‘ಬಿಗ್ ಬಾಸ್ ಒಟಿಟಿ’ಯ ಕೊನೆಯ ಕ್ಯಾಪ್ಟನ್ ಆದ ರೂಪೇಶ್​​; ಮಹಿಳಾ ಸ್ಪರ್ಧಿಗಳಿಗೆ ಸಿಗಲೇ ಇಲ್ಲ ನಾಯಕತ್ವ

ರೂಪೇಶ್ ಅವರು ಕ್ಯಾಪ್ಟನ್ ಆಗುವ ಮೂಲಕ ಮುಂದಿನ ವಾರದ ನಾಮಿನೇಷ್​ನಿಂದ ಬಚಾವ್ ಆಗಿದ್ದಾರೆ. ಈ ಮೂಲಕ ‘ಬಿಗ್ ಬಾಸ್ ಒಟಿಟಿ’ಯ ಕೊನೆಯ ವಾರದವರೆಗೆ ಅವರು ಇರೋದು ಖಚಿತವಾಗಿದೆ.

‘ಬಿಗ್ ಬಾಸ್ ಒಟಿಟಿ’ಯ ಕೊನೆಯ ಕ್ಯಾಪ್ಟನ್ ಆದ ರೂಪೇಶ್​​; ಮಹಿಳಾ ಸ್ಪರ್ಧಿಗಳಿಗೆ ಸಿಗಲೇ ಇಲ್ಲ ನಾಯಕತ್ವ
ರೂಪೇಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 02, 2022 | 8:22 AM

‘ಬಿಗ್ ಬಾಸ್ ಒಟಿಟಿ’ (Bigg Boss OTT) ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಕನ್ನಡ ವೀಕ್ಷಕರ ಪಾಲಿಗೆ ಇದು ಹೊಸದು. ಟಿವಿಯಲ್ಲಿ ಬಿಗ್​ ಬಾಸ್ ಈಗಾಗಲೇ ಪ್ರಸಾರ ಕಂಡಿತ್ತು. ಆದರೆ, ಒಟಿಟಿಯಲ್ಲಿ ‘ಕನ್ನಡ ಬಿಗ್ ಬಾಸ್’ ಪ್ರಸಾರ ಕಂಡಿದ್ದು ಇದೇ ಮೊದಲು. ಒಟಿಟಿ ವ್ಯಾಪ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಟಿಟಿ ಬಿಗ್ ಬಾಸ್ ತರಲಾಗಿದೆ. ಈಗಾಗಲೇ ಒಂದು ತಿಂಗಳ ಕಾಲ ‘ಬಿಗ್ ಬಾಸ್​’ ಒಟಿಟಿ ಪ್ರಸಾರ ಕಂಡಿದೆ. ಇನ್ನು ಎರಡು ವಾರಗಳ ಕಾಲ ಬಿಗ್ ಬಾಸ್ ನಡೆಯಲಿದೆ. ಈಗ ಬಿಗ್ ಬಾಸ್ ಒಟಿಟಿಯ ಕೊನೆಯ ಕ್ಯಾಪ್ಟನ್ ಆಯ್ಕೆ ನಡೆದಿದ್ದು, ರೂಪೇಶ್ (Roopesh Shetty) ನಾಯಕನಾಗಿ ಹೊರಹೊಮ್ಮಿದ್ದಾರೆ.

‘ಬಿಗ್ ಬಾಸ್​’ನಲ್ಲಿ ಕ್ಯಾಪ್ಟನ್ ಆಗೋದು ತುಂಬಾನೇ ಪ್ರಮುಖವಾಗುತ್ತದೆ. ಇದಕ್ಕೆ ಕಾರಣ ಇಮ್ಯುನಿಟಿ. ಕ್ಯಾಪ್ಟನ್ ಆದವರನ್ನು ನಾಮಿನೇಷನ್ ಮಾಡುವಂತಿಲ್ಲ. ಹೀಗಾಗಿ, ಒಂದು ವಾರಗಳ ಕಾಲ ಅವರು ಮನೆಯಲ್ಲಿ ಸೇಫ್ ಆಗಿ ಉಳಿಯಬಹುದು. ಈಗ ರೂಪೇಶ್ ಅವರು ಕ್ಯಾಪ್ಟನ್ ಆಗುವ ಮೂಲಕ ಮುಂದಿನ ವಾರದ ನಾಮಿನೇಷ್​ನಿಂದ ಬಚಾವ್ ಆಗಿದ್ದಾರೆ. ಈ ಮೂಲಕ ‘ಬಿಗ್ ಬಾಸ್ ಒಟಿಟಿ’ಯ ಕೊನೆಯ ವಾರದವರೆಗೆ ಅವರು ಇರೋದು ಖಚಿತವಾಗಿದೆ.

ಈ ವಾರ ರೂಪೇಶ್​ ಅವರು ಎಲಿಮಿನೇಷನ್​ಗೆ ನಾಮಿನೇಷನ್ ಆಗಿಲ್ಲ. ಕಳೆದ ವಾರ ಅವರು ಎಲ್ಲರ ಜತೆಗೂ ಒಳ್ಳೆಯ ರೀತಿಯಲ್ಲಿ ಇದ್ದರು. ಈ ಕಾರಣದಿಂದ ಅವರು ಸೇಫ್ ಆಗಿದ್ದಾರೆ. ಈ ವಾರ ಅವರು ಕ್ಯಾಪ್ಟನ್ ಆಗುವ ಮೂಲಕ ಮುಂದಿನ ವಾರಕ್ಕೂ ಸೇಫ್ ಆಗಿದ್ದಾರೆ. ‘ಬಿಗ್ ಬಾಸ್ ಒಟಿಟಿ’ಯ ಕೊನೆಯ ಕ್ಯಾಪ್ಟನ್ ಎಂಬ ಹೆಗ್ಗಳಿಕೆ ಅವರಿಗೆ ಸಿಕ್ಕಿದೆ.

ಇದನ್ನೂ ಓದಿ
Image
ಎಲ್ಲಾ ವಿಚಾರದಲ್ಲೂ ಪರ್ಫೆಕ್ಟ್ ಆದ ರೂಪೇಶ್ ಶೆಟ್ಟಿ; ಮನೆಯವರ ಟೀಕೆಗೆ ನೇರ ತಿರುಗೇಟು
Image
ನಾಮಿನೇಷನ್​ನಿಂದ ಈವಾರ ಸೇಫ್ ಆದ ರೂಪೇಶ್​; ಸಂಕಷ್ಟದಲ್ಲಿ ಸೋನು ಶ್ರೀನಿವಾಸ್ ಗೌಡ
Image
ಬಿಗ್ ಬಾಸ್​ನಲ್ಲಿ ಸೋಮಣ್ಣ ಜತೆ ರೂಪೇಶ್​-ಸಾನ್ಯಾ ಜಗಳ; ಸುದೀಪ್ ಯಾರ ಪರ ವಹಿಸಿದ್ರು?

ಇನ್ನು ಎರಡು ವಾರ ಮಾತ್ರ ಬಿಗ್ ಬಾಸ್ ಇದೆ. ಕೊನೆಯ ವಾರ ಯಾರಿಗೂ ಕ್ಯಾಪ್ಟನ್ ಆಗುವ ಅವಕಾಶ ಇರುವುದಿಲ್ಲ. ಆಗ ಯಾವುದೇ ಟಾಸ್ಕ್ ಇರುವುದಿಲ್ಲ. ಈ ಕಾರಣಕ್ಕೆ ಬಿಗ್​ ಬಾಸ್ ಪೂರ್ಣಗೊಳ್ಳುವ ಹಿಂದಿನ ವಾರ ಕೊನೆಯ ಕ್ಯಾಪ್ಟನ್ ಆಯ್ಕೆ ನಡೆಯುತ್ತದೆ. ಹೀಗಾಗಿ, ರೂಪೇಶ್ ಒಟಿಟಿ ಮೊದಲ ಸೀಸನ್​ನ ಕೊನೆಯ ಕ್ಯಾಪ್ಟನ್ ಆಗಿದ್ದಾರೆ.

ಇದನ್ನೂ ಓದಿ:  ಎಲ್ಲಾ ವಿಚಾರದಲ್ಲೂ ಪರ್ಫೆಕ್ಟ್ ಆದ ರೂಪೇಶ್ ಶೆಟ್ಟಿ; ಮನೆಯವರ ಟೀಕೆಗೆ ನೇರ ತಿರುಗೇಟು

ಇನ್ನು, ಮಹಿಳಾ ಸ್ಪರ್ಧಿಗಳು ಒಟಿಟಿಯಲ್ಲಿ ಕ್ಯಾಪ್ಟನ್ ಆಗಲೇ ಇಲ್ಲ. ಮೊದಲ ವಾರ ಅರ್ಜುನ್ ರಮೇಶ್ ಕ್ಯಾಪ್ಟನ್ ಆದರು. ಎರಡನೇ ವಾರ ಜಶ್ವಂತ್ ಕ್ಯಾಪ್ಟನ್ ಆದರು. ಮೂರನೇ ವಾರಕ್ಕೆ ಸೋಮಣ್ಣ ನಾಯಕರಾಗಿದ್ದರು. ನಾಲ್ಕನೇ ವಾರದ ಮಧ್ಯದಲ್ಲಿ ರೂಪೇಶ್ ಕ್ಯಾಪ್ಟನ್ ಆಗಿ ಮಿಂಚಿದ್ದಾರೆ. ಇದು ಒಟಿಟಿಯ ಕೊನೆಯ ಕ್ಯಾಪ್ಟನ್ ಆದ್ದರಿಂದ ಮಹಿಳಾ ಸ್ಪರ್ಧಿಗಳಿಗೆ ಈ ಸೀಸನ್​ನಲ್ಲಿ ಕ್ಯಾಪ್ಟನ್ ಆಗುವ ಅವಕಾಶವೇ ಸಿಗಲಿಲ್ಲ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