Bigg Boss OTT: ‘ಬಿಗ್​ ಬಾಸ್​ ಒಟಿಟಿ’ ಲಾಭವೋ ನಷ್ಟವೋ? ಇನ್ನೊಂದು ಸೀಸನ್​ ಬರೋದು ಅನುಮಾನ

ಸೆನ್ಸಾರ್​ ವಿಚಾರದಲ್ಲಿ ಹೆಚ್ಚೇನೂ ಮಡಿವಂತಿಕೆ ಇಲ್ಲದೇ ಈ ಶೋ ಪ್ರಸಾರ ಆಯಿತು. ತುಂಬ ಬೋಲ್ಡ್​ ಎನಿಸುವಂತಹ ಟಾಸ್ಕ್​ಗಳನ್ನು ನೀಡಲಾಗಿತ್ತು.

Bigg Boss OTT: ‘ಬಿಗ್​ ಬಾಸ್​ ಒಟಿಟಿ’ ಲಾಭವೋ ನಷ್ಟವೋ? ಇನ್ನೊಂದು ಸೀಸನ್​ ಬರೋದು ಅನುಮಾನ
ಬಿಗ್ ಬಾಸ್ ಒಟಿಟಿ
Follow us
| Updated By: ಮದನ್​ ಕುಮಾರ್​

Updated on: Sep 21, 2022 | 7:00 AM

ಬಿಗ್​ ಬಾಸ್ (Bigg Boss)​ ರಿಯಾಲಿಟಿ ಶೋ ವರ್ಷದಿಂದ ವರ್ಷಕ್ಕೆ ಹೊಸ ಸ್ವರೂಪ ಪಡೆದುಕೊಂಡು ಸಾಗುತ್ತಿದೆ. ಹಿಂದಿ ಬಿಗ್​ ಬಾಸ್​ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಬೇರೆ ಬೇರೆ ಥೀಮ್​ಗಳನ್ನು ಪರಿಚಯಿಸಲಾಗುತ್ತಿದೆ. ಕಳೆದ ವರ್ಷ ಮೊದಲ ಬಾರಿಗೆ ‘ಬಿಗ್​ ಬಾಸ್​ ಹಿಂದಿ ಒಟಿಟಿ’ (Bigg Boss OTT) ಆವೃತ್ತಿ ಆರಂಭ ಮಾಡಲಾಯಿತು. ಅಲ್ಲಿಯವರೆಗೆ ಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ಈ ಜನಪ್ರಿಯ ರಿಯಾಲಿಟಿ ಶೋ ಮೊದಲ ಬಾರಿಗೆ 2021ರಲ್ಲಿ ಒಟಿಟಿಯಲ್ಲಿ ಬಿತ್ತರವಾಯಿತು. ಅದನ್ನು ಕರಣ್​ ಜೋಹರ್​ (Karan Johar) ಅವರು ನಿರೂಪಣೆ ಮಾಡಿದ್ದರು. ಆದರೆ ಅದರ ಎರಡನೇ ಸೀಸನ್​ ಬರುತ್ತದೆ ಎಂದು ಕಾದು ಕುಳಿತಿದ್ದ ವೀಕ್ಷಕರಿಗೆ ಬೇಸರ ಆಗುವಂತಹ ಸುದ್ದಿ ಕೇಳಿಬಂದಿದೆ. ‘ಬಿಗ್​ ಬಾ​ಸ್​ ಹಿಂದಿ ಒಟಿಟಿ ಸೀಸನ್​ 2’ ಪ್ರಸಾರ ಆಗುವುದು ಅನುಮಾನ ಎನ್ನಲಾಗಿದೆ.

ಟಿವಿ ಆವೃತ್ತಿಗೆ ಹೋಲಿಸಿದರೆ ಒಟಿಟಿಯಲ್ಲಿ ಪ್ರಸಾರವಾದ ಬಿಗ್​ ಬಾಸ್​ ಬೇರೆಯದೇ ರೀತಿ ಇತ್ತು. ಭಿನ್ನ ಮನಸ್ಥಿತಿಯ ಅನೇಕ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು. ಸೆನ್ಸಾರ್​ ವಿಚಾರದಲ್ಲಿ ಹೆಚ್ಚೇನೂ ಮಡಿವಂತಿಕೆ ಇಲ್ಲದೇ ಈ ಶೋ ಪ್ರಸಾರ ಆಯಿತು. ತುಂಬ ಬೋಲ್ಡ್​ ಎನಿಸುವಂತಹ ಟಾಸ್ಕ್​ಗಳನ್ನು ನೀಡಲಾಗಿತ್ತು. ಸ್ಪರ್ಧಿಗಳು ಕೂಡ ಯಾವುದೇ ಮುಲಾಜಿಲ್ಲದೇ ಅದರಲ್ಲಿ ಭಾಗವಹಿಸಿದ್ದರು. ಏನೇ ಸರ್ಕಸ್​ ಮಾಡಿದರೂ ನಿರೀಕ್ಷಿತ ಪ್ರಮಾಣದಲ್ಲಿ ಟಿಆರ್​ಪಿ ಗಿಟ್ಟಿಸಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.

