AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

 ಸಮಂತಾ ಈಗ ಟ್ರಾಫಿಕ್ ಪೊಲೀಸ್, ಸ್ಟಾರ್​ ನಟನ ವಾಹನ ಅಡ್ಡಗಟ್ಟಿದ ನಟಿ; ಇದು ಸಿನಿಮಾ ವಿಚಾರ ಅಲ್ಲ

ಸಮಂತಾ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಈ ಮೊದಲು ಒಟ್ಟಾಗಿ ಕಾಣಿಸಿಕೊಂಡಿದ್ದ ಫೋಟೋ ವೈರಲ್ ಆಗಿತ್ತು. ಇಬ್ಬರೂ ಒಟ್ಟಾಗಿ ನಟಿಸಲಿದ್ದಾರೆ ಎನ್ನಲಾಗಿತ್ತು.

 ಸಮಂತಾ ಈಗ ಟ್ರಾಫಿಕ್ ಪೊಲೀಸ್, ಸ್ಟಾರ್​ ನಟನ ವಾಹನ ಅಡ್ಡಗಟ್ಟಿದ ನಟಿ; ಇದು ಸಿನಿಮಾ ವಿಚಾರ ಅಲ್ಲ
ಸಮಂತಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jul 19, 2022 | 2:44 PM

Share

ನಟಿ ಸಮಂತಾ (Samantha) ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರ ಅಭಿಮಾನಿ ಬಳಗ ದಿನ ಕಳೆದಂತೆ ಹಿರಿದಾಗುತ್ತಿದೆ. ಅವರ ನಟನೆ ಕಂಡು ಅನೇಕರು ಮೆಚ್ಚಿಕೊಂಡಿದ್ದಾರೆ. ‘ಪುಷ್ಪ’ ಚಿತ್ರದ (Pushpa Movie) ವಿಶೇಷ ಹಾಡಿನಲ್ಲಿ ಅವರ ಬಳುಕುವ ದೇಹ ನೋಡಿ ಅನೇಕರು ಫಿದಾ ಆಗಿದ್ದಾರೆ. ಈಗ ಸಮಂತಾ ಅವರು ಟ್ರಾಫಿಕ್ ಪೊಲೀಸ್ ಆಗಿದ್ದಾರೆ. ಸ್ಟಾರ್ ನಟನಿಗೆ ಕೈ ಅಡ್ಡ ಹಾಕಿ ಸಿಗ್ನಲ್ ಬ್ರೇಕ್ ಮಾಡಿದ್ದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗಂತ ಅವರು ಈ ರೀತಿ ಸಂಚಾರಿ ಪೊಲೀಸ್ ಆಗಿದ್ದು ಸಿನಿಮಾ ವಿಚಾರಕ್ಕಲ್ಲ. ಬದಲಿಗೆ ಜಾಹೀರಾತಿಗಾಗಿ.

ಸಮಂತಾ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಈ ಮೊದಲು ಒಟ್ಟಾಗಿ ಕಾಣಿಸಿಕೊಂಡಿದ್ದ ಫೋಟೋ ವೈರಲ್ ಆಗಿತ್ತು. ಇಬ್ಬರೂ ಒಟ್ಟಾಗಿ ನಟಿಸಲಿದ್ದಾರೆ ಎನ್ನಲಾಗಿತ್ತು. ಈಗ ಇವರು ಜಾಹೀರಾತಿನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಸಮಂತಾ ಅವರು ಟ್ರಾಫಿಕ್ ಪೊಲೀಸ್ ಆಗಿ ಮಿಂಚಿದ್ದಾರೆ.

