ಎಲ್ಲಾ ವಿಚಾರದಲ್ಲೂ ಪರ್ಫೆಕ್ಟ್ ಆದ ರೂಪೇಶ್ ಶೆಟ್ಟಿ; ಮನೆಯವರ ಟೀಕೆಗೆ ನೇರ ತಿರುಗೇಟು

ಕಳೆದ ಮೂರು ವಾರಗಳಿಂದ ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಎಲ್ಲರಿಗೂ ಮನರಂಜನೆ ನೀಡುತ್ತಿದ್ದಾರೆ. ಆದರೆ, ಕೆಲ ಟಾಸ್ಕ್​ಗಳಲ್ಲಿ ಅವರು ಒಳ್ಳೆಯ ಪರ್ಫಾರ್ಮೆನ್ಸ್ ತೋರಿಸಿರಲಿಲ್ಲ. ಈ ಕಾರಣಕ್ಕೆ ಅವರು ಟೀಕೆಗೆ ಗುರಿಯಾಗಿದ್ದರು.

ಎಲ್ಲಾ ವಿಚಾರದಲ್ಲೂ ಪರ್ಫೆಕ್ಟ್ ಆದ ರೂಪೇಶ್ ಶೆಟ್ಟಿ; ಮನೆಯವರ ಟೀಕೆಗೆ ನೇರ ತಿರುಗೇಟು
ರೂಪೇಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 31, 2022 | 6:55 PM

ರೂಪೇಶ್ ಶೆಟ್ಟಿ (Roopesh Shetty) ಅವರು ‘ಬಿಗ್ ಬಾಸ್​ ಒಟಿಟಿ’ಯಲ್ಲಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿ ಆಗಿದ್ದಾರೆ. ಮನೆಯಲ್ಲಿ ಸಾಂಗ್ ಹಾಡುತ್ತಾ ಎಲ್ಲರನ್ನೂ ಎಂಟರ್​ಟೇನ್ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಅವರು ಈ ವಾರ ನಾಮಿನೇಟ್ ಆಗಿಲ್ಲ. ಮನೆಯ ಎಲ್ಲಾ ಸ್ಪರ್ಧಿಗಳಿಗೆ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ‘ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ ತೆರಳುವ ಸ್ಪರ್ಧಿಗಳ ಪೈಕಿ ರೂಪೇಶ್ ಕೂಡ ಇರುತ್ತಾರೆ ಎಂದು ವೀಕ್ಷಕರು ಅಭಿಪ್ರಾಯ ಪಡುತ್ತಿದ್ದಾರೆ. ಇದಕ್ಕೆ ಪೂರಕವಾಗಿಯೇ ರೂಪೇಶ್ ತಮ್ಮ ಆಟ ಆಡುತ್ತಿದ್ದಾರೆ.

