ನಿರ್ದೇಶಕನಿಗೆ ಗಾಜಿನ ಬಾಟಲಿಯಲ್ಲಿ ಹೊಡೆದ ಶಿಲ್ಪಾ ಶೆಟ್ಟಿ; ಅಡ್ಡ ಬಂದ ಗಾಯಕನಿಗೂ ಬಿತ್ತು ಏಟು

ಸೋಶಿಯಲ್​ ಮೀಡಿಯಾದಲ್ಲಿ ಶಿಲ್ಪಾ ಶೆಟ್ಟಿ ಅವರು ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ಬಗೆಬಗೆಯ ವಿಡಿಯೋ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಾರೆ.

ನಿರ್ದೇಶಕನಿಗೆ ಗಾಜಿನ ಬಾಟಲಿಯಲ್ಲಿ ಹೊಡೆದ ಶಿಲ್ಪಾ ಶೆಟ್ಟಿ; ಅಡ್ಡ ಬಂದ ಗಾಯಕನಿಗೂ ಬಿತ್ತು ಏಟು
ಶಿಲ್ಪಾ ಶೆಟ್ಟಿ, ರೋಹಿತ್ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on: Mar 03, 2022 | 8:06 AM

ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಸಖತ್​ ಬ್ಯುಸಿ ಆಗಿದ್ದಾರೆ. ಸಿನಿಮಾ, ಕಿರುತೆರೆ, ಯೋಗ ತರಬೇತಿ, ಉದ್ಯಮ, ಜಾಹೀರಾತು ಹೀಗೆ ಹಲವು ಕ್ಷೇತ್ರದಲ್ಲಿ ಅವರು ತೊಡಗಿಕೊಂಡಿದ್ದಾರೆ. ಪತಿ ರಾಜ್​ ಕುಂದ್ರಾ ಅವರಿಂದ ಉಂಟಾದ ಅಶ್ಲೀಲ ಸಿನಿಮಾ ವಿವಾದದ ಸಂದರ್ಭದಲ್ಲಿ ಶಿಲ್ಪಾ ಶೆಟ್ಟಿ ಸ್ವಲ್ಪ ಮಂಕಾಗಿದ್ದರು. ಆದರೆ ಈಗ ಅವರ ಸಂಪೂರ್ಣವಾಗಿ ಹಳೇ ಚಾರ್ಮ್​ ಪಡೆದುಕೊಂಡಿದ್ದಾರೆ. ಎಲ್ಲ ಕಾರ್ಯಕ್ರಮಗಳಲ್ಲೂ ತುಂಬ ಲವಲವಿಕೆಯಿಂದ ಅವರು ಭಾಗವಹಿಸುತ್ತಿದ್ದಾರೆ. ಕಿರುತೆರೆಯಲ್ಲಿ ಶಿಲ್ಪಾ ಶೆಟ್ಟಿ ಜಡ್ಜ್​ ಆಗಿರುವ ‘ಇಂಡಿಯಾಸ್​ ಗಾಟ್​ ಟ್ಯಾಲೆಂಟ್​’ (India’s Got Talent) ಕಾರ್ಯಕ್ರಮ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಈ ಶೋ ಸೆಟ್​ನಲ್ಲಿ ಒಂದು ವಿಲಕ್ಷಣ ಘಟನೆ ನಡೆದಿದೆ. ಖ್ಯಾತ ನಿರ್ದೇಶಕ ರೋಹಿತ್​ ಶೆಟ್ಟಿ (Rohit Shetty) ಅವರಿಗೆ ಶಿಲ್ಪಾ ಶೆಟ್ಟಿ ಅವರು ಗಾಜಿನ ಬಾಟಲಿಯಿಂದ ಹೊಡೆದಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ/ಗಾಯಕ ಬಾದ್​ಷಾ ಕೂಡ ಜಡ್ಜ್​ ಆಗಿದ್ದಾರೆ. ಅವರಿಗೂ ಕೂಡ ಏಟು ಬಿದ್ದಿದೆ. ಸದ್ಯ ಈ ವಿಡಿಯೋ ವೈರಲ್​ ಆಗಿದೆ. ಅಷ್ಟಕ್ಕೂ ಶಿಲ್ಪಾ ಶೆಟ್ಟಿ ಈ ರೀತಿ ಮಾಡಿದ್ದು ಯಾಕೆ? ಇಲ್ಲಿದೆ ವಿವರ..

