ಚಿರು ನೆನಪಿಸಿಕೊಂಡು ಭಾವನಾತ್ಮಕ ಸಂದೇಶ ನೀಡಿದ ಅರ್ಜುನ್ ಸರ್ಜಾ

ಚಿರು ನೆನಪಿಸಿಕೊಂಡು ಭಾವನಾತ್ಮಕ ಸಂದೇಶ ನೀಡಿದ ಅರ್ಜುನ್ ಸರ್ಜಾ
ಅರ್ಜುನ್​ ಜತೆ ಚಿರಂಜೀವಿ

ಕೊರೊನಾ ವೈರಸ್​ ಎರಡನೇ ಅಲೆ ನಿಯಂತ್ರಿಸಲು ಎಲ್ಲಾ ಕಡೆಗಳಲ್ಲಿ ಲಾಕ್​ಡೌನ್​ ಜಾರಿಯಲ್ಲಿ ಇರುವುದರಿಂದ ಚಿರು ಮೊದಲ ವರ್ಷದ ಪುಣ್ಯತಿಥಿಯನ್ನು ಸರಳವಾಗಿ ಆಚರಣೆ ಮಾಡಲಾಗಿದೆ. ಕೇವಲ ಕುಟುಂಬದ ಸದಸ್ಯರು ಮಾತ್ರ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ.

Rajesh Duggumane

|

Jun 07, 2021 | 5:05 PM

ಚಿರಂಜೀವಿ ಸರ್ಜಾ ಇಲ್ಲದೆ ಒಂದು ವರ್ಷದ ಕಳೆದು ಹೋಗಿದೆ. ಇಂದು (ಜೂನ್​ 7) ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಚಿರು ಅವರ ಮಾವ, ನಟ ಅರ್ಜುನ್​ ಸರ್ಜಾ ಅವರು ಭಾವನಾತ್ಮಕ ಸಂದೇಶವೊಂದನ್ನು ನೀಡಿದ್ದಾರೆ. ಚಿಕ್ಕ ವಯಸ್ಸಿನ ಫೋಟೋಗಳನ್ನು ಹಂಚಿಕೊಂಡಿರು ಅರ್ಜುನ್​, ನಿನ್ನನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಕೊರೊನಾ ವೈರಸ್​ ಎರಡನೇ ಅಲೆ ನಿಯಂತ್ರಿಸಲು ಎಲ್ಲಾ ಕಡೆಗಳಲ್ಲಿ ಲಾಕ್​ಡೌನ್​ ಜಾರಿಯಲ್ಲಿ ಇರುವುದರಿಂದ ಚಿರು ಮೊದಲ ವರ್ಷದ ಪುಣ್ಯತಿಥಿಯನ್ನು ಸರಳವಾಗಿ ಆಚರಣೆ ಮಾಡಲಾಗಿದೆ. ಕೇವಲ ಕುಟುಂಬದ ಸದಸ್ಯರು ಮಾತ್ರ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಕನಕಪುರ ರಸ್ತೆಯ ನೆಲಗುಳಿ ಬಳಿ ಇರುವ ಬೃಂದಾವನ ಫಾರ್ಮ್​ಹೌಸ್​ನಲ್ಲಿ ಚಿರು ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಅದೇ ಸ್ಥಳಕ್ಕೆ ತೆರಳಿ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. ಸೋಮವಾರ ಬೆಳಗ್ಗೆ ಮೇಘನಾ ರಾಜ್​, ಜ್ಯೂ. ಚಿರು, ಪ್ರಮೀಳಾ ಜೋಷಾಯ್​, ಸುಂದರ್​ ರಾಜ್​ ಅವರು ಒಂದೇ ಕಾರಿನಲ್ಲಿ ಬೃಂದಾವನ ಫಾರ್ಮ್​ಹೌಸ್​ಗೆ ಆಗಮಿಸಿ ಪೂಜೆ ಸಲ್ಲಿಸಿದರು.

ಅರ್ಜುನ್​ ಸರ್ಜಾ ಅವರು ಭಾವನಾತ್ಮಕ ಸಂದೇಶ ಬರೆದಿದ್ದಾರೆ. ‘ಒಂದು ವರ್ಷ ಕಳೆದುಹೋಗಿದೆ. ಚಿರು ಮಗನೆ ನಿನ್ನನ್ನು ನಾನು ನನ್ನ ಜನ್ಮಪೂರ್ತಿ ಮಿಸ್​ ಮಾಡಿಕೊಳ್ಳುತ್ತೇನೆ. ನೀನು ಎಲ್ಲೇ ಇದ್ದರೂ ನಿನ್ನ ನಗುಮುಖ ಮಾಸುವುದಿಲ್ಲ ಎಂದು ಭಾವಿಸಿದ್ದೇನೆ’ ಎಂದಿದ್ದಾರೆ ಅರ್ಜುನ್​.

ಇಡೀ ಸರ್ಜಾ ಕುಟುಂಬದ ಪರವಾಗಿ ಈ ಪತ್ರವನ್ನು ಬರೆಯಲಾಗಿದೆ. ‘ನಮ್ಮ ಹೃದಯದ ಚಿರಂಜೀವಿ, ನೀನು ದೇವರ ಮನೆಗೆ ಹೋಗಿ ಒಂದು ವರ್ಷ ಆಯಿತು. ಎಷ್ಟು ಬೇಗ ಒಂದು ವರ್ಷ. ಈ 365 ದಿನಗಳಲ್ಲಿ ನಿನ್ನ ನೆನೆಯದ ದಿನಗಳೇ ಇಲ್ಲ. ಕನಸಿನಲ್ಲಿ ನಿನ್ನ ಕಾಣದ ರಾತ್ರಿಗಳೇ ಇಲ್ಲ. ಮರೆಯಲಾಗದ ಚಿರ ನೆನಪುಗಳು. ಕುಟುಂಬದ ಮೇಲೆ ನಿನಗಿದ್ದ ಅಪಾರವಾದ ಗೌರವ, ಜನಗಳಿಗೆ ನೀನು ತೋರಿಸುತ್ತಿದ್ದ ಪ್ರೀತಿ, ಪ್ರೇಮ, ಉದಾರ ಗುಣ ಮತ್ತು ಅಜಾತಶತ್ರುವಾಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಗಲಾರದ ಆಸ್ತಿ. ನೀನೆಲ್ಲಿದ್ದರೂ ಅಲ್ಲಿ ನಗು ತುಂಬಿರಬೇಕು. ನಿನ್ನ ಆತ್ಮ ಸದಾ ಶಾಂತಿಯಿಂದಿರಬೇಕು. ಆ ಪ್ರಾರ್ಥನೆಯಲ್ಲೇ, ಎಂದೆಂದೂ ನಿನ್ನ ನೆನಪಲ್ಲೇ.. ನಿನ್ನ ಪ್ರೀತಿಯ ನಿನ್ನ ಕುಟುಂಬ’ಎಂದು ಪತ್ರದಲ್ಲಿ ಬರೆಯಲಾಗಿದೆ.

ಇದನ್ನೂ ಓದಿ: Chiranjeevi Sarja: ಮೇಘನಾ ರಾಜ್​ ಜೊತೆ ಚಿರಂಜೀವಿ ಸರ್ಜಾ ಸಮಾಧಿಗೆ ಪೂಜೆ ಸಲ್ಲಿಸಿದ ಜ್ಯೂ. ಚಿರು

Follow us on

Related Stories

Most Read Stories

Click on your DTH Provider to Add TV9 Kannada