AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shivarajkumar Birthday: 60ನೇ ವಸಂತಕ್ಕೆ ಕಾಲಿಟ್ಟ ​ಶಿವರಾಜ್​ಕುಮಾರ್​; ಈ ಬಾರಿ ಇಲ್ಲ ಹುಟ್ಟುಹಬ್ಬ ಆಚರಣೆ

ಶಿವರಾಜ್​ಕುಮಾರ್ ಅವರು ಬರ್ತ್​ಡೇ ಆಚರಿಸಿಕೊಳ್ಳದಿದ್ದರೂ ಫ್ಯಾನ್ಸ್ ಸಂಭ್ರಮ ಜೋರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಬರ್ತ್​ಡೇ ಶುಭಾಶಯ ತಿಳಿಸಲಾಗುತ್ತಿದೆ.

Shivarajkumar Birthday: 60ನೇ ವಸಂತಕ್ಕೆ ಕಾಲಿಟ್ಟ ​ಶಿವರಾಜ್​ಕುಮಾರ್​; ಈ ಬಾರಿ ಇಲ್ಲ ಹುಟ್ಟುಹಬ್ಬ ಆಚರಣೆ
ಶಿವರಾಜ್​ಕುಮಾರ್
TV9 Web
| Edited By: |

Updated on:Jul 12, 2022 | 12:04 PM

Share

ಶಿವರಾಜ್​ಕುಮಾರ್ (Shivarajkumar Birthday) ಅವರು ಇಂದು (ಜುಲೈ 12) 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಶಿವರಾಜ್​ಕುಮಾರ್  (Shivarajkumar )ಅವರು ಈ ವಯಸ್ಸಿನಲ್ಲೂ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿದ್ದಾರೆ. ಫಿಟ್​ನೆಸ್ ವಿಚಾರದಲ್ಲಿ ಅವರು ಅನೇಕರಿಗೆ ಮಾದರಿ. ಡ್ಯಾನ್ಸ್ ಹಾಗೂ ಫೈಟಿಂಗ್ ದೃಶ್ಯಗಳನ್ನು ನೀರು ಕುಡಿದಂತೆ ಮಾಡುತ್ತಾರೆ. ಅವರ ಎನರ್ಜಿ ಅನೇಕರಿಗೆ ಇಷ್ಟವಾಗುತ್ತದೆ. ಶಿವರಾಜ್​ಕುಮಾರ್ ಅವರು ಈ ಬಾರಿ ಬರ್ತ್​ಡೇ ಆಚರಿಸಿಕೊಳ್ಳುತ್ತಿಲ್ಲ. ಆದಾಗ್ಯೂ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಬರುತ್ತಿವೆ.

ಶಿವಣ್ಣ ಪ್ರತಿ ವರ್ಷ ಕುಟುಂಬ ಹಾಗೂ ಫ್ಯಾನ್ಸ್ ಜತೆ ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದರು. ಆದರೆ, ಕೊವಿಡ್ ಕಾರಣದಿಂದ ಇತ್ತೀಚಿನ ವರ್ಷಗಳಲ್ಲಿ ಅವರು ಫ್ಯಾಮಿಲಿ ಜತೆ ಮಾತ್ರ ಹುಟ್ಟುಹಬ್ಬ ಆಚರಿಸಿಕೊಂಡರು. ಆದರೆ, ಈ ಬಾರಿ ಅವರ ಮನೆಯಲ್ಲಿ ಬರ್ತ್​ಡೇ ಸಂಭ್ರಮ ಇಲ್ಲ. ಸಹೋದರ ಪುನೀತ್​ ರಾಜ್​ಕುಮಾರ್ ಅವರನ್ನು ಕಳೆದುಕೊಂಡ ನೋವು ಅವರನ್ನು ಬಹುವಾಗಿ ಕಾಡುತ್ತಿದೆ. ಈ ಕಾರಣಕ್ಕೆ ಅವರು ಈ ಬಾರಿ ಬರ್ತ್​ಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

ಶಿವರಾಜ್​ಕುಮಾರ್ ಅವರು ಬರ್ತ್​ಡೇ ಆಚರಿಸಿಕೊಳ್ಳದಿದ್ದರೂ ಫ್ಯಾನ್ಸ್ ಸಂಭ್ರಮ ಜೋರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಬರ್ತ್​ಡೇ ಶುಭಾಶಯ ತಿಳಿಸಲಾಗುತ್ತಿದೆ. ಶಿವಣ್ಣ ಅವರ ಕಾಮನ್ ಡಿಪಿ ಕೂಡ ವೈರಲ್ ಆಗುತ್ತಿದೆ. ಫ್ಯಾನ್ಸ್ ಹಾಗೂ ಸೆಲೆಬ್ರಿಟಿಗಳು ಶಿವರಾಜ್​ಕುಮಾರ್ ಫೋಟೋ ಪೋಸ್ಟ್​ ಮಾಡಿ ವಿಶ್ ತಿಳಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಸಮಾಜಮುಖಿ ಕೆಲಸಗಳು ಕೂಡ ಆಗುತ್ತಿವೆ.

