Jashwanth Bopanna: ‘ಇದು ಬೆರಳು, ತುಟಿ ಅಂತ ಸಾನ್ಯಾ ಕನ್ನಡ ಕಲಿಸಿದ್ರು’; ಬಿಗ್ ಬಾಸ್ನಿಂದ ಬಂದ ಜಶ್ವಂತ್ ಫಸ್ಟ್ ರಿಯಾಕ್ಷನ್
Bigg Boss Kannada OTT Finale: ಸಾನ್ಯಾ ಐಯ್ಯರ್ ಹಾಗೂ ಗರ್ಲ್ಫ್ರೆಂಡ್ ನಂದಿನಿ ಬಗ್ಗೆ ಜಶ್ವಂತ್ ಬೋಪಣ್ಣ ಮಾತನಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋ ಮುಗಿಸಿ ಹೊರಬಂದ ಅವರ ಫಸ್ಟ್ ರಿಯಾಕ್ಷನ್ ಇಲ್ಲಿದೆ..
‘ಬಿಗ್ ಬಾಸ್ ಕನ್ನಡ ಒಟಿಟಿ ಶೋ’ (Bigg Boss Kannada OTT) ಅಂತ್ಯವಾಗಿದೆ. ಫಿನಾಲೆ ವಾರದವರೆಗೂ ಪೈಪೋಟಿ ನೀಡುವಲ್ಲಿ ಜಶ್ವಂತ್ ಬೋಪಣ್ಣ (Jashwanth Bopanna) ಅವರು ಯಶಸ್ವಿ ಆಗಿದ್ದಾರೆ. ಅವರಿಗೆ ಸರಿಯಾಗಿ ಕನ್ನಡ ಬರಲ್ಲ ಎಂಬುದು ಅನೇಕರ ತಕರಾರು ಆಗಿತ್ತು. ಆ ಕಾರಣಕ್ಕಾಗಿಯೇ ಅವರನ್ನು ಕೆಲವು ಬಾರಿ ನಾಮಿನೇಟ್ ಮಾಡಲಾಗಿತ್ತು. ಜಶ್ವಂತ್ಗೆ ಕನ್ನಡ ಕಲಿಸಬೇಕು ಎಂದು ಸಾನ್ಯಾ ಐಯ್ಯರ್ (Sanya Iyer) ಅವರು ಪ್ರಯತ್ನಿಸಿದ್ದರು. ‘ಎಲ್ಲರೂ ನನ್ನ ಕನ್ನಡ ಕೇಳಿ ನಗುತ್ತಿದ್ದರು. ಆದರೆ ಸಾನ್ಯಾ ಸರಿಯಾಗಿ ಕಲಿಸುವ ಪ್ರಯತ್ನ ಮಾಡಿದರು. ಇದು ಬೆರಳು, ಇದು ತುಟಿ ಅಂತ ವಿವರಿಸಿ ಹೇಳಿದ್ರು’ ಎಂದಿದ್ದಾರೆ ಜಶ್ವಂತ್ ಬೋಪಣ್ಣ. ಅದೇ ರೀತಿ ಗರ್ಲ್ಫ್ರೆಂಡ್ ನಂದಿನಿ ಬಗ್ಗೆಯೂ ಅವರು ಮಾತನಾಡಿದ್ದಾರೆ. ಬಿಗ್ ಬಾಸ್ ಮುಗಿಸಿ ಹೊರಬಂದ ಅವರ ಫಸ್ಟ್ ರಿಯಾಕ್ಷನ್ ಇಲ್ಲಿದೆ..
Published on: Sep 17, 2022 03:36 PM
Latest Videos