ಸರ್ಜಾ ಕುಟುಂಬದಲ್ಲಿ ಮತ್ತೆ ಆವರಿಸಿದ ದುಃಖ; ಅರ್ಜುನ್ ಸರ್ಜಾಗೆ ಮಾತೃವಿಯೋಗ

ಲಕ್ಷ್ಮಿದೇವಮ್ಮ ನಿಧನದಿಂದ ಇಡೀ ಸರ್ಜಾ ಕುಟುಂಬ ದುಃಖದಲ್ಲಿ ಮುಳುಗಿದೆ.

ಸರ್ಜಾ ಕುಟುಂಬದಲ್ಲಿ ಮತ್ತೆ ಆವರಿಸಿದ ದುಃಖ; ಅರ್ಜುನ್ ಸರ್ಜಾಗೆ ಮಾತೃವಿಯೋಗ
ಅರ್ಜುನ್ ಸರ್ಜಾ-ತಾಯಿ
TV9kannada Web Team

| Edited By: Rajesh Duggumane

Jul 23, 2022 | 3:31 PM

ಸರ್ಜಾ ಕುಟುಂಬದಲ್ಲಿ (Sarja Family) ಮತ್ತೆ ದುಃಖ ಆವರಿಸಿದೆ. ಅರ್ಜುನ್ ಸರ್ಜಾ (Arjun Sarja Mother) ತಾಯಿ ಲಕ್ಷ್ಮಿದೇವಿ ಅವರು ಇಂದು (ಜುಲೈ 23) ಕೊನೆಯುಸಿರು ಎಳೆದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಈ ಬಗ್ಗೆ ಶೀಘ್ರವೇ ಕುಟುಂಬದವರಿಂದ ಅಧಿಕೃತ ಘೋಷಣೆ ಆಗಲಿದೆ. ಲಕ್ಷ್ಮಿದೇವಮ್ಮ ನಿಧನದಿಂದ ಇಡೀ ಸರ್ಜಾ ಕುಟುಂಬ ದುಃಖದಲ್ಲಿ ಮುಳುಗಿದೆ.

ಲಕ್ಷ್ಮಿ ದೇವಿ ಅವರು ಶಕ್ತಿಪ್ರಸಾದ್ ಅವರ ಪತ್ನಿ. ಧ್ರುವ ಸರ್ಜಾಗೆ ಅಜ್ಜಿ. ಲಕ್ಷ್ಮೀ ದೇವಿಗೆ ಕೆಲ ದಿನಗಳಿಂದ ಅನಾರೋಗ್ಯ ಕಾಡಿತ್ತು. ಹೀಗಾಗಿ ಅವರನ್ನು ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನ ಹೊಂದಿದ್ದಾರೆ. ಅವರ ನಿಧನ ವಾರ್ತೆಯಿಂದ ಸರ್ಜಾ ಕುಟುಂಬ ಮತ್ತೆ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

2020ರ ಜೂನ್ 7ರಂದು ಚಿರಂಜೀವಿ ಸರ್ಜಾ ಅವರು ನಿಧನ ಹೊಂದಿದರು. ಬದುಕಿ ಬಾಳಬೇಕಿದ್ದ ಚಿರು ಅವರು ಹೃದಯಾಘಾತದಿಂದ ನಿಧನ ಹೊಂದುತ್ತಾರೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. ಅವರ ನಿಧನದಿಂದ ಇಡೀ ಕುಟುಂಬ ಶಾಕ್​ಗೆ ಒಳಗಾಗಿತ್ತು. ಮೇಘನಾ ರಾಜ್​ಗೆ ಮಗು ಜನಿಸಿದ ನಂತರದಲ್ಲಿ ಈ ನೋವಿನಿಂದ ಕುಟುಂಬ ನಿಧಾನವಾಗಿ ಹೊರ ಬರುತ್ತಿದೆ. ಹೀಗಿರುವಾಗಲೇ ಕುಟುಂಬಕ್ಕೆ ಮತ್ತೊಂದು ಆಘಾತ ಉಂಟಾಗಿದೆ.

ಇದನ್ನೂ ಓದಿ: ಚಿರು ನೆನಪಿಸಿಕೊಂಡು ಭಾವನಾತ್ಮಕ ಸಂದೇಶ ನೀಡಿದ ಅರ್ಜುನ್ ಸರ್ಜಾ

ಮೂಲಗಳ ಪ್ರಕಾರ ಲಕ್ಷ್ಮೀ ದೇವಿ ಅವರ ಅಂತ್ಯಕ್ರಿಯೆ ಇಂದು ರಾತ್ರಿಯೇ ನೆರವೇರಲಿದೆ. ಸರ್ಜಾ ಕುಟುಂಬದವರು ಹಾಗೂ ಆಪ್ತರಷ್ಟೇ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಇತ್ತೀಚೆಗೆ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯಾ ಅವರ ಹೊಸ ಸಿನಿಮಾ ಲಾಂಚ್ ಆಗಿದೆ. ಈ ಚಿತ್ರದಲ್ಲಿ ಅಪ್ಪ-ಮಗಳು ಇಬ್ಬರೂ ನಟಿಸುತ್ತಿದ್ದಾರೆ. ಪವನ್ ಕಲ್ಯಾಣ್ ಅವರು ಚಿತ್ರದ ಮುಹೂರ್ತಕ್ಕೆ ಆಗಮಿಸಿ ತಂಡಕ್ಕೆ ಆಲ್​ ದಿ ಬೆಸ್ಟ್ ಹೇಳಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada