Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepika Padukone: ಪಾರ್ವತಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ? ‘ಬ್ರಹ್ಮಾಸ್ತ್ರ’ 2ನೇ ಪಾರ್ಟ್​ ಬಗ್ಗೆ ಹರಡಿದೆ ಗುಸುಗುಸು

Brahmastra | Deepika Padukone: ‘ಬ್ರಹ್ಮಾಸ್ತ್ರ’ ಚಿತ್ರದ 2ನೇ ಪಾರ್ಟ್​ನಲ್ಲಿ ಪಾರ್ವತಿ ಪಾತ್ರವೇ ಮುಖ್ಯವಾಗಿರಲಿದೆ. ಆ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎಂಬ ಸುದ್ದಿ ಹರಡಿದೆ.

Deepika Padukone: ಪಾರ್ವತಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ? ‘ಬ್ರಹ್ಮಾಸ್ತ್ರ’ 2ನೇ ಪಾರ್ಟ್​ ಬಗ್ಗೆ ಹರಡಿದೆ ಗುಸುಗುಸು
ದೀಪಿಕಾ ಪಡುಕೋಣೆ
Follow us
TV9 Web
| Updated By: ಮದನ್​ ಕುಮಾರ್​

Updated on:Jul 19, 2022 | 12:51 PM

ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ಹೀರೋಯಿನ್​ ಆಗಿ ಗುರುತಿಸಿಕೊಂಡಿದ್ದಾರೆ. ಹಲವು ಪ್ರಾಜೆಕ್ಟ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ದೀಪಿಕಾ ನಟಿಸಿದ ‘ಚಪಾಕ್​’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲ. ‘83’ ಚಿತ್ರದಲ್ಲಿ ಅವರು ಅತಿಥಿ ಪಾತ್ರ ಮಾಡಿದ್ದರು. ಆ ಸಿನಿಮಾ ಕೂಡ ಹೇಳಿಕೊಳ್ಳುವಂತಹ ಯಶಸ್ಸು ಪಡೆಯಲಿಲ್ಲ. ಈಗ ದೀಪಿಕಾ ಪಡುಕೋಣೆ ಅವರು ಶಾರುಖ್​ ಖಾನ್​ ಜೊತೆ ‘ಪಠಾಣ್​’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದರ ನಡುವೆ ಮತ್ತೊಂದು ಸುದ್ದಿ ಕೇಳಿಬಂದಿದೆ. ‘ಬ್ರಹ್ಮಾಸ್ತ್ರ’ (Brahmastra) ಸಿನಿಮಾದಲ್ಲಿ ಅವರು ಪಾರ್ವತಿಯ (Parvati) ಪಾತ್ರ ಮಾಡುತ್ತಿದ್ದಾರೆ ಎಂಬ ಗುಸುಗುಸು ಹಬ್ಬಿದೆ. ಇದನ್ನು ಕೇಳಿ ದೀಪಿಕಾ ಪಡುಕೋಣೆ ಅಭಿಮಾನಿಗಳು ಎಗ್ಸೈಟ್​ ಆಗಿದ್ದಾರೆ.

ರಣಬೀರ್​ ಕಪೂರ್​ ಅವರು ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಅವರಿಗೆ ಜೋಡಿಯಾಗಿ ಆಲಿಯಾ ಭಟ್​ ಅಭಿನಯಿಸಿದ್ದಾರೆ. ಈ ಸಿನಿಮಾ ಮೂರು ಪಾರ್ಟ್​​ಗಳಲ್ಲಿ ಮೂಡಿಬರಲಿದೆ. ಮೊದಲ ಪಾತ್ರದಲ್ಲಿ ಶಿವನ ಪಾತ್ರ ಹೈಲೈಟ್​ ಆಗಲಿದೆ. ಎರಡನೇ ಪಾರ್ಟ್​ನಲ್ಲಿ ಪಾರ್ವತಿ ಪಾತ್ರವೇ ಮುಖ್ಯವಾಗಿರಲಿದ್ದು, ಆ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎಂಬ ಸುದ್ದಿ ಹರಡಿದೆ. ಆದರೆ ಈ ವಿಚಾರದ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