ಇದನ್ನೂ ಓದಿ
Image
ಮಾಜಿ ಪತಿ ನಾಗ ಚೈತನ್ಯ ಜೊತೆ ಸ್ಪರ್ಧೆಗೆ ಇಳಿಯಲು ನೋ ಎಂದ ಸಮಂತಾ
Image
Sobhita Dhulipala: ಸಮಂತಾ ಮಾಜಿ ಪತಿ ನಾಗ ಚೈತನ್ಯ ಹೆಸರು ಎತ್ತಿದ್ದಕ್ಕೆ ಮಧ್ಯ ಬೆರಳು ತೋರಿಸಿ ಗರಂ ಆದ ಶೋಭಿತಾ?
Image
ದೇಶದ ಅತ್ಯಂತ ಜನಪ್ರಿಯ ನಟಿ ಸಮಂತಾ; ರಶ್ಮಿಕಾ ಮಂದಣ್ಣಗೆ ಎಷ್ಟನೇ ಸ್ಥಾನ?
Image
‘ನಿಮ್ಮ ಕೆಲಸದ ಮೇಲೆ ಗಮನಹರಿಸಿ’; ನಾಗ ಚೈತನ್ಯ ಫ್ಯಾನ್ಸ್​​ಗೆ ಎಚ್ಚರಿಕೆ ನೀಡಿದ ಸಮಂತಾ

ರಣವೀರ್ ಸಿಂಗ್ ಅವರಿಗೆ ನೆಗಡಿಯಿಂದ ತಲೆ ಭಾರ ಆಗಿರುತ್ತದೆ. ಹೀಗಾಗಿ, ತಿಳಿಯದೇ ಸಿಗ್ನಲ್ ಜಂಪ್ ಮಾಡಿ ಬರುತ್ತಾರೆ. ಈ ವೇಳೆ ರಣವೀರ್ ಅವರನ್ನು ಸಮಂತಾ ಅಡ್ಡಗಟ್ಟುತ್ತಾರೆ. ಈ ಜಾಹೀರಾತಿಗೆ ಸಮಂತಾ ಅವರೇ ಡಬ್ ಮಾಡಿದ್ದಾರೆ. ಈ ಜಾಹೀರಾತು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ರಣವೀರ್ ಸಿಂಗ್ ಹಾಗೂ ಸಮಂತಾ ಈ ರೀತಿಯಲ್ಲಾದರೂ ಒಂದಾದರಲ್ಲ ಎಂದು ಸಂತಸ ಹೊರಹಾಕಿದ್ದಾರೆ.

ಇದನ್ನೂ ಓದಿ: ಮಾಜಿ ಪತಿ ನಾಗ ಚೈತನ್ಯ ಜೊತೆ ಸ್ಪರ್ಧೆಗೆ ಇಳಿಯಲು ನೋ ಎಂದ ಸಮಂತಾ

ಸಮಂತಾ ಅವರು ಸ್ಪಷ್ಟವಾಗಿ ಹಿಂದಿ ಮಾತನಾಡುತ್ತಾರೆ. ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸೀರಿಸ್​ನಲ್ಲಿ ಅವರು ರಾಜಿ ಪಾತ್ರ ಮಾಡಿದ್ದರು. ಈ ಪಾತ್ರಕ್ಕೆ ಸಮಂತಾ ಅವರೇ ಡಬ್ ಮಾಡಿದ್ದರು. ಈ ಸರಣಿ ತೆರೆಗೆ ಬಂದ ನಂತರದಲ್ಲಿ ಬಾಲಿವುಡ್​ನಿಂದ ಅವರಿಗೆ ಹಲವು ಆಫರ್​ಗಳು ಬರುತ್ತಿವೆ. ಆದರೆ, ಯಾವ ಚಿತ್ರಗಳೂ ಈವರೆಗೆ ಅಧಿಕೃತ ಘೋಷಣೆ ಆಗಿಲ್ಲ. ‘ದಿ ಫ್ಯಾಮಿಲಿ ಮ್ಯಾನ್​’ ನಿರ್ದೇಶನ ಮಾಡಿದ್ದ ರಾಜ್​ ಮತ್ತು ಡಿಕೆ ಅವರ ಹೊಸ ವೆಬ್​ ಸರಣಿಯಲ್ಲಿ ಸಮಂತಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈವರೆಗೆ ಆ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಸಮಂತಾ ಅವರು ಹಾಲಿವುಡ್, ಕಾಲಿವುಡ್ ಹಾಗೂ ಟಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ.