ಸೆಲೆಬ್ರಿಟಿಗಳ ಲೈಂಗಿಕ ಜೀವನದ ಬಗ್ಗೆ ಮಾತನಾಡುವ ಕರಣ್​ ಜೋಹರ್​ಗೆ ಶೋನಲ್ಲೇ ರೋಸ್ಟ್​ ಮಾಡಿದ ಆಮಿರ್ ಖಾನ್

ಕರಣ್ ಜೋಹರ್ ಅವರು ಈ ಶೋನಲ್ಲಿ ಸಾಕಷ್ಟು ವೈಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಾರೆ. ಅದರಲ್ಲೂ ಸೆ*ಕ್ಸ್​ ಲೈಫ್​ ಬಗ್ಗೆ ಹೆಚ್ಚು ಪ್ರಶ್ನೆ ಮಾಡುತ್ತಾರೆ. ಇದರಿಂದ ಸಾಕಷ್ಟು ವಿವಾದ ಆದ ಉದಾಹರಣೆ ಇದೆ.

ಸೆಲೆಬ್ರಿಟಿಗಳ ಲೈಂಗಿಕ ಜೀವನದ ಬಗ್ಗೆ ಮಾತನಾಡುವ ಕರಣ್​ ಜೋಹರ್​ಗೆ ಶೋನಲ್ಲೇ ರೋಸ್ಟ್​ ಮಾಡಿದ ಆಮಿರ್ ಖಾನ್
ಕರೀನಾ-ಆಮಿರ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 02, 2022 | 2:33 PM

ಕರಣ್ ಜೋಹರ್ (Karan Johar) ಅವರು ‘ಕಾಫಿ ವಿತ್ ಕರಣ್’ ಶೋ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ. ಅವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಶೋನ ಏಳನೇ ಸೀಸನ್​ ಆರಂಭ ಆಗಿ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಕಳೆದ ಸೀಸನ್​ಗಳಂತೆ ಈ ಆವೃತ್ತಿಯಲ್ಲೂ ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ. ಇದಕ್ಕೆ ಕೆಲ ಸೆಲೆಬ್ರಿಟಿಗಳು ಉತ್ತರ ನೀಡಿದರೆ, ಇನ್ನೂ ಕೆಲವರು ಈ ರೀತಿಯ ಪ್ರಶ್ನೆಗಳಿಂದ ತಪ್ಪಿಸಿಕೊಂಡಿದ್ದಾರೆ. ಆಮಿರ್ ಖಾನ್ ಹಾಗೂ ಕರೀನಾ ಕಪೂರ್ ಅವರು ಈಗ ಏಳನೇ ಆವೃತ್ತಿಗೆ ಅತಿಥಿಗಳಾಗಿ ಬಂದಿದ್ದಾರೆ. ಅವರ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ (Laal Singh Chaddha) ತೆರೆಗೆ ಬರುವುದಕ್ಕೆ ರೆಡಿ ಇದೆ. ಈ ಚಿತ್ರದ ಪ್ರಚಾರದ ಹಿನ್ನೆಲೆಯಲ್ಲಿ ಈ ಜೋಡಿ ‘ಕಾಫಿ ವಿತ್ ಕರಣ್ 7’ಗೆ ಆಗಮಿಸಿದೆ. ಇದರ ಪ್ರೋಮೋವನ್ನು ಕರಣ್ ಜೋಹರ್ ಹಂಚಿಕೊಂಡಿದ್ದಾರೆ.

ಕರಣ್ ಜೋಹರ್ ಅವರು ಈ ಶೋನಲ್ಲಿ ಸಾಕಷ್ಟು ವೈಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಾರೆ. ಅದರಲ್ಲೂ ಸೆ*ಕ್ಸ್​ ಲೈಫ್​ ಬಗ್ಗೆ ಹೆಚ್ಚು ಪ್ರಶ್ನೆ ಮಾಡುತ್ತಾರೆ. ಇದರಿಂದ ಸಾಕಷ್ಟು ವಿವಾದ ಆದ ಉದಾಹರಣೆ ಇದೆ. ಈ ಕಾರಣಕ್ಕೆ ಈ ರೀತಿಯ ಪ್ರಶ್ನೆಗಳು ಎದುರಾದಾಗ ಮೌನ ತಾಳುವವರೇ ಹೆಚ್ಚು. ಈಗ ಕರೀನಾ ಕಪೂರ್​ಗೂ ಇದೇ ರೀತಿಯ ಪ್ರಶ್ನೆ ಕೇಳಲಾಯಿತು. ಇದಕ್ಕೆ ಆಮಿರ್ ಖಾನ್ ಅವರು ಕರಣ್ ಜೋಹರ್​​ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಆಮಿರ್ ಖಾನ್ ಮಾತಿನ ಧಾಟಿ ಕೇಳಿ ಕರಣ್ ಜೋಹರ್ ಕೊಂಚ ಮಂಕಾದರು.

‘ಮಗುವನ್ನು ಪಡೆದ ನಂತರದಲ್ಲಿ ಲೈಂಗಿಕ ಜೀವನದ ಗುಣಮಟ್ಟ ಹೇಗಿರುತ್ತದೆ’ ಎಂದು ಕರೀನಾ ಕಪೂರ್​ಗೆ ಪ್ರಶ್ನೆ ಮಾಡಿದರು ಕರಣ್. ಈ ಸಂದರ್ಭದಲ್ಲಿ ಕರಣ್​ ವೈಯಕ್ತಿಕ ಜೀವನದ ಬಗ್ಗೆ ಕರೀನಾ ಮಾತನಾಡಿದರು. ಇದಕ್ಕೆ ಕರಣ್ ಜೋಹರ್ ಅವರು, ‘ಆ ರೀತಿ ವಿಚಾರಗಳನ್ನು ನಾನು ಮಾತನಾಡುವುದಿಲ್ಲ. ಏಕೆಂದರೆ ಮನೆಯಲ್ಲಿ ನನ್ನ ತಾಯಿ ಈ ಶೋ ನೋಡುತ್ತಿರುತ್ತಾರೆ’ ಎಂದರು.

View this post on Instagram

A post shared by Karan Johar (@karanjohar)

ಇದನ್ನೂ ಓದಿ: ‘ರಶ್ಮಿಕಾ ಮಂದಣ್ಣ ಡಾರ್ಲಿಂಗ್’; ಕರಣ್ ಜೋಹರ್ ಶೋನಲ್ಲಿ ಮಾತನಾಡಿದ ವಿಜಯ್ ದೇವರಕೊಂಡ

‘ನೀವು ಬೇರೆಯವರ ಸೆಕ್ಸ್​ ಜೀವನದ ಬಗ್ಗೆ ಮಾತನಾಡಿದರೆ ನಿಮ್ಮ ತಾಯಿ ಏನು ಅಂದುಕೊಳ್ಳುವುದಿಲ್ಲವೇ? ಏನಿದು ಈ ಪ್ರಶ್ನೆಗಳು’ ಎಂದು ಖಡಕ್ ಆಗಿಯೇ ಉತ್ತರಿಸಿದ್ದಾರೆ ಆಮಿರ್ ಖಾನ್​. ಅವರ ಮಾತನ್ನು ಕೇಳಿ ಕರಣ್ ಜೋಹರ್ ಕೊಂಚ ಮಂಕಾದರು.

Published On - 2:32 pm, Tue, 2 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