ಶಿಲ್ಪಾ ಶೆಟ್ಟಿ ಮಗಳ ಜತೆ ಕಾರು ಏರಲು ಮುಂದಾದ ಅಭಿಮಾನಿ; ಫ್ಯಾನ್ ವರ್ತನೆ ನೋಡಿ ನಟಿ ಶಾಕ್

ಶಿಲ್ಪಾಗೆ ಫ್ಯಾನ್ಸ್ ಕಂಡರೆ ಖುಷಿ ಇದೆ. ಅವರು ಫ್ಯಾನ್ಸ್ ಜತೆ ಉತ್ತಮ ರಿಲೇಶನ್​ಶಿಪ್ ಹೊಂದಿದ್ದಾರೆ. ಅದೇ ರೀತಿ ಅಭಿಮಾನಿಗಳ ಜತೆ ಶಿಲ್ಪಾ ಮಾತನಾಡಿದ್ದಾರೆ. ಆದರೆ, ಓರ್ವ ಅಭಿಮಾನಿ ದುರ್ವರ್ತನೆ ತೋರಿದ್ದಾನೆ.

ಶಿಲ್ಪಾ ಶೆಟ್ಟಿ ಮಗಳ ಜತೆ ಕಾರು ಏರಲು ಮುಂದಾದ ಅಭಿಮಾನಿ; ಫ್ಯಾನ್ ವರ್ತನೆ ನೋಡಿ ನಟಿ ಶಾಕ್
ಶಿಲ್ಪಾ ಶೆಟ್ಟಿ-ಸಮಿಷಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 17, 2022 | 11:51 AM

ಸೆಲೆಬ್ರಿಟಿಗಳನ್ನು ಕಂಡರೆ ಸಾಕು ಅಭಿಮಾನಿಗಳು ತಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಸೆಲ್ಫೀ ತೆಗೆದುಕೊಳ್ಳಬೇಕು, ಅವರನ್ನು ಮಾತನಾಡಿಸಬೇಕು ಎಂದು ನಾನಾ ರೀತಿಯ ಸಾಹಸಕ್ಕೆ ಮುಂದಾಗುತ್ತಾರೆ. ಫ್ಯಾನ್ಸ್​ ತೋರುವ ವರ್ತನೆ ಸೆಲೆಬ್ರಿಟಿಗಳ ಆಕ್ರೋಶಕ್ಕೆ ಕಾರಣವಾಗಿದ್ದುಂಟು. ಸಲ್ಮಾನ್ ಖಾನ್ (Salman Khan), ಜಾನ್​ ಅಬ್ರಾಹಂ ಫ್ಯಾನ್ಸ್ ವಿರುದ್ಧ ಅಸಮಾಧಾನಗೊಂಡ ವಿಡಿಯೋಗಳು ಈ ಮೊದಲು ವೈರಲ್ ಆದ ಉದಾಹರಣೆ ಇದೆ. ಶಿಲ್ಪಾ ಶೆಟ್ಟಿಗೂ (Shilpa Shetty) ಇದೇ ರೀತಿಯ ಅನುಭವ ಆಗಿದೆ. ಅವರು ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಸ್ಮೃತಿ ಖನ್ನಾ ಅವರ ಮಗಳು ಅನ್ಯಕಾ ಅವಳ ಬರ್ತ್​ಡೇ ಸೆಲಬ್ರೇಷನ್​ಗೆ ತೆರಳಿದ್ದರು ಶಿಲ್ಪಾ ಶೆಟ್ಟಿ. ಇದಕ್ಕೆ ಮಗಳು ಸಮಿಷಾಳನ್ನೂ ಕರೆದುಕೊಂಡು ಬಂದಿದ್ದರು. ಪಾರ್ಟಿ ನಡೆದ ಪ್ರದೇಶದಿಂದ ಕಾರು ಇರುವ ಕಡೆಗೆ ಶಿಲ್ಪಾ ನಡೆದು ಬರುತ್ತಿದ್ದರು. ಆಗ ಪಾಪರಾಜಿಗಳು ಶಿಲ್ಪಾಗೆ ವಿಶ್ ಮಾಡಿದರು. ಈ ವೇಳೆ ಶಿಲ್ಪಾ ಮಗಳ ಜತೆ ಪೋಸ್​ ನೀಡಿದ್ದಾರೆ. ಇದಾದ ಬಳಿಕ ಅಲ್ಲಿಯೇ ಇದ್ದ ಅಭಿಮಾನಿಗಳು ಶಿಲ್ಪಾ ಅವರನ್ನು ಮಾತನಾಡಿಸಿದ್ದಾರೆ.

