಇಷ್ಟಪಡದೆ, ನೆಪೊಟಿಸಮ್​​​ಗೆ ಆದ್ಯತೆ ನೀಡುವ ವ್ಯಕ್ತಿಯ ಪಾತ್ರದಲ್ಲಿ ನೀವು ನಟಿಸಬೇಕು’ ಎಂದು ಕಂಗನಾ ನೇರವಾಗಿಯೇ ಹೇಳಿದ್ದರು. ಇದಲ್ಲದೆ, ಹಲವು ವಿಚಾರಗಳಲ್ಲಿ ಕರಣ್ ಅವರನ್ನು ಟೀಕಿಸಿದ್ದರು. ಈ ವಿಚಾರವನ್ನು ಕಂಗನಾ ನೆನಪಿಸಿದ್ದಾರೆ.

‘ಪಪ್ಪಾ ಜೋ ಅವರು ಕಾಫಿ ಎಪಿಸೋಡ್​ಗೆ ಪ್ರಮೋಷನ್ ಕೊಡುತ್ತಿದ್ದಾರೆ. ಅವರಿಗೆ ಗುಡ್​ಲಕ್​. ನಾನು ಮನೆಗೆ ನುಗ್ಗಿ ಹೊಡೆದಿದ್ದೆ. ನಾನು ಬಂದಿದ್ದು ಹೆಚ್ಚು ಪಾಪ್ಯುಲರ್ ಆದ ಎಪಿಸೋಡ್. ಫಿಲ್ಮ್​ಫೇರ್​ ಅವಾರ್ಡ್​ ರೀತಿಯೆ ಅವರು ಟಿವಿಯಲ್ಲಿ ಬ್ಯಾನ್ ಆದರು’ ಎಂದು ಕಂಗನಾ ಹೇಳಿದ್ದಾರೆ.

ಇದನ್ನೂ ಓದಿ

  

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada