ವಿಕ್ರಾಂತ್ ರೋಣ ಚಿತ್ರಕ್ಕೆ ಎಲ್ಲೆಲ್ಲಿ ಎಷ್ಟೆಷ್ಟು ರೇಟಿಂಗ್? ಇಲ್ಲಿದೆ ಪೂರ್ಣ ವಿವರ

ಸಿನಿಮಾ ಟಿಕೆಟ್ ಬುಕಿಂಗ್ ಆ್ಯಪ್ ‘ಬುಕ್ ಮೈ ಶೋ’ದಲ್ಲಿ ರೇಟಿಂಗ್ ನೀಡುವ ಅವಕಾಶ ಇದೆ. ‘ವಿಕ್ರಾಂತ್ ರೋಣ’ ಚಿತ್ರವನ್ನು ನೋಡಿದವರು ಈ ಆ್ಯಪ್​​ನಲ್ಲಿ ಒಳ್ಳೆಯ ರೇಟಿಂಗ್ ನೀಡುತ್ತಿದ್ದಾರೆ.

ವಿಕ್ರಾಂತ್ ರೋಣ ಚಿತ್ರಕ್ಕೆ ಎಲ್ಲೆಲ್ಲಿ ಎಷ್ಟೆಷ್ಟು ರೇಟಿಂಗ್? ಇಲ್ಲಿದೆ ಪೂರ್ಣ ವಿವರ
ಜಾಕ್ವೆಲಿನ್​-ಸುದೀಪ್
Follow us
| Updated By: ರಾಜೇಶ್ ದುಗ್ಗುಮನೆ

Updated on: Jul 28, 2022 | 7:57 PM

‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ಇಂದು (ಜುಲೈ 28) ವಿಶ್ವಾದ್ಯಂತ ತೆರೆಗೆ ಬಂದಿದೆ. ಈ ಸಿನಿಮಾ ಫ್ಯಾನ್ಸ್​​ಗೆ ಇಷ್ಟವಾಗಿದೆ. ಸಿನಿಪ್ರಿಯರು ಮುಗಿಬಿದ್ದು ಚಿತ್ರ ವೀಕ್ಷಣೆ ಮಾಡುತ್ತಿದ್ದಾರೆ. ಚಿತ್ರದ ಮೊದಲ ದಿನದ ಗಳಿಕೆ ಎಷ್ಟಾಗಲಿದೆ ಎಂಬ ಲೆಕ್ಕಾಚಾರ ತಿಳಿಯಲು ಸುದೀಪ್ (Sudeep)  ಫ್ಯಾನ್ಸ್ ಕಾದಿದ್ದಾರೆ. ಈ ಮಧ್ಯೆ ‘ವಿಕ್ರಾಂತ್​ ರೋಣ’ ಚಿತ್ರಕ್ಕೆ ಎಲ್ಲ ಕಡೆಗಳಲ್ಲೂ ಒಳ್ಳೆಯ ರೇಟಿಂಗ್ ಸಿಗುತ್ತಿದೆ. ಇದು ಅವರ ಫ್ಯಾನ್ಸ್ ಖುಷಿ ಹೆಚ್ಚಿಸಿದೆ.

ಸಿನಿಮಾ ಟಿಕೆಟ್ ಬುಕಿಂಗ್ ಆ್ಯಪ್ ‘ಬುಕ್ ಮೈ ಶೋ’ದಲ್ಲಿ ರೇಟಿಂಗ್ ನೀಡುವ ಅವಕಾಶ ಇದೆ. ‘ವಿಕ್ರಾಂತ್ ರೋಣ’ ಚಿತ್ರವನ್ನು ನೋಡಿದವರು ಈ ಆ್ಯಪ್​​ನಲ್ಲಿ ಒಳ್ಳೆಯ ರೇಟಿಂಗ್ ನೀಡುತ್ತಿದ್ದಾರೆ. ಈ ಚಿತ್ರಕ್ಕೆ ಶೇ. 91 ರೇಟಿಂಗ್ (ಜುಲೈ 28 ಸಂಜೆ 7 ಗಂಟೆಗೆ ಅನುಸಾರವಾಗಿ) ಸಿಕ್ಕಿದೆ. 3.7 ಸಾವಿರ ಜನರು ಈ ಸಿನಿಮಾಗೆ ರೇಟಿಂಗ್ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇದರಲ್ಲಿ ಬದಲಾವಣೆ ಆಗಬಹುದು.

ಐಎಂಡಿಬಿ ವೆಬ್​ಸೈಟ್​ನಲ್ಲಿ ಎಲ್ಲಾ ಸಿನಿಮಾಗಳಿಗೆ ರೇಟಿಂಗ್ ನೀಡಲಾಗುತ್ತದೆ. ಇದಕ್ಕೆ ರೇಟಿಂಗ್ ನೀಡುವವರು ಪ್ರೇಕ್ಷಕರೇ. ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಐಎಂಡಿಬಿಯಲ್ಲಿ 9.3/10 ರೇಟಿಂಗ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಚಿತ್ರದ ರೇಟಿಂಗ್ ಹೆಚ್ಚಿದರೆ ಸಿನಿಮಾಗೆ ಮತ್ತಷ್ಟು ಮೈಲೇಜ್ ಸಿಗಲಿದೆ.

