AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada OTT Finale: ಜಯಶ್ರೀ, ಜಶ್ವಂತ್​, ಸೋಮಣ್ಣ, ಸೋನು ಗೌಡ ಪಾಲಿಗೆ ಅಂತ್ಯವಾಯ್ತು ಬಿಗ್​ ಬಾಸ್​ ಪಯಣ

Sonu Srinivas Gowda | BBK OTT: ‘ಬಿಗ್ ಬಾಸ್​ ಕನ್ನಡ ಒಟಿಟಿ’ ಫಿನಾಲೆಯಲ್ಲಿದ್ದ 8 ಜನರ ಪೈಕಿ 4 ಸ್ಪರ್ಧಿಗಳು ಔಟ್​ ಆಗಿದ್ದಾರೆ. ಇನ್ನುಳಿದ ನಾಲ್ಕು ಜನರು ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದಾರೆ.

Bigg Boss Kannada OTT Finale: ಜಯಶ್ರೀ, ಜಶ್ವಂತ್​, ಸೋಮಣ್ಣ, ಸೋನು ಗೌಡ ಪಾಲಿಗೆ ಅಂತ್ಯವಾಯ್ತು ಬಿಗ್​ ಬಾಸ್​ ಪಯಣ
ಸೋಮಣ್ಣ, ಜಯಶ್ರೀ, ಜಶ್ವಂತ್, ಸೋನು ಗೌಡ, ಸುದೀಪ್​
TV9 Web
| Edited By: |

Updated on:Sep 17, 2022 | 12:11 AM

Share

ಬಿಗ್​ ಬಾಸ್​ ರಿಯಾಲಿಟಿ ಶೋ ಗೆಲ್ಲಬೇಕು ಅಂಥಲೇ ಎಲ್ಲರೂ ದೊಡ್ಮನೆಗೆ ಕಾಲಿಡುತ್ತಾರೆ. ಆದರೆ ಎಲ್ಲರಿಗೂ ಗೆಲ್ಲುವ ಅದೃಷ್ಟ ಇರುವುದಿಲ್ಲ. ವೀಕ್ಷಕರಿಂದ ಕಡಿಮೆ ವೋಟ್​ ಪಡೆದರೆ ಹಿನ್ನಡೆ ಆಗುತ್ತದೆ. ಇದೇ ಮೊದಲ ಬಾರಿಗೆ ಒಟಿಟಿಯಲ್ಲಿ ಕನ್ನಡದ ‘ಬಿಗ್​ ಬಾಸ್’ (Bigg Boss Kannada OTT) ಶೋ ಪ್ರಸಾರ ಆಯಿತು. ಈ ಶೋನಲ್ಲಿ ಟಾಪ್​ 4 ಸ್ಥಾನ ಪಡೆದವರಿಗೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ಕ್ಕೆ ಎಂಟ್ರಿ ನೀಡುವ ಚಾನ್ಸ್​ ಸಿಗುತ್ತದೆ ಎಂದು ಮೊದಲೇ ಹೇಳಲಾಗಿತ್ತು. ಆದರೆ ಫಿನಾಲೆ ವಾರದವರೆಗೂ ಬಂದ 8 ಜನರ ಪೈಕಿ ನಾಲ್ವರು ಕೊನೇ ಕ್ಷಣದಲ್ಲಿ ಮುಗ್ಗರಿಸಿದ್ದಾರೆ. ಜಯಶ್ರೀ ಆರಾಧ್ಯ (Jayashree Aradhya), ಜಶ್ವಂತ್​ ಬೋಪಣ್ಣ, ಸೋಮಣ್ಣ ಮಾಚಿಮಾಡ ಮತ್ತು ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಫಿನಾಲೆ ವಾರದಲ್ಲಿ ಔಟ್​ ಆಗಿದ್ದಾರೆ. ಇನ್ನುಳಿದ ಸ್ಪರ್ಧಿಗಳಾದ ಆರ್ಯವರ್ಧನ್​ ಗುರೂಜಿ, ರೂಪೇಶ್​ ಶೆಟ್ಟಿ, ರಾಕೇಶ್​ ಅಡಿಗ ಮತ್ತು ಸಾನ್ಯಾ ಅಯ್ಯರ್​ ಅವರು ‘ಬಿಗ್​​ ಬಾಸ್​ ಕನ್ನಡ ಸೀಸನ್​ 9’ಕ್ಕೆ ಹೋಗುವ ಚಾನ್ಸ್​ ಪಡೆದಿದ್ದಾರೆ.

ಜಯಶ್ರೀ ಆರಾಧ್ಯ ಅವರು ಸತತ 5 ವಾರವೂ ನಾಮಿನೇಟ್​ ಆಗಿದ್ದರು. ಆದರೆ ವೀಕ್ಷಕರ ವೋಟ್​ ಪಡೆಯುವ ಮೂಲಕ ತಮ್ಮ ಸ್ಥಾನ ಉಳಿಸಿಕೊಂಡಿದ್ದರು. ಹಾಗಂತ ಫಿನಾಲೆ ವಾರದಲ್ಲಿ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ವೋಟ್​ ಸಿಕ್ಕಿಲ್ಲ. ಹಾಗಾಗಿ ಅವರ ಬಿಗ್​ ಬಾಸ್​ ಪಯಣ ಅಂತ್ಯವಾಗಿದೆ. ಹೆಚ್ಚೇನೂ ಬೇಸರ ಇಲ್ಲದೇ ಅವರು ದೊಡ್ಮನೆಯಿಂದ ಹೊರಬಂದಿದ್ದಾರೆ.

