Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಯ್ಯಪ್ಪನುಂ ಕೋಶಿಯುಂ’ ಹಿಂದಿ ರಿಮೇಕ್​ನಲ್ಲಿ ಜಾನ್ ಅಬ್ರಹಾಂ- ಅರ್ಜುನ್ ಕಪೂರ್; ನಿರ್ದೇಶನ ಮಾಡಲಿದ್ದಾರೆ ಈ ಹಿಟ್ ನಿರ್ದೇಶಕ

ಮಲಯಾಳಂನ ಸೂಪರ್ ಹಿಟ್ ಚಿತ್ರ ‘ಅಯ್ಯಪ್ಪನುಂ ಕೋಶಿಯುಂ’ ಹಿಂದಿಗೆ ರಿಮೇಕ್ ಆಗುತ್ತಿದ್ದು, ಜಾನ್ ಅಬ್ರಹಾಂ ಹಾಗೂ ಅರ್ಜುನ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಮಿಷನ್ ಮಂಗಲ್’ ಖ್ಯಾತಿಯ ಜಗನ್ ಶಕ್ತಿ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

‘ಅಯ್ಯಪ್ಪನುಂ ಕೋಶಿಯುಂ’ ಹಿಂದಿ ರಿಮೇಕ್​ನಲ್ಲಿ ಜಾನ್ ಅಬ್ರಹಾಂ- ಅರ್ಜುನ್ ಕಪೂರ್; ನಿರ್ದೇಶನ ಮಾಡಲಿದ್ದಾರೆ ಈ ಹಿಟ್ ನಿರ್ದೇಶಕ
ಜಾನ್ ಅಬ್ರಹಾಂ ಮತ್ತು ಅರ್ಜುನ್ ಕಪೂರ್
Follow us
TV9 Web
| Updated By: shivaprasad.hs

Updated on: Sep 05, 2021 | 11:58 AM

ಮಲಯಾಳಂನ ಸೂಪರ್ ಹಿಟ್ ಸಿನಿಮಾ ‘ಅಯ್ಯಪ್ಪನುಂ ಕೋಶಿಯುಂ’ ಹಿಂದಿಗೆ ರಿಮೇಕ್ ಆಗುತ್ತಿದೆ. ಬಾಲಿವುಡ್‌ನ ಖ್ಯಾತ ನಟರಿಬ್ಬರು ಚಿತ್ರಕ್ಕೆ ಓಕೆ ಅಂದಿದ್ದು, ಚಿತ್ರದ ಕುರಿತು ನಿರೀಕ್ಷೆಗಳು ಹೆಚ್ಚಾಗಲು‌ ಕಾರಣವಾಗಿದೆ. ಹೌದು. ಬಿಟೌನ್ ನಲ್ಲಿ ಈಗಾಗಲೇ ತಮ್ಮ ಚಿತ್ರಗಳ ಮೂಲಕ‌ ಸಖತ್ ಸದ್ದು ಮಾಡಿರುವ, ಖಡಕ್‌ ಪಾತ್ರಗಳಿಂದ ಅಭಿಮಾನಿಗಳ‌ ಮನಗೆದ್ದಿರುವ ಜಾನ್ ಅಬ್ರಹಾಂ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತುದ್ದಾರೆ. ಹಾಗೆಯೇ ಮತ್ತೊಬ್ಬ ಹ್ಯಾಂಡ್ ಸಮ್ ನಟ ಅರ್ಜುನ್ ಕಪೂರ್ ಮಾಜಿ ಸೈನಿಕನ‌ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈ ಹಿಂದೆ ಅಭಿಷೇಕ್ ಬಚ್ಚನ್ ಮಾಜಿ ಸೈನಿಕನ ಪಾತ್ರದಲ್ಲಿ ಬಣ್ಣ ಹಚ್ಚುತ್ತಾರೆ ಎನ್ನಲಾಗಿತ್ತು. ಈಗ ಆ ಸ್ಥಾನಕ್ಕೆ ಅರ್ಜುನ್ ಕಪೂರ್ ಬಂದಿದ್ದಾರೆ. ಈ ಚಿತ್ರವನ್ನು ‘ಮಿಷನ್ ಮಂಗಲ್’ ಖ್ಯಾತಿಯ ಜಗನ್​ ಶಕ್ತಿ ನಿರ್ದೇಶನ ಮಾಡುತ್ತಿದ್ದಾರೆ.