ಶಿಲ್ಪಾಗೆ ಫ್ಯಾನ್ಸ್ ಕಂಡರೆ ಖುಷಿ ಇದೆ. ಅವರು ಫ್ಯಾನ್ಸ್ ಜತೆ ಉತ್ತಮ ರಿಲೇಶನ್​ಶಿಪ್ ಹೊಂದಿದ್ದಾರೆ. ಅದೇ ರೀತಿ ಅಭಿಮಾನಿಗಳ ಜತೆ ಶಿಲ್ಪಾ ಮಾತನಾಡಿದ್ದಾರೆ. ಆದರೆ, ಓರ್ವ ಅಭಿಮಾನಿ ದುರ್ವರ್ತನೆ ತೋರಿದ್ದಾನೆ. ಶಿಲ್ಪಾ ಹಾಗೂ ಅವರ ಮಗಳು ಕಾರು ಏರುತ್ತಿದ್ದರು. ಅವರ ಜತೆಯೇ ಈತನೂ ಕಾರು ಏರಲು ಪ್ರಯತ್ನಿಸಿದ್ದಾನೆ. ಇದನ್ನು ಕಂಡ ಶಿಲ್ಪಾ ಒಂದು ಕ್ಷಣ ಶಾಕ್ ಆಗಿದ್ದಾರೆ. ‘ಏನು ಮಾಡುತ್ತಿದ್ದೀಯಾ’? ಎಂದು ಶಿಲ್ಪಾ ಪ್ರಶ್ನೆ ಮಾಡಿದ್ದಾರೆ. ಆ ಬಳಿಕ ಅಭಿಮಾನಿ ಕಾರಿನಿಂದ ದೂರ ನಡೆದಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಶಿಲ್ಪಾ ಅವರಿಗೆ ಕಳೆದ ವರ್ಷ ತೀವ್ರ ಮುಜುಗರದ ಪರಿಸ್ಥಿತಿ ಉಂಟಾಗಿತ್ತು. ಪತಿ ರಾಜ್​ ಕುಂದ್ರಾ ಅವರು ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಸಿಲುಕಿದ್ದರು. ಇದಾದ ಬಳಿಕ ಅವರು ಪತಿಗೆ ವಿಚ್ಛೇದನ ನೀಡುತ್ತಾರೆ ಎಂದು ವರದಿ ಆಗಿತ್ತು. ಆದರೆ, ಅದು ಸುಳ್ಳಾಗಿದೆ. ಅವರು ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ರಿಯಾಲಿಟಿ ಶೋಗಳಿಗೆ ಅವರು ಜಡ್ಜ್​ ಆಗಿದ್ದಾರೆ.

ಇದನ್ನೂ ಓದಿ: Shilpa Shetty: ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ ಶಿಲ್ಪಾ ಶೆಟ್ಟಿ; ವೈರಲ್ ಆಯ್ತು ಚಿತ್ರಗಳು

ನಿರ್ದೇಶಕನಿಗೆ ಗಾಜಿನ ಬಾಟಲಿಯಲ್ಲಿ ಹೊಡೆದ ಶಿಲ್ಪಾ ಶೆಟ್ಟಿ; ಅಡ್ಡ ಬಂದ ಗಾಯಕನಿಗೂ ಬಿತ್ತು ಏಟು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