Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಫೋಟೋ ಹಂಚಿಕೊಂಡ ಆಮಿರ್ ಮಗಳು ಇರಾ ಖಾನ್; ಬಾಯ್​​ಫ್ರೆಂಡ್​ಗೆ ಬಾಡಿಶೇಮಿಂಗ್  

ಇರಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಒಂದಿಲ್ಲೊಂದು ಫೋಟೋ ಹಂಚಿಕೊಳ್ಳುತ್ತ ಇರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅವರ ದೇಹದ ತೂಕ ಹೆಚ್ಚಿದೆ. ಈ ಬಗ್ಗೆ ಇರಾಗೆ ಬೇಸರ ಇದೆ.

ಹೊಸ ಫೋಟೋ ಹಂಚಿಕೊಂಡ ಆಮಿರ್ ಮಗಳು ಇರಾ ಖಾನ್; ಬಾಯ್​​ಫ್ರೆಂಡ್​ಗೆ ಬಾಡಿಶೇಮಿಂಗ್   
ಇರಾ ಖಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 19, 2022 | 6:33 PM

ಆಮಿರ್ ಖಾನ್ (Aamir Khan) ಮಗಳು ಇರಾ ಖಾನ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿಲ್ಲ. ಅವರು ಯಾವುದೇ ಸಿನಿಮಾಗಳಲ್ಲಿ ಈವರೆಗೆ ನಟಿಸಿಲ್ಲ. ಫ್ಯಾಮಿಲಿ ಸದಸ್ಯರ ರೀತಿಯಲ್ಲಿ ಅವರಿಗೆ ಚಿತ್ರರಂಗಕ್ಕೆ ಬರೋಕೆ ಇಷ್ಟವಿಲ್ಲ. ಆದರೆ, ಇರಾ ಖಾನ್ (Ira Khan) ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋಗಳನ್ನು ಅವರು ಪೋಸ್ಟ್ ಮಾಡುತ್ತಾ ಇರುತ್ತಾರೆ. ಈಗ ಅವರು ಹೊಸ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಇರಾ ಅವರ ಬಾಯ್​ಫ್ರೆಂಡ್ ನೂಪುರ್ ಶಿಖಾರೆ ಕೂಡ ಇದ್ದಾರೆ. ಅವರನ್ನು ಇರಾ ಫ್ಯಾನ್ಸ್ ಸಖತ್ ಟ್ರೋಲ್ ಮಾಡಿದ್ದಾರೆ.

ಇರಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಒಂದಿಲ್ಲೊಂದು ಫೋಟೋ ಹಂಚಿಕೊಳ್ಳುತ್ತ ಇರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅವರ ದೇಹದ ತೂಕ ಹೆಚ್ಚಿದೆ. ಈ ಬಗ್ಗೆ ಇರಾಗೆ ಬೇಸರ ಇದೆ. ಈ ವಿಚಾರದಲ್ಲಿ ಅವರು ಖಿನ್ನತೆಗೆ ಕೂಡ ಒಳಗಾಗಿದ್ದರು. ದೇಹದ ತೂಕ ಇಳಿಸಿಕೊಳ್ಳಲು ಇರಾ ಪಣ ತೊಟ್ಟಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಈ ವಿಚಾರದಲ್ಲಿ ಅವರು ಬಾಡಿ ಶೇಮಿಂಗ್ ಎದುರಿಸಿದ್ದೂ ಇದೆ. ಈಗ ಇರಾ ಹಾಕಿರುವ ಹೊಸ ಫೋಟೋದಲ್ಲಿ ಅವರ ಬಾಯ್​ಫ್ರೆಂಡ್​ಅನ್ನು ಟ್ರೋಲ್ ಮಾಡಲಾಗಿದೆ.

ಇದನ್ನೂ ಓದಿ
Image
ಬಾಯ್​ಫ್ರೆಂಡ್​ ಜತೆ ಇರಾ ಖಾನ್​ ಬರ್ತ್​​ಡೇ ಆಚರಣೆ​; ಮತ್ತಷ್ಟು ಫೋಟೋ ಹಂಚಿಕೊಂಡ ಆಮಿರ್ ಮಗಳು  
Image
ಇರಾ ಖಾನ್ ಹಂಚಿಕೊಂಡ ಈ ಫೋಟೋದಲ್ಲಿದ್ದಾರೆ ಮಾಜಿ ಸ್ಟಾರ್ ನಟ; ಯಾರೆಂದು ಗುರುತಿಸುತ್ತೀರಾ?
Image
ಆಮಿರ್ ಖಾನ್ ಮಗಳಿ​ಗೆ ನಿರಂತರವಾಗಿ ಕಾಡುತ್ತಿದೆ ಈ ಸಮಸ್ಯೆ; ಹೊರ ಬರಲು ದಾರಿ ಕಾಣದೆ ಒದ್ದಾಡುತ್ತಿದ್ದಾರೆ ಇರಾ
Image
ಸ್ವಿಮ್ಮಿಂಗ್​ಪೂಲ್​ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಆಮಿರ್ ಮಗಳು ಇರಾ ಖಾನ್