ಸೋಶಿಯಲ್​ ಮೀಡಿಯಾದಲ್ಲಿ ಶಿಲ್ಪಾ ಶೆಟ್ಟಿ ಅವರು ಸಖತ್​ ಆ್ಯಕ್ಟೀವ್​ ಆಗಿರುತ್ತಾರೆ. ಬಗೆಬಗೆಯ ವಿಡಿಯೋ ಮಾಡಿ ಅಭಿಮಾನಿಗಳನ್ನು ರಂಜಿಸುತ್ತಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು ಬರೋಬ್ಬರಿ 2.4 ಕೋಟಿ ಜನರು ಫಾಲೋ ಮಾಡುತ್ತಾರೆ. ತಮ್ಮನ್ನು ಫಾಲೋ ಮಾಡುವವರ ಮನರಂಜನೆಗಾಗಿ ಶಿಲ್ಪಾ ಶೆಟ್ಟಿ ಈ ರೀತಿ ಮಾಡಿದ್ದಾರೆ. ನಿರ್ದೇಶಕ ರೋಹಿತ್​ ಶೆಟ್ಟಿ ಜೊತೆ ನಡೆದಿರುವುದು ಒಂದು ಹುಸಿ ಹೊಡೆದಾಟ.

ಅಲ್ಲಿ ಆಗಿದ್ದು ಇಷ್ಟೇ.. ಶೂಟಿಂಗ್​ ಬಿಡುವಿನ ವೇಳೆ ಜಡ್ಜ್​ ಸೀಟ್​ನಲ್ಲಿ ಕುಳಿತಿದ್ದ ರೋಹಿತ್​ ಶೆಟ್ಟಿ ಮತ್ತು ಬಾದ್​ಷಾ ಅವರು ಗಾಢವಾಗಿ ಏನನ್ನೋ ಚರ್ಚೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಹಿಂದಿನಿಂದ ಬಂದ ಶಿಲ್ಪಾ ಶೆಟ್ಟಿ ಅವರು ರೋಹಿತ್​ ಶೆಟ್ಟಿಯ ಜೊತೆ ಮಾತನಾಡಲು ಪ್ರಯತ್ನಿಸಿದ್ದಾರೆ. ಆದರೆ ಅವರ ಕಡೆಗೆ ರೋಹಿತ್​ ಶೆಟ್ಟಿ ಗಮನ ಕೊಡಲಿಲ್ಲ. ಅದರಿಂದ ಶಿಲ್ಪಾ ಶೆಟ್ಟಿಗೆ ಕೋಪ ಬಂತು. ಪಕ್ಕದಲ್ಲಿ ಇದ್ದ ಗಾಜಿನ ಬಾಟಲ್​ ಎತ್ತಿಕೊಂಡು ರೋಹಿತ್​ ಶೆಟ್ಟಿಗೆ ಅವರು ಹೊಡೆದೇ ಬಿಟ್ಟರು. ‘ಸಿನಿಮಾದಲ್ಲಿ ಚಾನ್ಸ್​ ಕೊಡಿ ನನಗೆ’ ಎಂದು ಆವಾಜ್​ ಹಾಕಿದರು. ಅದರಿಂದ ಶಾಕ್​ ಆದ ರೋಹಿತ್​ ಶೆಟ್ಟಿ, ‘ಹುಚ್ಚು ಹಿಡಿದಿದೆಯಾ’ ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯೆ ಮಾತನಾಡಲು ಬಂದ ಬಾದ್​ಷಾ ಅವರಿಗೂ ಶಿಲ್ಪಾ ಶೆಟ್ಟಿ ಗಾಜಿನ ಬಾಟೆಲ್​ನಿಂದ ಹೊಡೆದಿದ್ದಾರೆ. ಇದೆಲ್ಲೂ ನಡೆದಿರುವುದು ತಮಾಷೆಗಾಗಿ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಒಂದಿಲ್ಲೊಂದು ಕಾರಣಕ್ಕೆ ಶಿಲ್ಪಾ ಶೆಟ್ಟಿ ಸುದ್ದಿ ಆಗುತ್ತಲೇ ಇರುತ್ತಾರೆ. ಈ ಹಿಂದೆ ಇದೇ ಶೋ ಶೂಟಿಂಗ್​ ವೇಳೆ ಅವರು ಕೇವಲ 8 ಬಾದಾಮಿಗಾಗಿ ಜಗಳ ಮಾಡಿದ್ದರು. ಆ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಕಾರ್ಯಕ್ರಮದ ಸೆಟ್​ಗೆ ಬರುವಾಗ ಶಿಲ್ಪಾ ಶೆಟ್ಟಿ ಅವರು ಬಾದಾಮಿ ಬೀಜಗಳನ್ನು ತರುತ್ತಾರೆ. ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ತಿನ್ನುವುದರಿಂದ ಸಾಕಷ್ಟು ಆರೋಗ್ಯದ ಉಪಯೋಗಗಳಿವೆ. ಆದರೆ ಶಿಲ್ಪಾ ಶೆಟ್ಟಿ ತಂದ ಬಾದಾಮಿಯನ್ನು ಇತರರು ತಿಂದು ಮುಗಿಸುತ್ತಾರೆ! ಅದು ಅವರ ಅಸಮಾಧಾನಕ್ಕೆ ಕಾರಣ ಆಗಿತ್ತು.

