AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aryavardhan Guruji: ಬಿಗ್​ ಬಾಸ್​ ಕನ್ನಡ 9ನೇ ಸೀಸನ್​ಗೆ ಎಂಟ್ರಿ ಪಡೆದ ಮೊದಲ ಸ್ಪರ್ಧಿ ಆರ್ಯವರ್ಧನ್​ ಗುರೂಜಿ

Bigg Boss Kannada season 9: ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಫಿನಾಲೆಯಲ್ಲಿ ಆರ್ಯವರ್ಧನ್​ ಗುರೂಜಿ ಎಮೋಷನಲ್​ ಆಗಿ ಮಾತನಾಡಿದರು. ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ಕ್ಕೆ ಆಯ್ಕೆ ಆಗಿರುವ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

Aryavardhan Guruji: ಬಿಗ್​ ಬಾಸ್​ ಕನ್ನಡ 9ನೇ ಸೀಸನ್​ಗೆ ಎಂಟ್ರಿ ಪಡೆದ ಮೊದಲ ಸ್ಪರ್ಧಿ ಆರ್ಯವರ್ಧನ್​ ಗುರೂಜಿ
ಆರ್ಯವರ್ಧನ್ ಗುರೂಜಿ
TV9 Web
| Updated By: ಮದನ್​ ಕುಮಾರ್​|

Updated on:Sep 16, 2022 | 9:14 PM

Share

‘ನಾನು ಅಂದ್ರೆ ನಂಬರ್​, ನಂಬರ್​ ಅಂದ್ರೆ ನಾನು’ ಎಂದು ಹೇಳುತ್ತಲೇ ಫೇಮಸ್​ ಆದ ಆರ್ಯವರ್ಧನ್​ ಗುರೂಜಿ ಅವರು ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss Kannada OTT) ಶೋಗೆ ಬಂದು ಎಲ್ಲರನ್ನೂ ರಂಜಿಸಿದ್ದಾರೆ. ಈಗ ಅವರು ಟಿವಿ ಸೀಸನ್​ಗೆ ಎಂಟ್ರಿ ನೀಡುವ ಮೊದಲ ಸ್ಪರ್ಧಿಯಾಗಿ ಆಯ್ಕೆ ಆಗಿದ್ದಾರೆ. ಶುಕ್ರವಾರ (ಸೆ.16) ಸಂಜೆ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಫಿನಾಲೆ ನಡೆದಿದೆ. ಅದರಲ್ಲಿ ಕಿಚ್ಚ ಸುದೀಪ್​ ಅವರು ಈ ವಿಷಯ ಘೋಷಿಸಿದ್ದಾರೆ. ಟಿವಿಯಲ್ಲಿ ನಡೆಯಲಿರುವ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ (Bigg Boss Kannada season 9) ಸ್ಪರ್ಧಿಸಲು ಆರ್ಯವರ್ಧನ್​ ಗುರೂಜಿ (Aryavardhan Guruji) ಅವರು ಚಾನ್ಸ್​ ಪಡೆದಿದ್ದಾರೆ. ಈ ವಿಷಯ ಕೇಳುತ್ತಿದ್ದಂತೆಯೇ ಅವರ ಸಖತ್​ ಎಮೋಷನಲ್​ ಆದರು. ಅವರನ್ನು ಇಷ್ಟಪಡುವ ಎಲ್ಲ ವೀಕ್ಷಕರಿಗೂ ಖುಷಿ ಆಗಿದೆ.

ಸೆಪ್ಟೆಂಬರ್​ 24ರ ಸಂಜೆ 6 ಗಂಟೆಗೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರ ಗ್ರ್ಯಾಂಡ್​ ಪ್ರೀಮಿಯರ್​ ಆಗಲಿದೆ. ನಂತರ ಪ್ರತಿ ದಿನ 9 ಗಂಟೆಗೆ ಸಂಚಿಕೆಗಳು ಪ್ರಸಾರ ಆಗಲಿವೆ. ‘ಬಿಗ್​ ಬಾಸ್ ಕನ್ನಡ​ ಒಟಿಟಿ’ ಶೋನಲ್ಲಿ ಆಯ್ಕೆ ಆದ ಸ್ಪರ್ಧಿಗಳ ಜೊತೆಗೆ ಹಳೇ ಸೀಸನ್​ನ ವ್ಯಕ್ತಿಗಳು ಕೂಡ ಇರಲಿದ್ದಾರೆ. ಅಲ್ಲದೇ, 9 ಮಂದಿ ಹೊಸ ಸ್ಪರ್ಧಿಗಳು ಎಂಟ್ರಿ ನೀಡಲಿದ್ದಾರೆ.