ಕನ್ನಡ ಸರಿಯಾಗಿ ಬರಲ್ಲ ಎಂಬ ಕಾರಣಕ್ಕೆ ಜಶ್ವಂತ್​ ಬೋಪಣ್ಣ ಅವರನ್ನು ವೀಕ್ಷಕರು ಹೆಚ್ಚಾಗಿ ಇಷ್ಟಪಟ್ಟಿಲ್ಲ ಎನಿಸುತ್ತದೆ. ಆದರೂ ಕೂಡ ಅವರು ಫಿನಾಲೆ ವಾರದವರೆಗೂ ಪೈಪೋಟಿ ನೀಡಿದರು. ಅಂತಿಮವಾಗಿ ಅವರು ಕೂಡ ಹೆಚ್ಚಿನ ವೋಟ್​ ಪಡೆಯದ ಕಾರಣ ಬಿಗ್​ ಬಾಸ್​ ಆಟ ಮುಗಿಸಿದ್ದಾರೆ. ಅದೇ ರೀತಿ ಸೋಮಣ್ಣ ಮಾಚಿಮಾಡ ಕೂಡ ಕೊನೇ ವಾರದಲ್ಲಿ ಔಟ್​ ಆಗಿದ್ದಾರೆ. ದೊಡ್ಮನೆಯಲ್ಲಿ ಹೆಚ್ಚು ಮನರಂಜನೆ ನೀಡಲು ಅವರಿಗೆ ಸಾಧ್ಯವಾಗಿಲ್ಲ. ಅದೇ ಕಾರಣಕ್ಕಾಗಿ ಅವರಿಗೆ ಹೆಚ್ಚು ವೋಟ್​ ಸಿಕ್ಕಿಲ್ಲದೇ ಇರಬಹುದು.

ಇದನ್ನೂ ಓದಿ
Image
BBK9 ಶೋನಲ್ಲಿ ಸ್ಪರ್ಧಿಸುವ ಚಾನ್ಸ್​ ಪಡೆದ ರಾಕೇಶ್​, ರೂಪೇಶ್​, ಆರ್ಯವರ್ಧನ್​, ಸಾನ್ಯಾ ಐಯ್ಯರ್​
Image
Aryavardhan Guruji: ಬಿಗ್​ ಬಾಸ್​ ಕನ್ನಡ 9ನೇ ಸೀಸನ್​ಗೆ ಎಂಟ್ರಿ ಪಡೆದ ಮೊದಲ ಸ್ಪರ್ಧಿ ಆರ್ಯವರ್ಧನ್​ ಗುರೂಜಿ
Image
Bigg Boss Kannada OTT Finale: ಸಾನ್ಯಾ ಅಯ್ಯರ್​ಗೆ ಸಾನ್ಯಾ ಶೆಟ್ಟಿ ಅಂತ ಕರೆದರೆ ಆಹಾ ಎಷ್ಟೊಂದು ಖುಷಿ; ಇಲ್ಲಿದೆ ವಿಡಿಯೋ ಸಾಕ್ಷಿ
Image
Bigg Boss Kannada OTT: ಕೊನೇ ದಿನಕ್ಕಾಗಿ ಸಾನ್ಯಾ ಐಯ್ಯರ್​-ಸೋನು​ ಗೌಡ ನಡುವೆ ಮೇಕಪ್​ ಪೈಪೋಟಿ

ವೈರಲ್​ ಹುಡುಗಿ ಸೋನು ಶ್ರೀನಿವಾಸ್​ ಗೌಡ ಅವರು ಕೊನೇ ಹಂತದವರೆಗೂ ಆತ್ಮವಿಶ್ವಾಸ ಉಳಿಸಿಕೊಂಡಿದ್ದರು. ಫೈನಲ್​ ರೌಂಡ್​ನಲ್ಲಿ ಅವರ ಮತ್ತು ಸಾನ್ಯಾ ಐಯ್ಯರ್​ ನಡುವೆ ಹಣಾಹಣಿ ನಡೆಯಿತು. ಕಡೆಗೂ ಸೋನು ಗೌಡ ಅವರಿಗೆ ವಿಜಯಲಕ್ಷ್ಮಿ ಒಲಿಯಲಿಲ್ಲ. ಟಿವಿ ಸೀಸನ್​ಗೆ ಹೋಗಬೇಕು ಎಂದುಕೊಂಡಿದ್ದ ಅವರು ಕನಸು ಚೂರಾಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:11 am, Sat, 17 September 22

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ
ಚಂದನ್ ಹತ್ಯೆ: ಮೊಬೈಲ್‌ನಲ್ಲಿ ಮಗನ ಅಂತಿಮ ದರ್ಶನ ನೋಡಿ ಕಣ್ಣೀರಿಟ್ಟ ತಂದೆ