‘ಇವತ್ತು ನಾನು 6 ಬಾದಾಮಿ ತಂದಿದ್ದೇನೆ. ಕಳೆದ ಬಾರಿ ನಾನು 8 ಬಾದಾಮಿ ತಂದಿದ್ದೆ. ನನಗೆ ತಿನ್ನಲು ಸಿಕ್ಕಿದ್ದು ಒಂದು ಬಾದಾಮಿ ಮಾತ್ರ’ ಎಂದು ಅವರು ಟೇಬಲ್​ ಕುಟ್ಟಿ ಮಾತನಾಡಿದ್ದರು. ಇದನ್ನೆಲ್ಲ ಕೇಳಿಸಿಕೊಂಡ ಮತ್ತೋರ್ವ ಜಡ್ಜ್​, ಹಿರಿಯ ನಟಿ ಕಿರಣ್​ ಖೇರ್​ ಅವರು ಖಡಕ್​ ಉತ್ತರ ನೀಡಿದ್ದರು. ‘ನೀನು ಎಷ್ಟೊಂದು ಕಂಜೂಸ್. ಇಲ್ಲಿ ನಾವು ತುಂಬ ಜನ ಇದ್ದೇವೆ. ​ನೀನು ಕೇವಲ 6-8 ಬಾದಾಮಿ ತರುತ್ತೀದ್ದೀಯ’ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದರು. ಅದನ್ನು ಕೇಳಿ ಸೆಟ್​ನಲ್ಲಿ ಇದ್ದ ಎಲ್ಲರೂ ಜೋರಾಗಿ ನಕ್ಕಿದ್ದರು.

ಇದನ್ನೂ ಓದಿ:

ಭಯಾನಕ ಸ್ಪರ್ಧಿ ಕಂಡು ಬೆಚ್ಚಿಬಿದ್ದ ಜಡ್ಜ್​ಗಳು; ‘ಸಾಕು ನಿಲ್ಲಿಸಿ’ ಎಂದು ಕೂಗಿಕೊಂಡ ಶಿಲ್ಪಾ ಶೆಟ್ಟಿ, ಕಿರಣ್​ ಖೇರ್​

ಶಿಲ್ಪಾ ಶೆಟ್ಟಿಗೆ ಕೋಟ್ಯಂತರ ರೂಪಾಯಿ ಆಸ್ತಿ, ಮನೆ ಬರೆದುಕೊಟ್ಟ ರಾಜ್​ ಕುಂದ್ರಾ; ಅಚ್ಚರಿ ಮೂಡಿಸಿದ ನಡೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