ಆರ್ಯವರ್ಧನ್​ ಅವರ ವ್ಯಕ್ತಿತ್ವ ಅನೇಕರಿಗೆ ಇಷ್ಟ ಆಗಿದೆ. ಅವರು ಮಾತನಾಡುವ ರೀತಿ ಎಲ್ಲರಿಗೂ ನಗು ತರಿಸುತ್ತದೆ. ಹೆಚ್ಚೇನೂ ಫಿಲ್ಟರ್​ ಇಲ್ಲದೇ ಮಾತನಾಡುವ ಶೈಲಿ ಗಮನ ಸೆಳೆಯುತ್ತಿದೆ. ಸುದೀಪ್​ ಹೇಳುವುದೇ ಒಂದು, ಆರ್ಯವರ್ಧನ್​ ಅರ್ಥ ಮಾಡಿಕೊಳ್ಳುವುದೇ ಮತ್ತೊಂದು. ಆ ಕಾರಣದಿಂದಲೂ ಪ್ರತಿ ವಾರದ ಪಂಚಾಯಿತಿಯಲ್ಲಿ ಅವರ ಮಾತುಗಳು ಕಾಮಿಡಿ ಕಿಕ್​ ನೀಡುತ್ತವೆ. ಅದು ಟಿವಿ ಸೀಸನ್​ನಲ್ಲೂ ಮುಂದುವರಿಯುವ ನಿರೀಕ್ಷೆ ಇದೆ.

ಇದನ್ನೂ ಓದಿ
Image
BBK: ‘ನೀನು ಹಾಲು ಇದ್ದಂಗೆ, ಒಮ್ಮೆಲೆ ಉಕ್ಕುತ್ತೀಯ’: ಸೋನು ಗೌಡ ವ್ಯಕ್ತಿತ್ವವನ್ನು ಈ ರೀತಿ ಬಣ್ಣಿಸಿದ ಗುರೂಜಿ
Image
Aryavardhan Guruji: ಬದಲಾಯ್ತು ಗುರೂಜಿ ಗೆಟಪ್​; ಬಿಗ್​ ಬಾಸ್​ ಮನೆಯಲ್ಲಿ ಈ ಪರಿ ಚೇಂಜ್​ ಆದ ಆರ್ಯವರ್ಧನ್​
Image
ಆರ್ಯವರ್ಧನ್​ ಗುರೂಜಿ ಕುಟುಂಬದ ಆಸ್ತಿ 5 ಸಾವಿರ ಕೋಟಿ ರೂಪಾಯಿ; ಶಾಕ್​ ಆದ ಸ್ಪರ್ಧಿಗಳು
Image
Aryavardhan Guruji: ಈ ಬಾರಿ ‘ಬಿಗ್ ಬಾಸ್​’ ಗೆಲ್ಲೋರು ಯಾರು? ಮೊದಲ ದಿನವೇ ಭವಿಷ್ಯ ನುಡಿದ ಆರ್ಯವರ್ಧನ್​ ಗುರೂಜಿ

‘ಬಿಗ್​ ಬಾಸ್​ ಕನ್ನಡ ಒಟಿಟಿ’ ಫಿನಾಲೆ ದಿನ ಆರ್ಯವರ್ಧನ್​ ಗುರೂಜಿ ಅವರ ಮಗಳು ಕೂಡ ವೇದಿಕೆಗೆ ಬಂದಿಳು. ಆಕೆಯನ್ನು ನೋಡಿ ಗುರೂಜಿ ಸಖತ್​ ಎಮೋಷನಲ್​ ಆದರು. ವೇದಿಕೆ ಮೇಲೆ ಸುದೀಪ್​ ಜತೆ ನಿಂತುಕೊಂಡ ಮಗಳನ್ನು ನೋಡಿ ಅವರು ತುಂಬ ಹೆಮ್ಮೆಪಟ್ಟುಕೊಂಡರು. ‘ನನ್ನ ಮಾತುಗಳನ್ನು ಅರ್ಥ ಮಾಡಿಕೊಂಡ ಸುದೀಪ್​ ಸರ್​ಗೆ ನಾನು ಧನ್ಯವಾದ ಹೇಳುತ್ತೇನೆ. ವೋಟ್​ ಹಾಕಿದವರಿಗೆ ಜೀವನ ಪೂರ್ತಿ ಚಿರಋಣಿ ಆಗಿರುತ್ತೇನೆ’ ಎಂದು ಆರ್ಯವರ್ಧನ್​ ಗುರೂಜಿ ಅವರು ಎಮೋಷನಲ್​ ಆಗಿ ಮಾತನಾಡಿದರು. ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ಕ್ಕೆ ಆಯ್ಕೆ ಆಗಿರುವ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:14 pm, Fri, 16 September 22

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​