‘ವಿಕ್ರಾಂತ್ ರೋಣ’ ಚಿತ್ರ ಆನ್ಲೈನ್ನಲ್ಲಿ ಸೋರಿಕೆ; ಸುದೀಪ್ ಹೇಳಿದ ಮಾತು ನೆನಪಿಸಿಕೊಂಡ ಫ್ಯಾನ್ಸ್
ಕಿಚ್ಚ ಸುದೀಪ್ ಅವರು ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಈ ಚಿತ್ರವನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಚಿತ್ರರಂಗಕ್ಕೆ ಪೈರಸಿ ಅನ್ನೋದು ದೊಡ್ಡ ಶಾಪವಾಗಿದೆ. ದೊಡ್ಡ ಬಜೆಟ್ನ ಚಿತ್ರಗಳು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಲೀಕ್ ಆಗುತ್ತಿವೆ. ಇಂದು (ಜುಲೈ 28) ರಿಲೀಸ್ ಆದ ಸುದೀಪ್ (Kichcha Sudeep) ನಟನೆಯ ‘ವಿಕ್ರಾಂತ್ ರೋಣ’ ಚಿತ್ರಕ್ಕೂ (Vikrant Rona Movie) ಈಗ ಪೈರಸಿ ಕಾಟ ತಟ್ಟಿದೆ. ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಚಿತ್ರ ಆನ್ಲೈನ್ನಲ್ಲಿ ಲೀಕ್ ಆಗಿದೆ. ಇದು ಹಲವು ಫ್ಯಾನ್ಸ್ಗೆ ಬೇಸರ ಮೂಡಿಸಿದೆ. ಇನ್ನೂ ಕೆಲ ಫ್ಯಾನ್ಸ್ ಸುದೀಪ್ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಅವರು ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಈ ಚಿತ್ರವನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. 3ಡಿಯಲ್ಲಿ ಸಿನಿಮಾ ನೋಡಿದ ಅಭಿಮಾನಿಗಳು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದರ ಮಧ್ಯೆ ಸಿನಿಮಾ ಪೈರಸಿ ಆಗಿರುವುದು ಅಭಿಮಾನಿ ವಲಯಗಳಲ್ಲಿ ಆತಂಕ ಮೂಡಿಸಿದೆ. ಇದರಿಂದ ಚಿತ್ರದ ಕಲೆಕ್ಷನ್ಗೆ ಹೊಡೆತ ಬೀಳಬಹುದು ಎಂದು ಹೇಳಲಾಗುತ್ತಿದೆ.
ಸುದೀಪ್ ಅವರು ‘ವಿಕ್ರಾಂತ್ ರೋಣ’ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ದರು. ಈ ವೇಳೆ ಅವರಿಗೆ ಪೈರಸಿ ಬಗ್ಗೆಯೂ ಪ್ರಶ್ನೆ ಎದುರಾಗಿತ್ತು. ಆಗ ಮಾತನಾಡುತ್ತಾ, ಅವರು ಪೈರಸಿಗೆ ಹೆದರುವುದಿಲ್ಲ ಎಂದಿದ್ದರು. ಇದಕ್ಕೆ ಕಾರಣ ಸಿನಿಮಾ ಮೇಲೆ ಅವರಿಗೆ ಇದ್ದ ಕಾನ್ಫಿಡೆನ್ಸ್. ‘ಚಿತ್ರಮಂದಿರದಲ್ಲಿ ಸಿಗುವ ಎಫೆಕ್ಟ್ ಮೊಬೈಲ್ನಲ್ಲಿ ಸಿಗುತ್ತಿದೆ ಎಂದಾದರೆ ಮೊಬೈಲ್ನಲ್ಲೇ ಸಿನಿಮಾ ನೋಡಿ. ಮೊಬೈಲ್ನಲ್ಲಿ ನೋಡಿದ್ಮೇಲೆ ಖುಷಿ ಸಿಗದಿದ್ದರೆ ಚಿತ್ರಮಂದಿರಕ್ಕೆ ಬನ್ನಿ’ ಎಂದಿದ್ದರು ಸುದೀಪ್.
ಇದನ್ನೂ ಓದಿ: Vikrant Rona Review: ಸಸ್ಪೆನ್ಸ್ ಕಥೆಯ ‘ರಂಗು’ ಹೆಚ್ಚಿಸಿದ ಸುದೀಪ್-ಅನೂಪ್; ಇಷ್ಟವಾಗುತ್ತೆ ಕಿಚ್ಚನ ಗೆಟಪ್
ಸುದೀಪ್ ಹೀಗೆ ಹೇಳುವುದಕ್ಕೂ ಕಾರಣ ಇದೆ. ‘ವಿಕ್ರಾಂತ್ ರೋಣ’ ಥಿಯೇಟರ್ನಲ್ಲೇ ನೋಡಬೇಕಾದಂತಹ ಸಿನಿಮಾ. ಚಿತ್ರದ ಬಹುತೇಕ ಕಥೆ ರಾತ್ರಿ ಅವಧಿಯಲ್ಲೇ ಸಾಗುತ್ತದೆ. ಹೀಗಾಗಿ, ಕತ್ತಲ ಭಾಗವೇ ಹೆಚ್ಚು. ಈ ಚಿತ್ರದ ಥಿಯೇಟರ್ ಪ್ರಿಂಟ್ ನೋಡಿದರೆ ಸಿನಿಮಾ ರುಚಿಸುವುದಿಲ್ಲ. ಈ ಕಾರಣದಿಂದ ಸುದೀಪ್ ಆ ರೀತಿಯಲ್ಲಿ ಹೇಳಿದ್ದರು. ನಿಜವಾದ ಸಿನಿಪ್ರಿಯರು ‘ವಿಕ್ರಾಂತ್ ರೋಣ’ ಸಿನಿಮಾವನ್ನು ಥಿಯೇಟರ್ನಲ್ಲೇ ವೀಕ್ಷಿಸುತ್ತಾರೆ ಅನ್ನೋದು ಫ್ಯಾನ್ಸ್ ವಾದ.
Published On - 3:47 pm, Thu, 28 July 22