ಮಲಯಾಳಂನಲ್ಲಿ ಸೂಪರ್ ಹಿಟ್ ಆಗಿದ್ದ ಈ ಚಿತ್ರವನ್ನು ಸಚಿ ನಿರ್ದೇಶಿಸಿದ್ದರು. ಪೃಥ್ವಿರಾಜ್ ಸುಕುಮಾರನ್ ಮಾಜಿ ಸೈನಿಕನ ಪಾತ್ರದಲ್ಲಿ ಅಭಿನಯಿಸಿದ್ದರೆ, ಬಿಜು‌ ಮೆನನ್ ಪೊಲೀಸ್ ಆಧಿಕಾರಿಯಾಗಿ ಅಬ್ಬರಿಸಿದ್ದರು. ಈ ಎರಡು ಪಾತ್ರಗಳ ಸಂಘರ್ಷವೇ ಕಥಾ ವಸ್ತುವಾಗಿದ್ದು, ನೋಡುಗರನ್ನು ಚಿತ್ರದ ಕೊನೆಯವರೆಗೂ ಹಿಡಿದು ಕೂರಿಸುವಂತಹ ಬಿಗಿ ನಿರೂಪಣೆಯನ್ನು ಚಿತ್ರ ಹೊಂದಿತ್ತು. ಈ ಚಿತ್ರದ ಅದ್ಭುತ ಯಶಸ್ಸು ಹಾಗೂ ಕತೆಯ ಸಾರ್ವತ್ರಿಕ ಅಂಶ, ಬೇರೆ ಭಾಷೆಗಳಲ್ಲೂ ರಿಮೇಕ್ ಆಗಲು ಕಾರಣವಾಗಿದೆ.

ಈ ಕುರಿತು ಜಗನ್ ಶಕ್ತಿ ಮಾತನಾಡಿದ್ದು, ‘‘ಅಯ್ಯಪ್ಪನುಂ ಕೋಶಿಯುಂ ಹಿಂದಿ ರಿಮೇಕ್ ಚಿತ್ರವನ್ನು ನಾನು ನಿರ್ದೇಶಿಸುತ್ತಿದ್ದೇನೆ. ಈ ಚಿತ್ರದಲ್ಲಿ ಜಾನ್ ಹಾಗೂ ಅರ್ಜುನ್ ಸಂಪೂರ್ಣ ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಜಾನ್ ಅಬ್ರಹಾಂ ನಿರ್ಮಿಸುತ್ತಿದ್ದು, ನಟರು ಈಗಾಗಲೇ ಪಾತ್ರಕ್ಕಾಗಿ ತಯಾರಿ ಆರಂಭಿಸಿದ್ದಾರೆ. ಹಿಂದಿ ಭಾಷೆ ಹಾಗೂ ನೋಡಿಗರಿಗೆ ಅನುಗುಣವಾಗಿ ಒಂದಷ್ಟು ಬದಲಾವಣೆ ಮಾಡಲಾಗುತ್ತದೆ. ಪ್ರಸ್ತುತ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ’’ ಎಂದಿದ್ದಾರೆ. ಈ ಚಿತ್ರವು ಡಿಸೆಂಬರ್​ನಲ್ಲಿ ಸೆಟ್ಟೇರಲಿದ್ದು, ಬಿಹಾರ್, ಜಾರ್ಖಂಡ್ ಭಾಗದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ.

ಈಗಾಗಲೇ ಟಾಲಿವುಡ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ತೆಲುಗಿನ ರಿಮೇಕ್ ನಲ್ಲಿ ನಟಿಸುತ್ತಿದ್ದಾರೆ. ಅವರಿಗೆ ಪ್ರತಿನಾಯಕನಾಗಿ ರಾಣಾ ದಗ್ಗುಬಾಟಿ ಕಾಣಿಸಿಕೊಂಡಿದ್ದು, ಈ ಚಿತ್ರದ ಹಾಡು ಹಾಗೂ ಟೀಸರ್ ಈಗಾಗಲೇ ಅಭಿಮಾನಿಗಳಿಗೆ ಪಕ್ಕಾ ಮಾಸ್ ಸಿನಿಮಾದ ಫೀಲ್ ಕೊಟ್ಟಿದೆ. ಈಗ ಬಾಲಿವುಡ್ ಕಡೆ ಹೊರಟಿರುವ ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರವನ್ನು, ಅಲ್ಲಿನ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕು.

ಇದನ್ನೂ ಓದಿ:

ಸೆಟ್ಟೇರಿತು ಶಾರುಖ್- ನಯನತಾರಾ ನಟನೆಯ ನೂತನ ಚಿತ್ರ; ಬಣ್ಣಹಚ್ಚಲಿದ್ದಾರಾ ಪ್ರಿಯಾಮಣಿ, ರಾಣಾ ದಗ್ಗುಬಾಟಿ?

Money Heist 5: ‘ಮನಿ ಹೈಸ್ಟ್​ 5’ ಮೋಡಿಗೆ ಸಿಲುಕಿದ ನಟಿ ಕೀರ್ತಿ ಸುರೇಶ್​: ನಾಯಿ ಜೊತೆಗಿನ ವಿಡಿಯೋ ವೈರಲ್​

(Jon Abraham and Arjun Kapoor will play the lead roles in Ayyappanum Koshiyum Bollywood remake)