ಇರಾ ಹಾಗೂ ನೂಪುರ್ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇದನ್ನು ಇವರು ಮುಚ್ಚಿಟ್ಟಿಲ್ಲ. ಇರಾಗೆ ಹೋಲಿಕೆ ಮಾಡಿದರೆ ನೂಪರ್ ನೋಡಲು ಅಂದವಾಗಿಲ್ಲ ಎಂಬುದು ಫ್ಯಾನ್ಸ್ ಅಭಿಪ್ರಾಯ. ಈ ಕಾರಣಕ್ಕೆ ನೂಪುರ್ ಜತೆ ಫೋಟೋ ಹಾಕಿದಾಗೆಲ್ಲ ಟ್ರೋಲ್ ಮಾಡಲಾಗುತ್ತದೆ. ಈಗ ಅಜ್ಜಿ ಹಾಗೂ ನೂಪುರ್ ಜತೆ ಒಟ್ಟಾಗಿ ನಿಂತಿರುವ ಫೋಟೋವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.

View this post on Instagram

A post shared by Ira Khan (@khan.ira)

ಇದನ್ನೂ ಓದಿ: ಬಾಯ್​ಫ್ರೆಂಡ್​ ಜತೆ ಇರಾ ಖಾನ್​ ಬರ್ತ್​​ಡೇ ಆಚರಣೆ​; ಮತ್ತಷ್ಟು ಫೋಟೋ ಹಂಚಿಕೊಂಡ ಆಮಿರ್ ಮಗಳು  

ಇರಾ ಹಂಚಿಕೊಂಡಿರುವ ಫೋಟೋಗೆ ಕೆಲವರು ‘ಅವರು ನಿಜಕ್ಕೂ ನಿಮ್ಮ ಬಾಯ್​​ಫ್ರೆಂಡಾ​? ಅವರನ್ನು ಎಲ್ಲಿಂದ ಹುಡುಕಿದಿರೋ ದೇವರಿಗೇ ಗೊತ್ತು’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ‘ನೀವು ಸ್ಟಾರ್​ ನಟನ ಮಗಳು ಎಂಬ ಮಾತ್ರಕ್ಕೆ ಸುದ್ದಿಯಲ್ಲಿದ್ದೀರಾ. ಇಲ್ಲದಿದ್ದರೆ ನೀವು ಜೀರೋ’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ನೂಪುರ್ ಅವರ ದೇಹದ ಬಣ್ಣದ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಇರಾ ಅವರ ದೇಹದ ಬಗ್ಗೆಯೂ ಹಗುರವಾಗಿ ಕಮೆಂಟ್ ಮಾಡಲಾಗಿದೆ. ಈ ಪೋಸ್ಟ್​ಗೆ ಕಮೆಂಟ್​ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರಲ್ಲಿ ಬಹುತೇಕ ಕಮೆಂಟ್​ಗಳು ನೆಗೆಟಿವ್ ಕಮೆಂಟ್​ಗಳೇ. ಆದರೆ, ಈ ಬಗ್ಗೆ ಇರಾ ಅವರು ತಲೆಕೆಡಿಸಿಕೊಂಡಿಲ್ಲ.

ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಕಿರುಕುಳವಿರಲಿಲ್ಲ: ಲಕ್ಷ್ಮಿಯ ತಂದೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ಬೆಳಗ್ಗೆ ಮಂಗಳೂರಲ್ಲೂ ಜೋರು ಮಳೆ, ಜನರಲ್ಲಿ ಕೊಂಚ ನಿರಾಳತೆ
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ದಶಕಗಳಿಂದ ಯತ್ನಾಳ್ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಲ್ಲೆ: ಕಾಶಪ್ಪನವರ್
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ವಾರಂಗಲ್​ನ ಉದ್ಯೋಗ ಮೇಳದಲ್ಲಿ ಕಾಲ್ತುಳಿತ; ಮೂವರು ಮಹಿಳೆಯರಿಗೆ ಗಾಯ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ತಾನೊಬ್ಬನೇ ಸಮಾಜದ ಪ್ರತಿನಿಧಿ ಅಂತ ಹೇಳೋದನ್ನ ಯತ್ನಾಳ್ ನಿಲ್ಲಿಸಬೇಕು: ಶಾಸಕ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಗಂಭೀರವಾಗಿ ಗಾಯಗೊಂಡಿರುವ ಪತಿ ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲು
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