Kichcha Sudeep: ತಮ್ಮ ಮನೆಗೆ ಬಂದು ಬೇರೆ ಹೀರೋ ಬಗ್ಗೆ ನೆಗೆಟಿವ್ ಮಾತಾಡಿದ್ರೆ ಸುದೀಪ್ ಗರಂ ಆಗ್ತಾರೆ; ಯಾಕೆ?
Sudeep Interview: ಕಿಚ್ಚ ಸುದೀಪ್ ಅವರು ಸ್ನೇಹ ಜೀವಿ. ತಮ್ಮ ಮನೆಗೆ ಬಂದವರನ್ನು ಅವರು ತುಂಬ ಚೆನ್ನಾಗಿ ಸತ್ಕರಿಸುತ್ತಾರೆ. ಆದರೆ ಒಂದು ಕಂಡೀಷನ್ ಕೂಡ ಇದೆ.
ಚಿತ್ರರಂಗದಲ್ಲಿ ಸುದೀಪ್ (Kichcha Sudeep) ಅವರು ತಮ್ಮದೇ ಆದ ಕೆಲವು ನಿಯಮಗಳನ್ನು ಪಾಲಿಸುತ್ತಾರೆ. ಅನೇಕರ ಜೊತೆಗೆ ಅವರು ಆತ್ಮೀಯತೆ ಹೊಂದಿದ್ದಾರೆ. ಹತ್ತಾರು ಸೆಲೆಬ್ರಿಟಿಗಳು ಕಿಚ್ಚ ಸುದೀಪ್ ಅವರ ಮನೆಗೆ ಅತಿಥಿಗಳಾಗಿ ತೆರಳುತ್ತಾರೆ. ಮನೆಗೆ ಬಂದವರನ್ನು ಬಹಳ ಪ್ರೀತಿಯಿಂದ ಅವರು ಉಪಚರಿಸುತ್ತಾರೆ. ಆದರೆ ಒಂದು ಕಂಡೀಷನ್! ತಮ್ಮ ಮನೆಗೆ ಬಂದ ಅತಿಥಿಗಳು, ಸ್ನೇಹಿತರು ಬೇರೆ ಹೀರೋಗಳ ಬಗ್ಗೆ ನೆಗೆಟಿವ್ ಮಾತುಗಳನ್ನು ಆಡಬಾರದು. ಒಂದು ವೇಳೆ ಯಾರಾದರೂ ಆ ರೀತಿ ಮಾತನಾಡಿದರೆ ಅಂಥವರನ್ನು ಕೂಡಲೇ ಹೊರಗೆ ಕಳಿಸಲು ಕೂಡ ಸುದೀಪ್ (Sudeep) ಹಿಂದೇಟು ಹಾಕುವುದಿಲ್ಲ. ‘ಇಲ್ಲಿ ಬೇರೆಯವರ ಬಗ್ಗೆ ಮಾತನಾಡುವವರು ಬೇರೆ ಕಡೆ ಹೋಗಿ ನಮ್ಮ ಬಗ್ಗೆಯೂ ಮಾತನಾಡುತ್ತಾರೆ’ ಎಂಬುದು ಸುದೀಪ್ ಅವರಿಗೆ ತಿಳಿದಿದೆ. ‘ಟಿವಿ9 ಕನ್ನಡ’ಕ್ಕೆ ನೀಡಿದ ಸಂದರ್ಶನಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಅವರು ನಟಿಸಿರುವ ‘ವಿಕ್ರಾಂತ್ ರೋಣ’ (Vikrant Rona) ಚಿತ್ರ ಜುಲೈ 28ರಂದು ತೆರೆ ಕಾಣುತ್ತಿದೆ.
ಇದನ್ನೂ ಓದಿ: Kichcha Sudeep: ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಅಮಿತಾಭ್ ಬಚ್ಚನ್ ಸಾಥ್; ಕಿಚ್ಚ ಸುದೀಪ್ ಸಿನಿಮಾಗೆ ‘ಬಿಗ್ ಬಿ’ ಬೆಂಬಲ
Sudeep: ‘ನಾನು-ಶಿವಣ್ಣ ಕೆಲವು ಸಮಯ ಮಾತಾಡ್ತಾ ಇರಲಿಲ್ಲ, ಕಾರಣ ಹುಡುಕ್ತಾ ಹೋದ್ರೆ..’; ಸುದೀಪ್ ನೇರ ಮಾತು
Published on: Jun 28, 2022 12:12 PM
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ

