119 ಕೋಟಿ ರೂಪಾಯಿ ಕೊಟ್ಟು ಮನೆ ಖರೀದಿಸಿದ ರಣವೀರ್​-ದೀಪಿಕಾ; ಇದರ ವಿಶೇಷತೆಗಳೇನು?

ರಣವೀರ್ ಸಿಂಗ್ ಹಾಗೂ ದೀಪಿಕಾ ಖರೀದಿಸಿದ ಈ ಅಪಾರ್ಟ್​ಮೆಂಟ್ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಈ ಅಪಾರ್ಟ್​ಮೆಂಟ್​ನಿಂದ ಅರಬ್ಬೀ ಸಮುದ್ರ ಕಾಣಿಸಲಿದೆ.

119 ಕೋಟಿ ರೂಪಾಯಿ ಕೊಟ್ಟು ಮನೆ ಖರೀದಿಸಿದ ರಣವೀರ್​-ದೀಪಿಕಾ; ಇದರ ವಿಶೇಷತೆಗಳೇನು?
ರಣವೀರ್-ದೀಪಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 11, 2022 | 5:33 PM

ರಣವೀರ್ ಸಿಂಗ್ (Ranveer Singh) ಹಾಗೂ ದೀಪಿಕಾ ಪಡುಕೋಣೆ (Deepika Padukone) ಮುಂಬೈನಲ್ಲಿ ಸೆಟಲ್ ಆಗಿದ್ದಾರೆ. ಸಿನಿಮಾ, ಜಾಹೀರಾತುಗಳಿಂದ ದೊಡ್ಡ ಸಂಭಾವನೆ ಪಡೆಯುವ ಈ ದಂಪತಿ ನೂರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಮುಂಬೈನಲ್ಲಿ ಹಲವು ಮನೆಗಳನ್ನು ಇವರು ಹೊಂದಿದ್ದಾರೆ. ಈಗ ಈ ದಂಪತಿ ಬರೋಬ್ಬರಿ 119 ಕೋಟಿ ರೂಪಾಯಿ ಕೊಟ್ಟು ಮುಂಬೈನ ಸಮುದ್ರದ ಅಂಚಿನಲ್ಲಿ ಐಷಾರಾಮಿ ಫ್ಲಾಟ್ ಖರೀದಿ ಮಾಡಿದ್ದಾರೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ರಣವೀರ್ ಸಿಂಗ್ ಹಾಗೂ ದೀಪಿಕಾ ಖರೀದಿಸಿದ ಈ ಅಪಾರ್ಟ್​ಮೆಂಟ್ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಈ ಅಪಾರ್ಟ್​ಮೆಂಟ್​ನಿಂದ ಅರಬ್ಬೀ ಸಮುದ್ರ ಕಾಣಿಸಲಿದೆ. ವಿಶೇಷ ಎಂದರೆ ರಣವೀರ್ ಹಾಗೂ ದೀಪಿಕಾ ಬಾಲಿವುಡ್​ನ ಸ್ಟಾರ್ ನಟರಾದ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಅವರ ನೆರೆ ಮನೆಯವರಾಗಿದ್ದಾರೆ.

ರಣವೀರ್ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ ಅಮೆರಿಕಕ್ಕೆ ತೆರಳಿದ್ದರು. ರಣವೀರ್ ಸಿಂಗ್ ಅಲ್ಲಿಯೇ ಬರ್ತ್​ಡೇ ಆಚರಿಸಿಕೊಂಡಿದ್ದರು. ಈಗ ಮುಂಬೈಗೆ ಮರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಅವರು ಕೈಕೈ ಹಿಡಿದು ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಬೆನ್ನಲ್ಲೇ ಇಬ್ಬರೂ ಹೊಸ ಮನೆ ಖರೀದಿಸಿದ ಬಗ್ಗೆ ವರದಿ ಆಗಿದೆ.

