‘ಲೈಗರ್’ ಟ್ರೇಲರ್ ಲಾಂಚ್ನಲ್ಲಿ 199 ರೂ. ಹವಾಯಿ ಚಪ್ಪಲಿ ಧರಿಸಿ ಬಂದ ವಿಜಯ್ ದೇವರಕೊಂಡ; ಕಾರಣವೇನು?
ಜೂನ್ 21ರಂದು ಸಂಜೆ ಮುಂಬೈನಲ್ಲಿ ‘ಲೈಗರ್’ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ವಿಜಯ್ ದೇವರಕೊಂಡ ಅವರು ತುಂಬಾನೇ ಸಿಂಪಲ್ ಆಗಿ ಬಂದಿದ್ದರು.
ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮ ಎಂದರೆ ಅಲ್ಲಿಗೆ ಆಗಮಿಸುವ ಅತಿಥಿಗಳು ಹಾಗೂ ಸಿನಿಮಾ ತಂಡದವರು ಸ್ಟೈಲಿಶ್ ಆಗಿ ಬರಲು ಪ್ರಯತ್ನಿಸುತ್ತಾರೆ. ದುಬಾರಿ ಬೆಲೆಯ ಡ್ರೆಸ್, ಶ್ಯೂ ಧರಿಸಿ ಬರಲು ಆದ್ಯತೆ ನೀಡುತ್ತಾರೆ. ಆದರೆ, ವಿಜಯ್ ದೇವರಕೊಂಡ ಈ ವಿಚಾರದಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ‘ಲೈಗರ್’ ಸಿನಿಮಾ (Liger Movie) ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಅವರು 199 ರೂಪಾಯಿ ಬೆಲೆಯ ಹವಾಯಿ ಚಪ್ಪಲಿ (Hawai Chappal ) ಧರಿಸಿ ಬಂದಿದ್ದರು. ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ.
ಜೂನ್ 21ರಂದು ಸಂಜೆ ಮುಂಬೈನಲ್ಲಿ ‘ಲೈಗರ್’ ಟ್ರೇಲರ್ ಲಾಂಚ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ವಿಜಯ್ ದೇವರಕೊಂಡ ಅವರು ತುಂಬಾನೇ ಸಿಂಪಲ್ ಆಗಿ ಬಂದಿದ್ದರು. ಟಿ-ಶರ್ಟ್, ಬರ್ಮೂಡಾ ಪ್ಯಾಂಟ್ ಧರಿಸಿದ್ದರು, ಕಾಲಿಗೆ ಹವಾಯಿ ಚಪ್ಪಲಿ ಹಾಕಿದ್ದರು. ಈ ಕಾರ್ಯಕ್ರಮಕ್ಕೆ ಅತಿಥಿ ಆಗಿ ಬಂದಿದ್ದ ರಣವೀರ್ ಸಿಂಗ್ ಕೂಡ ಈ ಬಗ್ಗೆ ಜೋಕ್ ಮಾಡಿದ್ದರು. ‘ವಿಜಯ್ ದೇವರಕೊಂಡ ಅವರ ಸ್ಟೈಲ್ ನೋಡಿ. ನಾನು ಅವರ ಟ್ರೇಲರ್ ಲಾಂಚ್ಗೆ ಬಂದಿದ್ದೀನೋ ಅಥವಾ ಅವರೇ ನನ್ನ ಟ್ರೇಲರ್ ಲಾಂಚ್ಗೆ ಬಂದಿದ್ದಾರೋ ಎಂಬ ಗೊಂದಲ ಕಾಡುತ್ತಿದೆ’ ಎಂದಿದ್ದರು ರಣವೀರ್ ಸಿಂಗ್. ಸದ್ಯ, ವಿಜಯ್ ದೇವರಕೊಂಡ ಹಾಕಿದ್ದ ಚಪ್ಪಲಿ ಫೋಟೋ ವೈರಲ್ ಆಗುತ್ತಿದೆ.
