AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೂ ಅಂತೀಯಾ ಮಾವ..’ ಹಾಡಿನ ಮ್ಯೂಸಿಕ್​ ಡೈರೆಕ್ಟರ್ ಮೇಲೆ ಕಣ್ಣು ಹಾಕಿದ ಸಲ್ಮಾನ್​ ಖಾನ್​; ಕಾರಣ ಏನು?

Salman Khan | Devi Sri Prasad: ಸತತ ಸೋಲಿನಿಂದ ಬೇಸರಗೊಂಡಿರುವ ಸಲ್ಮಾನ್​ ಖಾನ್​ ಅವರು ಒಂದು ಗೆಲುವಿಗಾಗಿ ಇಷ್ಟೆಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಈಗ ಅವರು ದೇವಿ ಶ್ರೀ ಪ್ರಸಾದ್​ ಜೊತೆ ಕೈ ಜೋಡಿಸಿದ್ದಾರೆ.

‘ಹೂ ಅಂತೀಯಾ ಮಾವ..’ ಹಾಡಿನ ಮ್ಯೂಸಿಕ್​ ಡೈರೆಕ್ಟರ್ ಮೇಲೆ ಕಣ್ಣು ಹಾಕಿದ ಸಲ್ಮಾನ್​ ಖಾನ್​; ಕಾರಣ ಏನು?
ದೇವಿ ಶ್ರೀ ಪ್ರಸಾದ್, ಸಲ್ಮಾನ್ ಖಾನ್
TV9 Web
| Edited By: |

Updated on: Apr 17, 2022 | 10:12 AM

Share

ನಿಜಕ್ಕೂ ಬಾಲಿವುಡ್​ ಮಂದಿಗೆ ಈಗ ಚಿಂತೆ ಶುರುವಾಗಿದೆ. ಒಂದು ಕಾಲದಲ್ಲಿ ಬಾಕ್ಸ್​ ಆಫೀಸ್​ನಲ್ಲಿ ಆಳ್ವಿಕೆ ಮಾಡುತ್ತಿದ್ದ ಘಟಾನುಘಟಿ ಸ್ಟಾರ್​ ಹೀರೋಗಳೆಲ್ಲ ಈಗ ಸೈಲೆಂಟ್​ ಆಗಿದ್ದಾರೆ. ಆಮಿರ್​ ಖಾನ್​, ಸಲ್ಮಾನ್​ ಖಾನ್​ (Salman Khan), ಶಾರುಖ್​ ಖಾನ್​, ಜಾನ್​ ಅಬ್ರಾಹಂ ಮುಂತಾದವರು ಗೆಲುವಿಗಾಗಿ ಪರಿತಪಿಸುತ್ತಿದ್ದಾರೆ. ಶಾರುಖ್​ ಖಾನ್​ ಬ್ಯಾಕ್​ ಟು ಬ್ಯಾಕ್​ ಸೋಲು ಕಂಡಿದ್ದಾರೆ. ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲು ಸಲ್ಮಾನ್​ ಖಾನ್​ ಸಿನಿಮಾಗಳು ಕೂಡ ಕಷ್ಟಪಡುತ್ತಿವೆ. ಈ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಸಿನಿಮಾಗಳು ಬಾಲಿವುಡ್​ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿವೆ. ಹಿಂದಿ ಚಿತ್ರರಂಗದ ಸ್ಟಾರ್​ ನಟರು ಸೌತ್​ ಹೀರೋಗಳ ಎದುರು ಮಂಕಾಗಿದ್ದಾರೆ. ಈಗ ಹೇಗಾದರೂ ಮಾಡಿ ಒಂದು ಗೆಲುವು ಪಡೆಯಬೇಕು ಎಂಬ ಕಾರಣದಿಂದ ಸಲ್ಮಾನ್​ ಖಾನ್​ ಬಗೆಬಗೆಯ ಪ್ಲ್ಯಾನ್​ ಮಾಡುತ್ತಿದ್ದಾರೆ. ಅವರ ಮುಂದಿನ ಸಿನಿಮಾ ‘ಕಭಿ ಈದ್​ ಕಭಿ ದಿವಾಲಿ’ (Kabhi Eid Kabhi Diwali) ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಮ್ಯೂಸಿಕ್​ ಡೈರೆಕ್ಟರ್​ ದೇವಿ ಶ್ರೀ ಪ್ರಸಾದ್​ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಕೂಡ ಸಲ್ಮಾನ್​ ಖಾನ್​ ಮತ್ತು ದೇವಿ ಶ್ರೀ ಪ್ರಸಾದ್​ (Devi Sri Prasad) ಅವರ ಕಾಂಬಿನೇಷನ್​ನಲ್ಲಿ ಮೂಡಿಬಂದಿದ್ದ ಗೀತೆಗಳು ಹಿಟ್​ ಆಗಿದ್ದವು. ಈಗ ಅದೇ ಸೂತ್ರವನ್ನು ಮತ್ತೆ ಫಾಲೋ ಮಾಡಲಾಗುತ್ತಿದೆ.

