‘ರಶ್ಮಿಕಾ ಮಂದಣ್ಣ ಡಾರ್ಲಿಂಗ್’; ಕರಣ್ ಜೋಹರ್ ಶೋನಲ್ಲಿ ಮಾತನಾಡಿದ ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣ ಜತೆಗಿನ ಸಂಬಂಧ ಎಂತಹದ್ದು ಎಂದು ಕರಣ್ ಜೋಹರ್ ಅವರು ವಿಜಯ್​ ದೇವರಕೊಂಡಗೆ ನೇರ ಪ್ರಶ್ನೆ ಇಟ್ಟಿದ್ದಾರೆ. ಇದಕ್ಕೆ ವಿಜಯ್ ಅವರು ಯಾವುದೇ ಭಾವನೆ ವ್ಯಕ್ತಪಡಿಸದೆ ನೇರವಾಗಿ ಎಲ್ಲವನ್ನೂ ಹೇಳಿಕೊಂಡಿದ್ದಾರೆ.

‘ರಶ್ಮಿಕಾ ಮಂದಣ್ಣ ಡಾರ್ಲಿಂಗ್’; ಕರಣ್ ಜೋಹರ್ ಶೋನಲ್ಲಿ ಮಾತನಾಡಿದ ವಿಜಯ್ ದೇವರಕೊಂಡ
ರಶ್ಮಿಕಾ-ವಿಜಯ್
TV9kannada Web Team

| Edited By: Rajesh Duggumane

Jul 28, 2022 | 10:09 PM

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ಬಗ್ಗೆ ಹಲವು ಅಂತೆ-ಕಂತೆಗಳು ಇವೆ. ಆದರೆ, ಈ ಸುದ್ದಿಗಳ ಬಗ್ಗೆ ಜೋಡಿ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಕೆಲ ಸಂದರ್ಭದಲ್ಲಿ ಇವರು ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದೂ ಇದೆ. ಆದರೆ, ಇವರ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಮಾತ್ರ ನಿಂತಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡುವ ಕೆಲಸ ವಿಜಯ್ ದೇವರಕೊಂಡ ಅವರಿಂದ ಆಗಿದೆ. ‘ಕಾಫಿ ವಿತ್ ಕರಣ್​ ಸೀಸನ್​ 7’ರ ನಾಲ್ಕನೇ ಸಂಚಿಕೆಯಲ್ಲಿ ವಿಜಯ್ ದೇವರಕೊಂಡ (Vijay Devrakonda) ಹಾಗೂ ಅನನ್ಯಾ ಪಾಂಡೆ ಆಗಮಿಸಿದ್ದರು. ಈ ವೇಳೆ ವಿಜಯ್ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ರಶ್ಮಿಕಾ ಮಂದಣ್ಣ ಜತೆಗಿನ ಸಂಬಂಧ ಎಂತಹದ್ದು ಎಂದು ಕರಣ್ ಜೋಹರ್ ಅವರು ವಿಜಯ್​ ದೇವರಕೊಂಡಗೆ ನೇರ ಪ್ರಶ್ನೆ ಇಟ್ಟಿದ್ದಾರೆ. ಇದಕ್ಕೆ ವಿಜಯ್ ಅವರು ಯಾವುದೇ ಭಾವನೆ ವ್ಯಕ್ತಪಡಿಸದೆ ನೇರವಾಗಿ ಎಲ್ಲವನ್ನೂ ಹೇಳಿಕೊಂಡಿದ್ದಾರೆ. ರಶ್ಮಿಕಾ ಅವರನ್ನು ಪ್ರೀತಿಯಿಂದ ಡಾರ್ಲಿಂಗ್ ಎಂದು ಕರೆದಿದ್ದಾರೆ.

‘ನನ್ನ ವೃತ್ತಿ ಜೀವನದ ಆರಂಭದ ವರ್ಷಗಳಲ್ಲಿ ನಾವು (ರಶ್ಮಿಕಾ ಮಂದಣ್ಣ) ಒಟ್ಟಿಗೆ ಎರಡು ಸಿನಿಮಾ ಮಾಡಿದ್ದೇವೆ. ರಶ್ಮಿಕಾ ಅವರು ಡಾರ್ಲಿಂಗ್​. ಅವರೆಂದರೆ ಇಷ್ಟ. ನನಗೆ ರಶ್ಮಿಕಾ ನಿಜಕ್ಕೂ ಒಳ್ಳೆಯ ಫ್ರೆಂಡ್. ನೀವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದರೆ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತೀರಿ. ಸಾಕಷ್ಟು ಏರಿಳಿತಗಳು ಸೃಷ್ಟಿಯಾಗುತ್ತವೆ. ನೀವು ಬಹುಬೇಗ ಕ್ಲೋಸ್ ಆಗುತ್ತೀರಿ’ ಎಂದು ತಮ್ಮ ಹಾಗೂ ರಶ್ಮಿಕಾ ಮಂದಣ್ಣ ನಡುವಿನ ಸಂಬಂಧದ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಓರ್ವ ಹುಡುಗಿಯ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ನನಗೆ ಸ್ವಲ್ಪ ಸಮಯ ಹಿಡಿಯುತ್ತದೆ. ಆದರೆ ಇದ್ದಕ್ಕಿದ್ದಂತೆ ನಿರ್ದೇಶಕರು ಬಂದು ನಾಯಕಿ ಪಕ್ಕ ಕೂರಿಸಿ, ಅವಳ ಕೆನ್ನೆಯನ್ನು ಮುಟ್ಟುವಂತೆ ಹೇಳುತ್ತಾರೆ. ಇದು ನಿಜಕ್ಕೂ ಕಷ್ಟದ ಕೆಲಸ ಎಂದಿದ್ದಾರೆ’ ವಿಜಯ್ ದೇವರಕೊಂಡ.

ಇದನ್ನೂ ಓದಿ: ಕಪ್ಪು-ಬಿಳುಪು ಫೋಟೋ ಮೂಲಕ ಟೆಂಪ್ರೇಚರ್ ಹೆಚ್ಚಿಸಿದ ರಶ್ಮಿಕಾ ಮಂದಣ್ಣ

ಇದನ್ನೂ ಓದಿ

‘ನನಗೆ ನನ್ನ ರಿಲೇಶನ್​ಶಿಪ್ ಸ್ಟೇಟಸ್ ತಿಳಿಸಲು ಇಷ್ಟವಿಲ್ಲ. ನನಗೆ ಮದುವೆ ಆಗಬೇಕು, ಮಕ್ಕಳನ್ನು ಮಾಡಿಕೊಳ್ಳಬೇಕು ಎಂಬ ಆಸೆ ಇದೆ. ನಾನು ಮದುವೆ ಆಗುವಾಗ ಅಧಿಕೃತವಾಗಿ ಘೋಷಣೆ ಮಾಡುತ್ತೇನೆ. ಅಲ್ಲಿಯವರೆಗೆ ನನ್ನನ್ನು ಇಷ್ಟಪಡುವವರ ಮನಸ್ಸನ್ನು ನೋಯಿಸಲು ಇಷ್ಟಪಡುವುದಿಲ್ಲ’ ಎಂದಿದ್ದಾರೆ ಅವರು.

Follow us on

Related Stories

Most Read Stories

Click on your DTH Provider to Add TV9 Kannada