ಇದನ್ನೂ ಓದಿ
Image
‘ಡಾ. ಶಿವರಾಜ್​ಕುಮಾರ್​ ವೃತ್ತ’: ಮಾನ್ಯತಾ ರೆಸಿಡೆನ್ಸಿ ಸರ್ಕಲ್​ಗೆ ಶಿವಣ್ಣನ ಹೆಸರಿಟ್ಟ ನಿವಾಸಿಗಳು
Image
ಶಿವಣ್ಣ ಜತೆ ನಟಿಸುವ ಚಾನ್ಸ್​ ಸಿಕ್ಕರೂ ಮುಹೂರ್ತಕ್ಕೆ ಪ್ರಭುದೇವ ಬರಲಿಲ್ಲ; ಕಾರಣ ತಿಳಿಸಿ ಕ್ಷಮೆ ಕೇಳಿದ ನಟ
Image
ಶಿವರಾಜ್​​ಕುಮಾರ್ ಅವರನ್ನು ಬಾಯ್ತುಂಬ ಹೊಗಳಿದ ಅನುಶ್ರೀ; ಶಿವಣ್ಣನ ರಿಯಾಕ್ಷನ್ ಹೇಗಿತ್ತು ನೋಡಿ
Image
‘ನಾವು ಬೇರೆ ಭಾಷೆಯಲ್ಲಿ ಮಾತಾಡ್ತೀವಿ, ಅದು ಯಾವುದು ಅಂತ ಈಗ ಬೇಡ’: ವೇದಿಕೆಯಲ್ಲಿ ಶಿವಣ್ಣ ಮನದ ಮಾತು

ಶಿವರಾಜ್​ಕುಮಾರ್ ಬರ್ತ್​ಡೇಗೆ 11 ದಿನ ಇರುವಾಗ ಅವರ ನಟನೆಯ ‘ಬೈರಾಗಿ’ ಸಿನಿಮಾ ತೆರೆಗೆ ಬಂತು. ಈ ಚಿತ್ರದಲ್ಲಿ ಧನಂಜಯ್ ಹಾಗೂ ಶಿವರಾಜ್​ಕುಮಾರ್ ಅವರ ಕಾಂಬಿನೇಷನ್ ಪ್ರೇಕ್ಷಕರಿಗೆ ಇಷ್ಟವಾಯಿತು. ಇದು ಶಿವಣ್ಣ ಫ್ಯಾನ್ಸ್​ಗೆ ಅಡ್ವಾನ್ಸ್ ಗಿಫ್ಟ್ ಎಂದು ಚಿತ್ರತಂಡದವರೇ ಹೇಳಿಕೊಂಡಿದ್ದರು. ಬರ್ತ್​ಡೇ ಪ್ರಯುಕ್ತ ಅವರ ನಟನೆಯ ಸಿನಿಮಾಗಳ ಪೋಸ್ಟರ್​ಗಳು ರಿಲೀಸ್ ಆಗುತ್ತಿವೆ.

ಇದನ್ನೂ ಓದಿ: ‘ಡಾ. ಶಿವರಾಜ್​ಕುಮಾರ್​ ವೃತ್ತ’: ಮಾನ್ಯತಾ ರೆಸಿಡೆನ್ಸಿ ಸರ್ಕಲ್​ಗೆ ಶಿವಣ್ಣನ ಹೆಸರಿಟ್ಟ ನಿವಾಸಿಗಳು

ಪುನೀತ್ ರಾಜ್​ಕುಮಾರ್ ಇಂದು ಇದ್ದಿದ್ದರೆ ಶಿವರಾಜ್​ಕುಮಾರ್ ಅವರ ಬರ್ತ್​ಡೇ ಆಚರಿಸುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಪ್ರೀತಿಯಿಂದ ಅವರಿಗೆ ಬರ್ತ್​ಡೇ ವಿಶ್ ತಿಳಿಸುತ್ತಿದ್ದರು. ಅವರು ಇಲ್ಲ ಎಂಬ ನೋವು ರಾಜ್​ ಕುಟುಂಬಕ್ಕೆ ಹಾಗೂ ಅವರ ಫ್ಯಾನ್ಸ್​ಗೆ ಬಹುವಾಗಿ ಕಾಡುತ್ತಿದೆ.

Published On - 6:30 am, Tue, 12 July 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?