Sobhita Dhulipala: ಸಮಂತಾ ಮಾಜಿ ಪತಿ ನಾಗ ಚೈತನ್ಯ ಹೆಸರು ಎತ್ತಿದ್ದಕ್ಕೆ ಮಧ್ಯ ಬೆರಳು ತೋರಿಸಿ ಗರಂ ಆದ ಶೋಭಿತಾ?
Sobhita Dhulipala Viral Video: ಸದ್ಯ ಇಂಟರ್ನೆಟ್ನಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮೊದಲು ನಯವಾಗಿ ನಗು ಚೆಲ್ಲಿದ ಶೋಭಿತಾ ಧುಲಿಪಾಲಾ ಅವರು ನಂತರ ಸಿಟ್ಟು ಮುಖ ಮಾಡಿಕೊಂಡು ಮಧ್ಯ ಬೆರಳು ತೋರಿಸಿದ್ದಾರೆ!
ನಟಿ ಸಮಂತಾ ರುತ್ ಪ್ರಭು ಮತ್ತು ನಟ ಅಕ್ಕಿನೇನಿ ನಾಗ ಚೈತನ್ಯ (Naga Chaitanya) ಅವರ ಸಂಸಾರದಲ್ಲಿ ಯಾವಾಗ ಬಿರುಕು ಮೂಡಿತೋ ಆಗಿನಿಂದಲೇ ಅನೇಕ ಗಾಸಿಪ್ಗಳು ಹುಟ್ಟಿಕೊಂಡವು. ಸಮಂತಾ (Samanth Ruth Prabhu) ಮತ್ತು ನಾಗಚೈತನ್ಯ ಈಗಾಗಲೇ ಡಿವೋರ್ಸ್ ಪಡೆದು ಹಲವು ತಿಂಗಳುಗಳೇ ಕಳೆದಿವೆ. ಹಾಗಿದ್ದರೂ ಕೂಡ ಗಾಸಿಪ್ಗಳು ಕೇಳಿಬರುವುದು ನಿಂತಿಲ್ಲ. ಈಗ ನಾಗ ಚೈತನ್ಯ ಅವರು ಯಾರ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವಿಷಯವೇ ಹಾಟ್ ಟಾಪಿಕ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಅವರು ನಟಿ ಶೋಭಿತಾ ಧುಲಿಪಾಲಾ (Sobhita Dhulipala) ಜತೆ ತಿರುಗಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷಯದ ಬಗ್ಗೆ ನಾಗ ಚೈತನ್ಯ ಅವರಾಗಲೀ ಶೋಭಿತಾ ಅವರಾಗಲೀ ನೇರವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ ಶೋಭಿತಾ ಅವರು ಮಧ್ಯ ಬೆರಳು ತೋರಿಸಿರುವ ವಿಡಿಯೋ ವೈರಲ್ ಆಗಿದೆ.
ಶೋಭಿತಾ ಧುಲಿಪಾಲಾ ಅವರು 2016ರಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಿಂದಿ, ತೆಲುಗು, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ವೆಬ್ ಸಿರೀಸ್ ಲೋಕದಲ್ಲೂ ಅವರಿಗೆ ಬೇಡಿಕೆ ಇದೆ. ಕೈಯಲ್ಲಿ ಹಲವು ಆಫರ್ಗಳನ್ನು ಇಟ್ಟುಕೊಂಡು ಅವರು ಬ್ಯುಸಿ ಆಗಿದ್ದಾರೆ. ಈ ಸಂದರ್ಭದಲ್ಲಿ ನಟ ನಾಗ ಚೈತನ್ಯ ಜೊತೆ ತಮ್ಮ ಹೆಸರು ತಳುಕು ಹಾಕಿಕೊಂಡಿರುವುದಕ್ಕೆ ಶೋಭಿತಾ ಧುಲಿಪಾಲಾ ಗರಂ ಆದಂತಿದೆ.
ಸದ್ಯ ಇಂಟರ್ನೆಟ್ನಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮೊದಲು ನಯವಾಗಿ ನಗು ಚೆಲ್ಲುವ ಶೋಭಿತಾ ಅವರು ನಂತರ ಸಿಟ್ಟು ಮುಖ ಮಾಡಿಕೊಂಡು ಮಧ್ಯ ಬೆರಳು ತೋರಿಸುತ್ತಾರೆ. ತಮ್ಮ ಬಗ್ಗೆ ಗಾಸಿಪ್ ಹಬ್ಬಿಸುವವರಿಗಾಗಿಯೇ ಅವರು ಈ ರೀತಿ ಅಶ್ಲೀಲ ಸನ್ನೆ ತೋರಿಸಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
Reyyy paid articles paid team meke ra reyyy ??#SobhitaDhulipala pic.twitter.com/vbL1riREJ2
— Chay_Cult (@SaiSanala) June 24, 2022
ಈ ವಿಡಿಯೋವನ್ನು ಶೋಭಿತಾ ಧುಲಿಪಾಲಾ ಅವರು ತಮ್ಮ ಯಾವುದೇ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಂಡಿಲ್ಲ. ಕೆಲವರು ಹೇಳುವ ಪ್ರಕಾರ ಇದು ಅವರ ಹಳೇ ವಿಡಿಯೋ. ಈಗ ಬೇಕಂತಲೇ ಯಾರೋ ವೈರಲ್ ಮಾಡಿದ್ದಾರೆ ಎನ್ನಲಾಗಿದೆ. ಇದರ ಹಿಂದಿನ ಕಹಾನಿ ಏನು ಎಂಬುದನ್ನು ಸ್ವತಃ ಶೋಭಿತಾ ಅವರೇ ತಿಳಿಸಬೇಕಿದೆ. ಡೇಟಿಂಗ್ ಗಾಸಿಪ್ ಬಗ್ಗೆ ನಾಗ ಚೈತನ್ಯ ಅವರಿಂದಲಾದರೂ ಪ್ರತಿಕ್ರಿಯೆ ಬರಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಇದನ್ನೂ ಓದಿ: ‘ನಿಮ್ಮ ಕೆಲಸದ ಮೇಲೆ ಗಮನಹರಿಸಿ’; ನಾಗ ಚೈತನ್ಯ ಫ್ಯಾನ್ಸ್ಗೆ ಎಚ್ಚರಿಕೆ ನೀಡಿದ ಸಮಂತಾ
ಟಾಲಿವುಡ್ ನಟಿಯ ಜತೆ ನಾಗ ಚೈತನ್ಯ ಕದ್ದುಮುಚ್ಚಿ ಓಡಾಟ? ಐಷಾರಾಮಿ ಹೋಟೆಲ್ನಲ್ಲಿ ಆಗುತ್ತಿತ್ತು ಭೇಟಿ
Published On - 9:45 am, Tue, 28 June 22