ವಿಜಯ್ ದೇವರಕೊಂಡ ಅವರು ಇಷ್ಟು ಸಿಂಪಲ್ ಆಗಿ ಬರೋಕೂ ಒಂದು ಕಾರಣ ಇದೆ. ‘ಲೈಗರ್’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಕಥಾ ನಾಯಕ ಬಾಕ್ಸರ್ ಆಗಿ ಭಾರತ ತಂಡವನ್ನು ಪ್ರತಿನಿಧಿಸುವುದಕ್ಕೂ ಮೊದಲು ತುಂಬಾನೇ ಬಡವನಾಗಿರುತ್ತಾನೆ. ಈ ಕಾರಣಕ್ಕೆ ವಿಜಯ್ ದೇವರಕೊಂಡ ನಾರ್ಮಲ್ ಲುಕ್ನಲ್ಲಿ ಕಾಣಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ‘ಇದು ಕ್ರಾಸ್ ಬ್ರೀಡ್’; ಆ್ಯಕ್ಷನ್ ಮೂಲಕ ‘ಲೈಗರ್’ ಟ್ರೇಲರ್ನಲ್ಲಿ ಮಿಂಚಿದ ವಿಜಯ್ ದೇವರಕೊಂಡ
ವಿಜಯ್ ಅವರು ತಮ್ಮ ಡಿಸೈನರ್ ಕರೆದು ಬೇಸಿಕ್ ಲುಕ್ನಲ್ಲಿ ಕಾಣಿಸಿಕೊಳ್ಳುವ ಆಸೆ ವ್ಯಕ್ತಪಡಿಸಿದ್ದರು. ‘ನನಗೆ ಬೇಸಿಕ್ ಚಪ್ಪಲಿ ಬೇಕು. ಸಾಮಾನ್ಯ ಟಿ-ಶರ್ಟ್ ಸಾಕು. ಪಾತ್ರಕ್ಕೆ ಹತ್ತಿರವಾಗುವ ಲುಕ್ನಲ್ಲೇ ನಾನು ಕಾಣಿಸಿಕೊಳ್ಳುತ್ತೇನೆ ಎಂದು ವಿಜಯ್ ದೇವರಕೊಂಡ ಹೇಳಿದರು. ನಾನು ನರ್ವಸ್ ಆದೆ. 199 ರೂಪಾಯಿ ಚಪ್ಪಲಿ ತಂದುಕೊಡುವಾಗ ನನಗೆ ಭಯ ಇತ್ತು. ಆದರೆ, ಈ ವಿಚಾರದಲ್ಲಿ ಅವರು ಧೈರ್ಯ ತೋರಿದರು’ ಎಂದಿದ್ದಾರೆ ವಿಜಯ್ ದೇವರಕೊಂಡ ಅವರ ಡಿಸೈನರ್ ಹರ್ಮಾನ್ ಕೌರ್.
‘ಲೈಗರ್’ ಸಿನಿಮಾ ಟ್ರೇಲರ್ 24 ಗಂಟೆಗಳಲ್ಲಿ 5 ಕೋಟಿ ಬಾರಿ ವೀಕ್ಷಣೆ ಕಂಡಿದೆ. ಈ ಮೂಲಕ ಸಿನಿಮಾ ರಿಲೀಸ್ಗೂ ಮೊದಲೇ ಹೊಸ ದಾಖಲೆ ಬರೆದಿದೆ. ಈ ಚಿತ್ರ ಆಗಸ್ಟ್ 25ರಂದು ತೆರೆಗೆ ಬರುತ್ತಿದೆ. ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಒಟ್ಟಾಗಿ ನಟಿಸಿರುವ ಈ ಚಿತ್ರಕ್ಕೆ ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡಿದ್ದಾರೆ. ಕರಣ್ ಜೋಹರ್, ಪುರಿ ಜಗನ್ನಾಥ್ ಅವರು ಬಂಡವಾಳ ಹೂಡಿದ್ದಾರೆ.