ಇದನ್ನೂ ಓದಿ
Image
Prashanth Neel: ಕಿಚ್ಚ ಸುದೀಪ್​, ‘ವಿಕ್ರಾಂತ್ ರೋಣ’ ತಂಡಕ್ಕೆ ವಿಶ್ ಮಾಡಿದ ‘ಕೆಜಿಎಫ್​ 2’ ನಿರ್ದೇಶಕ ಪ್ರಶಾಂತ್​ ನೀಲ್​
Image
Vikrant Rona Review: ಸಸ್ಪೆನ್ಸ್ ಕಥೆಯ ‘ರಂಗು’ ಹೆಚ್ಚಿಸಿದ ಸುದೀಪ್-ಅನೂಪ್​; ಇಷ್ಟವಾಗುತ್ತೆ ಕಿಚ್ಚನ ಗೆಟಪ್
Image
Vikrant Rona Twitter Review: ‘ಇದು ಬೆಸ್ಟ್​​ 3ಡಿ ಅನುಭವ’: ವಿಕ್ರಾಂತ್​ ರೋಣ ನೋಡಿ ಮೆಚ್ಚಿದ ಫ್ಯಾನ್ಸ್​
Image
Vikrant Rona Review: ವಿದೇಶಿ ಸೆನ್ಸಾರ್​ ಸದಸ್ಯರಿಂದ ‘ವಿಕ್ರಾಂತ್​ ರೋಣ’ ವಿಮರ್ಶೆ; ಕ್ಲೈಮ್ಯಾಕ್ಸ್​ ಬಗ್ಗೆ ವಿಶೇಷ ಮೆಚ್ಚುಗೆ

ಬುಕ್ ಮೈ ಶೋ ಹಾಗೂ ಐಎಂಡಿಬಿ ರೇಟಿಂಗ್ ನೋಡಿ ಸಿನಿಮಾ ವೀಕ್ಷಿಸಲು ತೆರಳುವ ವರ್ಗವೇ ಇದೆ. ಎಲ್ಲ ಕಡೆಗಳಲ್ಲಿ ಚಿತ್ರಕ್ಕೆ ಒಳ್ಳೆಯ ರೇಟಿಂಗ್ ಸಿಗುತ್ತಿರುವ ಕಾರಣ ವೀಕೆಂಡ್​ನಲ್ಲಿ ಈ ಚಿತ್ರ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ತೆರಳುವ ಸಾಧ್ಯತೆ ಇದೆ. ಸೋಮವಾರ (ಆಗಸ್ಟ್​ 1) ಈ ಚಿತ್ರ ಯಾವ ರೀತಿಯಲ್ಲಿ ಕಲೆಕ್ಷನ್ ಮಾಡಲಿದೆ ಎಂಬುದು ತುಂಬಾನೇ ಮುಖ್ಯ ಆಗಲಿದೆ.

ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಚಿತ್ರ ನೋಡುವಾಗ ಕಿರಿಕ್​; ಥಿಯೇಟರ್​ನಲ್ಲೇ ಝಳಪಿಸಿದ ಮಚ್ಚು, ಲಾಂಗ್

‘ವಿಕ್ರಾಂತ್ ರೋಣ’ ಚಿತ್ರವನ್ನು ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಅನೂಪ್ ಭಂಡಾರಿ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ರಂಗಿತರಂಗ’ದ ಅನೇಕ ತಂತ್ರಗಳನ್ನು ಇಲ್ಲಿಯೂ ಅಳವಡಿಕೆ ಮಾಡಿಕೊಂಡಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

Daily Devotional: ಮಹಿಳೆಯರು ರಾತ್ರಿ ಕನ್ನಡಿ ನೋಡಬಾರದು ಏಕೆ?
Daily Devotional: ಮಹಿಳೆಯರು ರಾತ್ರಿ ಕನ್ನಡಿ ನೋಡಬಾರದು ಏಕೆ?
Nithya Bhavishya: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವಿನ ಕ್ಷಣದ ವಿಡಿಯೋ ವೈರಲ್
ಯಲಾ ಕುನ್ನಿ ಚಿತ್ರದಲ್ಲಿ ಕೋಮಲ್ ಜತೆ ಮಿತ್ರಾಗೆ ಸಿಕ್ಕಿದೆ ಡಿಫರೆಂಟ್ ಪಾತ್ರ
ಯಲಾ ಕುನ್ನಿ ಚಿತ್ರದಲ್ಲಿ ಕೋಮಲ್ ಜತೆ ಮಿತ್ರಾಗೆ ಸಿಕ್ಕಿದೆ ಡಿಫರೆಂಟ್ ಪಾತ್ರ
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
'ಡಿ. 9ರೊಳಗೆ ನಿರ್ಧಾರ ಪ್ರಕಟಿಸದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ'
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್