ಕಳೆದ ಮೂರು ವಾರಗಳಿಂದ ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಎಲ್ಲರಿಗೂ ಮನರಂಜನೆ ನೀಡುತ್ತಿದ್ದಾರೆ. ಆದರೆ, ಕೆಲ ಟಾಸ್ಕ್​ಗಳಲ್ಲಿ ಅವರು ಒಳ್ಳೆಯ ಪರ್ಫಾರ್ಮೆನ್ಸ್ ತೋರಿಸಿರಲಿಲ್ಲ. ಈ ಕಾರಣಕ್ಕೆ ಅವರು ಟೀಕೆಗೆ ಗುರಿಯಾಗಿದ್ದರು. ‘ರೂಪೇಶ್ ಒಳ್ಳೆಯ ರೀತಿಯಲ್ಲಿ ಮನರಂಜನೆ ನೀಡುತ್ತಾರೆ. ಆದರೆ, ಟಾಸ್ಕ್​ ಆಡುವುದಿಲ್ಲ’ ಎಂಬ ಮಾತುಗಳು ಮನೆಯಲ್ಲಿ ಕೇಳಿ ಬಂದಿದ್ದವು. ಇದನ್ನು ರೂಪೇಶ್ ಸುಳ್ಳು ಮಾಡಿದ್ದಾರೆ. ತಮ್ಮ ಸಾಮರ್ಥ್ಯ ಏನು ಎಂಬುದನ್ನು ಮನೆಯವರ ಎದುರು ತೋರಿಸಿದ್ದಾರೆ. ಅವರ ಪರ್ಫಾರ್ಮೆನ್ಸ್ ನೋಡಿ ಮನೆ ಮಂದಿ ಮೆಚ್ಚಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಎರಡು ಟೀಂ ಮಾಡಲಾಗಿದೆ. ಒಂದು ತಂಡಕ್ಕೆ ಅಕ್ಷತಾ ನಾಯಕಿ. ಮತ್ತೊಂದು ಟೀಂಗೆ ಜಯಶ್ರೀ ಕ್ಯಾಪ್ಟನ್. ಜಯಶ್ರೀ ಅವರ ತಂಡದಲ್ಲಿ ರೂಪೇಶ್ ಇದ್ದಾರೆ. ಆಗಸ್ಟ್ 30ರ ಎಪಿಸೋಡ್​ನಲ್ಲಿ ನೀಡಲಾದ ಎರಡೂ ಟಾಸ್ಕ್​ನಲ್ಲಿ ರೂಪೇಶ್ ಒಳ್ಳೆಯ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡಿದ್ದಾರೆ.

ಒಂದು ಟೇಬಲ್ ಮೇಲೆ ಬಾಲ್ ಇಡಲಾಗುತ್ತದೆ. ಬಾಯಿಂದ ಆ ಬಾಲನ್ನು ಊದುತ್ತಾ ಮತ್ತೊಂದು ತುದಿಯಲ್ಲಿರುವ ಡಬ್ಬಿಗೆ ಆ ಬಾಲ್​ಅನ್ನು ಹಾಕಬೇಕು. ಇದರಲ್ಲಿ ಅವರು ಉತ್ತಮವಾಗಿ ಆಡಿದರು. ಆ ಬಳಿಕ ಮರಳು ಚೀಲ ಹಿಡಿದು ನಿಲ್ಲುವ ಟಾಸ್ಕ್​ನಲ್ಲೂ ರೂಪೇಶ್ ಒಳ್ಳೆಯ ಪ್ರದರ್ಶನ ನೀಡಿದರು. ಇದರಿಂದ ಜಯಶ್ರೀ, ನಂದಿನಿ, ಸಾನ್ಯಾ, ಆರ್ಯವರ್ಧನ್ ಗುರೂಜಿ ಸೇರಿದಂತೆ ಎಲ್ಲಾ ಸ್ಪರ್ಧಿಗಳು ರೂಪೇಶ್ ಅವರ ಬೆನ್ನು ತಟ್ಟಿದರು.

ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ರೂಪೇಶ್ ಶೆಟ್ಟಿಗೆ ಹೆಚ್ಚುತ್ತಿದೆ ಫ್ಯಾನ್​​ ಬೇಸ್; ವಿಫಲವಾಗಲಿದೆ ಮನೆಯವರ ತಂತ್ರ?

‘ಟಾಸ್ಕ್​ ಆಡುವುದರಲ್ಲಿ ವೀಕ್ ಇದ್ದೀಯಾ’ ಎಂದು ರೂಪೇಶ್​ ಬಗ್ಗೆ ಮನೆ ಮಂದಿ ಹೇಳುತ್ತಿದ್ದ ಮಾತುಗಳು ಅವರಿಗೆ ಹಿನ್ನಡೆ ಆಗುತ್ತಿದ್ದವು. ಆದರೆ, ರೂಪೇಶ್ ಟಾಸ್ಕ್​​ನಲ್ಲಿ ಉತ್ತಮವಾಗಿ ಆಡುವ ಮೂಲಕ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಈ ಮೂಲಕ ಇರುವ ಒಂದು ಕೊರತೆಯನ್ನೂ ಅವರು ನೀಗಿಸಿಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