ಅಂದುಕೊಂಡ ರೀತಿಯಲ್ಲಿ ವೀವ್ಸ್​ ಸಿಕ್ಕಿಲ್ಲ ಎಂಬ ಕಾರಣಕ್ಕೆ ಮತ್ತೊಮ್ಮೆ ಒಟಿಟಿ ಸೀಸನ್​ ಆರಂಭಿಸಲು ನಿರ್ಮಾಪಕರು ಧೈರ್ಯ ತೋರಿಸುತ್ತಿಲ್ಲ. ಹಾಗಾಗಿ ‘ಬಿಗ್​ ಬಾಸ್​ ಒಟಿಟಿ 2’ ಶುರುವಾಗುವುದಿಲ್ಲ ಎಂಬ ಮಾಹಿತಿ ಕೇಳಿಬಂದಿದೆ. ಅದರ ಬದಲು ನೇರವಾಗಿ ಟಿವಿ ಸೀಸನ್​​ ಶುರುವಾಗಲಿದೆ. ಅದನ್ನು ಸಲ್ಮಾನ್​ ಖಾನ್​ ಅವರು ನಡೆಸಿಕೊಡಲಿದ್ದಾರೆ.

ಇದನ್ನೂ ಓದಿ
Image
Bigg Boss Kannada OTT Finale: ಜಯಶ್ರೀ, ಜಶ್ವಂತ್​, ಸೋಮಣ್ಣ, ಸೋನು ಗೌಡ ಪಾಲಿಗೆ ಅಂತ್ಯವಾಯ್ತು ಬಿಗ್​ ಬಾಸ್​ ಪಯಣ
Image
Roopesh Shetty: ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋನಲ್ಲಿ ಟಾಪರ್​ ಆದ ರೂಪೇಶ್​ ಶೆಟ್ಟಿಗೆ 5 ಲಕ್ಷ ರೂ. ಬಹುಮಾನ
Image
BBK9 ಶೋನಲ್ಲಿ ಸ್ಪರ್ಧಿಸುವ ಚಾನ್ಸ್​ ಪಡೆದ ರಾಕೇಶ್​, ರೂಪೇಶ್​, ಆರ್ಯವರ್ಧನ್​, ಸಾನ್ಯಾ ಐಯ್ಯರ್​
Image
Aryavardhan Guruji: ಬಿಗ್​ ಬಾಸ್​ ಕನ್ನಡ 9ನೇ ಸೀಸನ್​ಗೆ ಎಂಟ್ರಿ ಪಡೆದ ಮೊದಲ ಸ್ಪರ್ಧಿ ಆರ್ಯವರ್ಧನ್​ ಗುರೂಜಿ

ದಿನದಿಂದ ದಿನಕ್ಕೆ ಒಟಿಟಿ ವ್ಯಾಪ್ತಿ ಹಿರಿದಾಗುತ್ತಿದೆ. ಹೊಸ ಹೊಸ ಕಾರ್ಯಕ್ರಮಗಳನ್ನು ಪರಿಚಯಿಸುವಲ್ಲಿ, ಹೊಸ ಸಿನಿಮಾಗಳನ್ನು ಕೊಂಡುಕೊಳ್ಳುವಲ್ಲಿ, ನೂತನ ವೆಬ್​ ಸೀರಿಸ್​ಗಳನ್ನು ನಿರ್ಮಾಣ ಮಾಡುವಲ್ಲಿ ಒಟಿಟಿ ಸಂಸ್ಥೆಗಳ ನಡುವೆ ಭಾರಿ ಪೈಪೋಟಿ ಇದೆ. ಆ ಕಾರಣದಿಂದಲೇ ವೂಟ್​ ಸೆಲೆಕ್ಟ್​ನಲ್ಲಿ ‘ಬಿಗ್​ ಬಾಸ್​ ಹಿಂದಿ ಒಟಿಟಿ’ ಮೊದಲ ಸೀಸನ್​ ಪ್ರಸಾರವಾಗಿತ್ತು. ದಿವ್ಯಾ ಅಗರ್​ವಾಲ್​, ಪ್ರತೀಕ್​ ಸೆಹಜ್ಪಾಲ್​, ರಾಕೇಶ್​ ಬಾಪಟ್​, ಶಮಿತಾ ಶೆಟ್ಟಿ, ಉರ್ಫಿ ಜಾವೇದ್​, ನೇಹಾ ಬಾಸಿನ್​, ರಿಧಿಮಾ ಪಂಡಿತ್​, ಅಕ್ಷರಾ ಸಿಂಗ್​ ಮುಂತಾದವರು ಭಾಗವಹಿಸಿದ್ದರು. ದಿವ್ಯಾ ಅಗರ್​ವಾಲ್​ ಅವರು ವಿನ್ನರ್​ ಆಗಿ ಹೊರಹೊಮ್ಮಿದರು. ಆ ಶೋನಲ್ಲಿ ಭಾಗವಹಿಸಿದ ಬಳಿಕ ಉರ್ಫಿ ಜಾವೇದ್​ ಅವರ ಖ್ಯಾತಿ ದುಪ್ಪಟ್ಟಾಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