ಅನೇಕ ಸೂಪರ್​ ಹಿಟ್​ ಗೀತೆಗಳನ್ನು ದೇವಿ ಶ್ರೀ ಪ್ರಸಾದ್ ನೀಡಿದ್ದಾರೆ. ಕಳೆದ ವರ್ಷ ರಿಲೀಸ್​ ಆದ ‘ಪುಷ್ಪ’ ಚಿತ್ರಕ್ಕೆ ಸಂಗೀತ ನೀಡಿದ್ದ ಅವರು ‘ಹೂ ಅಂತೀಯಾ ಮಾವ.. ಊಹೂ ಅಂತೀಯ ಮಾವ..’ ಹಾಡಿನ ಮೂಲಕ ಗುಂಗು ಹತ್ತಿಸಿದ್ದರು. ಚಿತ್ರಮಂದಿರದಲ್ಲಿ ಅಭಿಮಾನಿಗಳು ಈ ಗೀತೆಗೆ ಹುಚ್ಚೆದ್ದು ಕಣಿದಿದ್ದರು. ‘ಪುಷ್ಪ’ ಸಿನಿಮಾದ ಗೆಲುವಿಗೆ ಈ ಸಾಂಗ್​ ಕೂಡ ಕಾರಣ ಎಂದರೆ ತಪ್ಪಿಲ್ಲ. ಈಗ ಅವರನ್ನು ತಮ್ಮ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದಾರೆ ಸಲ್ಮಾನ್​ ಖಾನ್​. ಆ ಮೂಲಕವಾದರೂ ಗೆಲುವು ಪಡೆಯಬೇಕು ಎಂಬುದು ಸಲ್ಲು ಲೆಕ್ಕಾಚಾರ.

ಸಲ್ಮಾನ್​ ಖಾನ್​ ನಟಿಸಿದ್ದ ‘ರೆಡಿ’ ಸಿನಿಮಾದ ‘ಡಿಂಕ ಚಿಕಾ..’ ಹಾಡಿಗೆ ದೇವಿ ಶ್ರೀ ಪ್ರಸಾದ್​ ಸಂಗೀತ ನೀಡಿದ್ದರು. ಆ ಗೀತೆ ಕೂಡ ಸೂಪರ್​ ಹಿಟ್​ ಆಗಿತ್ತು. ‘ರಾಧೆ: ಯುವರ್​ ಮೋಸ್ಟ್​ ವಾಂಡೆಟ್​ ಭಾಯ್​’ ಚಿತ್ರದಲ್ಲಿನ ‘ಸೀಟಿ ಮಾರ್​..’ ಹಾಡು ಮೂಡಿಬಂದಿದ್ದು ಕೂಡ ದೇವಿ ಶ್ರೀ ಪ್ರಸಾದ್​ ಅವರ ಬತ್ತಳಿಕೆಯಿಂದ. ಈಗ ಮತ್ತೊಮ್ಮೆ ಅಂಥದ್ದೇ ಮ್ಯಾಜಿಕ್​ ಮಾಡಲು ಅವರನ್ನು ‘ಕಭಿ ಈದ್​ ಕಭಿ ದಿವಾಲಿ’ ಚಿತ್ರತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಚಿತ್ರಕ್ಕೆ ಶೀಘ್ರವೇ ಶೂಟಿಂಗ್​ ಆರಂಭ ಆಗಲಿದೆ. ಡಿ.30ರಂದು ತೆರೆಕಾಣಿಸುವ ಗುರಿ ಇಟ್ಟುಕೊಳ್ಳಲಾಗಿದೆ.

‘ಪುಷ್ಪ’ ಸಿನಿಮಾ ತೆರೆಕಂಡ ಬಳಿಕ ಇಡೀ ದೇಶದಲ್ಲಿ ದೇವಿ ಶ್ರೀ ಪ್ರಸಾದ್​ ಅವರು ಸೆನ್ಸೇಷನ್​ ಸೃಷ್ಟಿ ಮಾಡಿದ್ದಾರೆ. ಆ ಚಿತ್ರದ ಎಲ್ಲ ಹಾಡುಗಳು ಕೂಡ ಧೂಳೆಬ್ಬಿಸಿದವು. ‘ಶ್ರೀವಲ್ಲಿ..’, ‘ಏ ಬಿಡ್ಡ..’, ‘ಉ ಅಂಟಾವಾ ಮಾವ ಊಊ ಅಂಟಾವಾ ಮಾವ..’ ಹಾಡುಗಳು ಮಾಡಿದ ಮೋಡಿ ಅಷ್ಟಿಷ್ಟಲ್ಲ. ‘ಪುಷ್ಪ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದ ವೇಳೆ ದೇವಿ ಶ್ರೀ ಪ್ರಸಾದ್​ ಅವರು ಐಟಂ ಸಾಂಗ್​ಗಳನ್ನು ಭಕ್ತಿಗೀತೆಗೆ ಹೋಲಿಸಿದ್ದರು. ಅವರ ಆ ಹೇಳಿಕೆಯಿಂದ ವಿವಾದ ಸೃಷ್ಟಿ ಆಗಿತ್ತು. ಕೆಲವರು ಅವರ ವಿರುದ್ಧ ದೂರು ದಾಖಲಿಸಿದ್ದು ಕೂಡ ವರದಿ ಆಗಿತ್ತು. ಆದರೆ ಹಾಡುಗಳು ಜನಮನ ಗೆದ್ದ ಬಳಿಕ ಆ ವಿವಾದ ತಣ್ಣಗಾಯಿತು.

ಇದನ್ನೂ ಓದಿ:

ಸೌದಿ ಮಿನಿಸ್ಟರ್​ ಜೊತೆ ಶಾರುಖ್​, ಸಲ್ಮಾನ್​​, ಅಕ್ಷಯ್​ ಕುಮಾರ್​ ಪೋಸ್; ಏನಿದು ಸಮಾಚಾರ?

‘ಸಲ್ಮಾನ್​ ಖಾನ್​ಗೆ ತಂಗಿ ಆಗಲು ಯಾರಿಗೂ ಇಷ್ಟವಿಲ್ಲ’; ತೆರೆ ಹಿಂದಿನ ಸತ್ಯ ತೆರೆದಿಟ್ಟ ನಟಿ ಸ್ವರಾ ಭಾಸ್ಕರ್​

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?