ಇದನ್ನೂ ಓದಿ
Image
‘ನಾವು ‘ಕೆಜಿಎಫ್​’ ರೀತಿಯ ಸಿನಿಮಾ ಮಾಡಿದ್ರೆ ಕಟು ಟೀಕೆ ವ್ಯಕ್ತವಾಗುತ್ತಿತ್ತು’: ಕರಣ್​ ಜೋಹರ್​ ಆರೋಪ
Image
‘ನನ್ನನ್ನೇಕೆ ದೂಷಿಸುತ್ತೀರಿ?’; ಏಕಾಏಕಿ ಸಿಟ್ಟಾದ ನಿರ್ಮಾಪಕ ಕರಣ್​ ಜೋಹರ್
Image
‘ಬಾಡಿಗಾರ್ಡ್ಸ್​ ಇಲ್ಲದೇ ಬನ್ನಿ’​ ಎಂದು ರಶ್ಮಿಕಾಗೆ ಕರಣ್​ ಜೋಹರ್​ ಆಹ್ವಾನ: ನಂತರ ಏನಾಯ್ತು?
Image
‘ಇಂಥ ಕೆಲಸ ಮಾಡ್ಬೇಡಿ’: ಎಲ್ಲರ ಎದುರು ಕರಣ್​ ಜೋಹರ್​ಗೆ ಅನಿಲ್​ ಕಪೂರ್ ವಾರ್ನಿಂಗ್​; ವಿಡಿಯೋ ವೈರಲ್​​

ಮುಂಬೈನ ಬಾಂದ್ರಾ ಭಾಗದಲ್ಲಿ ಹಲವು ಬಾಲಿವುಡ್​ ಸೆಲೆಬ್ರಿಟಿಗಳು ವಾಸವಾಗಿದ್ದಾರೆ. ಸಮುದ್ರ ತೀರಕ್ಕೆ ಬಾಂದ್ರಾ ತಾಗಿಕೊಂಡಿದೆ. ಈ ಪ್ರದೇಶ ತುಂಬಾ ಐಷಾರಾಮಿಯಾಗಿಯೂ ಇದೆ. ಈ ಕಾರಣಕ್ಕೆ ಅನೇಕ ಸೆಲೆಬ್ರಿಟಿಗಳು ಇಲ್ಲಿ ವಾಸ ಮಾಡಲು ಆದ್ಯತೆ ನೀಡುತ್ತಾರೆ. ಸಲ್ಮಾನ್ ಖಾನ್ ಅವರ ಗ್ಯಾಲಾಕ್ಸಿ ಅಪಾರ್ಟ್​ಮೆಂಟ್ ಹಾಗೂ ಶಾರುಖ್ ಖಾನ್ ಅವರ ಮನ್ನತ್ ಬಂಗಲೆ ಬಾಂದ್ರಾದಲ್ಲಿಯೇ ಇದೆ.

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಅಪಾರ್ಟ್​ಮೆಂಟ್ ಒಂದರ 16, 17, 18 ಹಾಗೂ 19ನೇ ಫ್ಲೋರ್​ನಲ್ಲಿರುವ ಫ್ಲಾಟ್​ಗಳನ್ನು ಖರೀದಿ ಮಾಡಿದ್ದಾರೆ. ಇದರ ಒಟ್ಟೂ ಸುತ್ತಳತೆ 11,266 ಚದರ ಅಡಿ ಇದೆ. ಇನ್ನು 1,300 ಚದರ ಅಡಿಯ ಟೆರೇಸ್ ಕೂಡ ಇದೆ.

ಇದನ್ನೂ ಓದಿ:  ರಣವೀರ್ ಸಿಂಗ್​-ದೀಪಿಕಾ ಪಡುಕೋಣೆ ಮಧ್ಯೆ ಇರುವ ವಯಸ್ಸಿನ ಅಂತರವೆಷ್ಟು?

ಸಿನಿಮಾ ವಿಚಾರಕ್ಕೆ ಬರುವುದಾದರೆ ದೀಪಿಕಾ ಪಡುಕೋಣೆ ಅವರು ಶಾರುಖ್ ಖಾನ್ ನಟನೆಯ ‘ಪಠಾಣ್​’ ಚಿತ್ರಕ್ಕೆ ನಾಯಕಿ. ಹೃತಿಕ್ ನಟನೆಯ ‘ಫೈಟರ್’ ಚಿತ್ರಕ್ಕೂ ಅವರು ಹೀರೋಯಿನ್ ಆಗಿದ್ದಾರೆ. ‘ಪ್ರಾಜೆಕ್ಟ್​ ಕೆ’ ಸೇರಿ ಇನ್ನೂ ಹಲವು ಚಿತ್ರಗಳು ಅವರ ಕೈಯಲ್ಲಿವೆ. ರಣವೀರ್ ಸಿಂಗ್ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’, ‘ಸರ್ಕಸ್​’ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

Published On - 5:26 pm, Mon, 11 July 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