‘ಬ್ರಹ್ಮಾಸ್ತ್ರ: ಪಾರ್ಟ್​ 1: ಶಿವ’ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ದೀಪಿಕಾ ಪಡುಕೋಣೆ ಅವರ ಪಾತ್ರ ಪರಿಚಯಗೊಳ್ಳಲಿದೆ. ಅವರು ಪಾರ್ವತಿಯಾಗಿ ಕಾಣಿಸಿಕೊಳ್ಳುತ್ತಾರೆ. ಎರಡನೇ ಪಾರ್ಟ್​ನಲ್ಲಿ ಅವರ ಪಾತ್ರವೇ ಲೀಡ್​ ಆಗಿರುತ್ತದೆ ಎಂದೆಲ್ಲ ಹೇಳಲಾಗುತ್ತಿದೆ. ಆದರೆ ಇದರ ಬಗ್ಗೆ ಚಿತ್ರತಂಡದಿಂದ ಸ್ಪಷ್ಟನೆ ಸಿಕ್ಕಿಲ್ಲವಾದ್ದರಿಂದ ಅಭಿಮಾನಿಗಳು ಕಾದು ನೋಡುವುದೇ ಒಳಿತು. ‘ಬ್ರಹ್ಮಾಸ್ತ್ರ’ ಸಿನಿಮಾ ಸೆಪ್ಟೆಂಬರ್ 9ರಂದು ಬಿಡುಗಡೆ ಆಗುತ್ತಿದೆ. ಇದೇ ಮೊದಲ ಬಾರಿಗೆ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್ ಅವರು ಜೋಡಿಯಾಗಿ ನಟಿಸಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿದೆ. ರಿಯಲ್​ ಲೈಫ್​ನಲ್ಲಿಯೂ ಇವರಿಬ್ಬರು ಜೋಡಿ ಆಗಿರುವುದು ವಿಶೇಷ.

ಇದನ್ನೂ ಓದಿ
Image
119 ಕೋಟಿ ರೂಪಾಯಿ ಕೊಟ್ಟು ಮನೆ ಖರೀದಿಸಿದ ರಣವೀರ್​-ದೀಪಿಕಾ; ಇದರ ವಿಶೇಷತೆಗಳೇನು?
Image
Brahmastra: ಮಾಜಿ ಪ್ರೇಮಿಯ ಸಿನಿಮಾದಲ್ಲಿ ದೀಪಿಕಾ ಕದ್ದುಮುಚ್ಚಿ ನಟನೆ? ಝೂಮ್​ ಮಾಡಿ ಸಾಕ್ಷಿ ತೋರಿಸಿದ ನೆಟ್ಟಿಗರು
Image
Deepika Padukone: ಹೈದರಾಬಾದ್​ನಲ್ಲಿ ಶೂಟಿಂಗ್ ಬಿಟ್ಟು ಆಸ್ಪತ್ರೆಗೆ ಓಡಿದ ದೀಪಿಕಾ ಪಡುಕೋಣೆ; ಅಂಥದ್ದೇನಾಯ್ತು?
Image
Cannes 2022: ಕಾನ್ ಫಿಲ್ಮ್​ ಫೆಸ್ಟಿವಲ್​ನಲ್ಲಿ ಮಿಂಚಿದ ದೀಪಿಕಾ; ಇಲ್ಲಿವೆ ಫೋಟೋಗಳು

ರಣಬೀರ್​ ಕಪೂರ್​ ಅವರ ಆಪ್ತ ಸ್ನೇಹಿತ ಅಯಾನ್​ ಮುಖರ್ಜಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅಮಿತಾಭ್​ ಬಚ್ಚನ್​, ನಾಗಾರ್ಜುನ ಅವರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಕಳಪೆ ಗುಣಮಟ್ಟದ ಗ್ರಾಫಿಕ್ಸ್​ ಇದೆ ಎಂಬ ಕಾರಣಕ್ಕೆ ‘ಬ್ರಹ್ಮಾಸ್ತ್ರ’ ಟ್ರೇಲರ್​ ಅನ್ನು ಟ್ರೋಲ್​ ಮಾಡಲಾಗಿತ್ತು. ಅಲ್ಲದೇ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ದೃಶ್ಯಗಳು ಇವೆ ಎಂಬ ಆರೋಪ ಕೂಡ ಎದುರಾಗಿತ್ತು.

Published On - 12:34 pm, Tue, 19 July 22

ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್​ಗೆ ಪಂಜಾಬ್ ಬೌಲರ್ಸ್​ ಸುಸ್ತು
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ನಿಖಿಲ್ ಪಟ್ಟಾಭಿಷೇಕದ ಮಾತು ಸಭೆಯಲ್ಲಿ ಚರ್ಚೆಯಾಗಲಿದೆಯೇ?
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ಪೊನ್ನಣ್ಣ ಮತ್ತು ಮಂತರ್​​ಗೌಡನನ್ನು ಬಂಧಿಸಲೇಬೇಕೆಂದು ಬಿಜೆಪಿ ನಾಯಕರ ಪಟ್ಟು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ದುಡ್ಡು ಕೌಂಟ್ ಮಾಡಲು ನೋಟು ಎಣಿಸುವ ಮಶೀನ್ ತರಿಸಿದ ಅಧಿಕಾರಿಗಳು
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಒಂದೇ ಊರಿನವರಾದರೂ ನಾನು ವಿನಯ್​ರನ್ನು ನೋಡಿರಲಿಲ್ಲ: ಶಾಸಕ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಶ್ರೀಲಂಕಾದಲ್ಲಿರುವ ತಮಿಳು ಮೀನುಗಾರರ ಬಿಡುಗಡೆಗೆ ಪ್ರಧಾನಿ ಮೋದಿ ಒತ್ತಾಯ
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಯತ್ನಾಳ್ ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸಾಗುವ ನಿರೀಕ್ಷೆ ಇದೆ: ಸುಧಾಕರ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ
ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